ಹೀನಾಯ ಸೋಲಿನ ಬಳಿಕ ಅಚ್ಚರಿಯ ಹೇಳಿಕೆ ಕೊಟ್ಟ ನಾಯಕ ವಿರಾಟ್ ಕೊಹ್ಲಿ, ಏನಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಹು ನೀರಿಕ್ಷೀತ ಐಪಿಎಲ್ ನ ಎರಡನೇ ಚರಣದಲ್ಲಿ ಆರ್ಸಿಬಿ ಅತ್ಯಂತ ಕೆಟ್ಟ ಆರಂಭ ಕಂಡಿದೆ. ಮೊದಲ ಪಂದ್ಯದಲ್ಲೇ ಅತ್ಯಂತ ಕಳಪೆ ಪ್ರದರ್ಶನ ನೀಡಿ, ಅಸಂಖ್ಯಾತ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಭಾರಿಯಾದರೂ ಐಪಿಎಲ್ ನ ಕಪ್ ನ್ನ ನಾಯಕ ವಿರಾಟ್ ಕೊಹ್ಲಿ ಎತ್ತಿ ಹಿಡಿಯುತ್ತಾರೆಂಬ ನೀರಿಕ್ಷೆಗಳು ಕುಸಿಯಲಾರಂಭಿಸಿವೆ. ಇತ್ತ ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿದ್ದ ಕೆಕೆಆರ್ ತಂಡ ಆರ್ಸಿಬಿ ತಂಡವನ್ನ ಮಣಿಸಿ, ಆತ್ಮವಿಶ್ವಾಸ ಹೆಚ್ಚು ಗಳಿಸಿದ್ದಲ್ಲದೇ, ರನ್ ರೇಟ್ ಸಹ ಉತ್ತಮ ಪಡಿಸಿಕೊಂಡಿದೆ‌.

ಮೊದಲು ಬ್ಯಾಟಿಂಗ್ ಗೆ ಇಳಿದ ಆರ್ಸಿಬಿ ಒಂದು ಹಂತದಲ್ಲಿ ಉತ್ತಮ ಸ್ಥಿತಿಯಲ್ಲಿತ್ತು. ಆರು ಓವರ್ ಗಳಲ್ಲಿ 41 ರನ್ ಗಳಿಸಿದ್ದ ಆರ್ಸಿಬಿ ನಂತರ ಇಪ್ಪತ್ತು ರನ್ ಗಳಿಸುವದೊರಳಗೆ ಪ್ರಮುಖ ಐದು ವಿಕೆಟ್ ಕಳೆದುಕೊಂಡಿತು. ಯಾವೊಬ್ಬ ಪ್ರಮುಖ ಬ್ಯಾಟ್ಸಮನ್ ಸಹ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲಲಿಲ್ಲ. ಹೀಗಾಗಿ 92 ರನ್ ಗೆ ಆರ್ಸಿಬಿ ಆಲೌಟ್ ಆಗಬೇಕಾಯಿತು. ನಂತರ ಬ್ಯಾಟಿಂಗ್ ಗೆ ಇಳಿದ ಕೆಕೆಆರ್ ತಂಡ ಈ ಗುರಿಯನ್ನ ಹತ್ತು ಓವರ್ ಗಳೊಳಗೆ ಮುಗಿಸಿತು.

ಪಂದ್ಯ ಮುಗಿದ ನಂತರ ಮಾತನಾಡಿದ ನಾಯಕ ವಿರಾಟ್, ನಮ್ಮ ಸೋಲಿಗೆ ಬ್ಯಾಟ್ಸಮನ್ ಗಳೇ ಕಾರಣ. ಪ್ರಮುಖ ಬ್ಯಾಟ್ಸಮನ್ ಗಳು ಅವಸರ ಮಾಡದೇ, ಕೊಂಚ ಕ್ರೀಸ್ ನಲ್ಲಿದ್ದರೇ, ನಾವು ಉತ್ತಮ ಮೊತ್ತ ಕಲೆ ಹಾಕಬಹುದಿತ್ತು. ಆದರೇ ಯಾವೊಬ್ಬ ಬ್ಯಾಟ್ಸಮನ್ ಸಹ ಈ ಕೆಲಸ ಮಾಡಲಿಲ್ಲ. ಇದು ನಮ್ಮ ಬ್ಯಾಟ್ಸಮನ್ ಗಳಿಗೆ ಎಚ್ಚರಿಕೆಯ ಕರೆಘಂಟೆಯಾಗಿದೆ. ಹೀಗೆ ಮುಂದುವರೆದರೇ ಟ್ರೋಫಿ ನಮ್ಮ ಕೈಯಿಂದ ದೂರ ಹೋಗಬಹುದು ಎಂಬ ಎಚ್ಚರಿಕೆ ಸಹ ನೀಡಿದ್ದಾರೆ. ಮುಂದಿನ ಪಂದ್ಯದೊಳಗೆ ಎಲ್ಲಾ ತಪ್ಪುಗಳನ್ನು ತಿದ್ದಿಕೊಂಡು ಮತ್ತೆ ಗೆಲುವಿನ ಹಳಿಗೆ ಮರಳುತ್ತೇವೆ ಎಂಬ ಆತ್ಮವಿಶ್ವಾಸವನ್ನು ಸಹ ವ್ಯಕ್ತಪಡಿಸಿದ್ದಾರೆ‌.

ತಂಡದ ಆಯ್ಕೆಯಲ್ಲಿ ಎಡವಿದ್ದ ಆರ್ಸಿಬಿ, ಟಿಮ್ ಡೇವಿಡ್ ರವರನ್ನ ಆಯ್ಕೆ ಮಾಡದೇ ಎಡವಿತ್ತು. ಪದಾರ್ಪಣೆ ಮಾಡಿದ ಹಸರಂಗ, ಶೂನ್ಯಕ್ಕೆ ಔಟಾದರು. ಇನ್ನು ಕೆ.ಎಸ್.ಭರತ್ ಸಹ ಬಾಲಿಗೆ ಬ್ಯಾಟ್ ತಾಗಿಸಲು ತಿಣುಕಾಡುತ್ತಿದ್ದರು. ಸಿರಾಜ್, ಜೇಮಿಸನ್ ಸಹ ಲಯದಲ್ಲಿರಲಿಲ್ಲ. ಲೈನ್ ಎಂಡ್ ಲೆಂಗ್ತ್ ನಲ್ಲಿ ಸಂಪೂರ್ಣ ಎಡವಿದ್ದರು. ಹಾಗಾಗಿ ಆರ್ಸಿಬಿ ಮುಂದಿನ ಪಂದ್ಯದೊಳಗೆ ಲಯಕ್ಕೆ ಬರಬೇಕು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.