ಮತ್ತೊಂದು ಲೆವೆಲ್ ತಲುಪಿದ ರಶ್ಮಿಕಾ, ಮುಂಬೈಗೆ ಹೋದ್ಮೇಲೆ ಪ್ರಚಾರಕ್ಕಾಗಿ ಮಾಡಿದ ಕೆಲಸ ಏನು ಗೊತ್ತೇ?? ಇವೆಲ್ಲ ಕಾಮನ್ ಅಂತೇ.

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ನಟಿಸಿ ನಂತರ ತೆಲುಗು ಚಿತ್ರರಂಗದ ಮೂಲಕ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಮಿಂಚುತ್ತಿರುವ ನಮ್ಮ ಕೊಡಗಿನ ಕುವರಿ ರಶ್ಮಿಕ ಮಂದಣ್ಣ. ಹೌದು ಸ್ನೇಹಿತರ ರಕ್ಷಿತ್ ಶೆಟ್ಟಿ ನಟನೆಯ ಕಿರಿಕ್ ಪಾರ್ಟಿ ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ ಯನ್ನು ಆರಂಭಿಸಿದ ರಶ್ಮಿಕ ಮಂದಣ್ಣ ಅವರು ಈಗ ಬಾಲಿವುಡ್ ಚಿತ್ರರಂಗಕ್ಕೆ ಬಂದು ನಿಂತಿದ್ದಾರೆ. ಹೌದು ಸ್ನೇಹಿತರೆ ತೆಲುಗು ಚಿತ್ರರಂಗದ ಮೂಲಕ ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು ಪಡೆದು ಎಲ್ಲಾ ಭಾಷೆಯ ಚಿತ್ರರಂಗಗಳಲ್ಲಿ ಕೂಡ ಬಹುಬೇಡಿಕೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ದಕ್ಷಿಣ ಭಾರತದಲ್ಲಿ ಬಹುತೇಕ ಎಲ್ಲಾ ಭಾಷೆಯ ಚಿತ್ರ ಅರಣ್ಯಗಳಲ್ಲಿ ಕೂಡ ರಶ್ಮಿಕಾ ಮಂದಣ್ಣ ನವರು ಟಾಪ್ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ ಅವರು ಈಗ ಹಿಂದಿ ಭಾಷೆಯ ಬಾಲಿವುಡ್ ಚಿತ್ರರಂಗಕ್ಕೂ ಕೂಡ ಕಾಲಿಟ್ಟಿದ್ದಾರೆ. ರಶ್ಮಿಕ ಮಂದಣ್ಣ ಅವರು ಈಗಾಗಲೆ ಹಲವಾರು ಚಿತ್ರಗಳಿಗೆ ಸಹಿ ಹಾಕಿದ್ದು ಮುಂದಿನ ದಿನಗಳಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಹೆಸರನ್ನು ಮಾಡುವ ಎಲ್ಲಾ ಸಾಧ್ಯತೆಗಳಿವೆ. ಹೌದು ಸ್ನೇಹಿತರೆ ಇದಕ್ಕಾಗಿ ಅವರು ಪ್ರಚಾರವನ್ನು ಕೂಡ ಕಾಯ್ದಿಟ್ಟುಕೊಳ್ಳ ಬೇಕಾಗಿರುವುದು ಅಗತ್ಯವಾಗಿದೆ. ಇದೀಗ ಪ್ರಚಾರಕ್ಕಾಗಿ ರಶ್ಮಿಕ ಮಂದಣ್ಣ ದವರಿಗೆ ಮಾಡಿರುವ ಕೆಲಸ ಏನು ಗೊತ್ತಾ.

ಹೌದು ಸ್ನೇಹಿತರೇ ಬಾಲಿವುಡ್ ಹೀರೋಯಿನ್ ಗಳು ಪ್ರಚಾರಕ್ಕಾಗಿ ಒಂದು ತಂಡವನ್ನು ನೇಮಿಸಿ ಇಟ್ಟುಕೊಂಡಿರುತ್ತಾರೆ ಈಗ ಪ್ರಚಾರಕ್ಕಾಗಿ ರಶ್ಮಿಕ ಮಂದಣ್ಣ ನವರು ಕೂಡ ಒಂದು ಹೊಸ ಪಿಆರ್ ತಂಡವನ್ನು ನೇಮಿಸಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಮಾಜದಲ್ಲಿ ರಶ್ಮಿಕ ಮಂದಣ್ಣ ನವರ ಕುರಿತಂತೆ ಎಷ್ಟು ಒಳ್ಳೆಯ ವಿಷಯಗಳು ಓಡಾಡುತ್ತಿವೆ ಹಾಗೂ ಯಾರಾದರೂ ಹೆಸರನ್ನು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಕುರಿತಂತೆ ಅದಕ್ಕೆ ಪರಿಹಾರವನ್ನು ಕೂಡ ಸೂಚಿಸುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ರಶ್ಮಿಕ ಮಂದಣ್ಣ ಅವರ ಜನಪ್ರಿಯತೆಯನ್ನು ಜನರಲ್ಲಿ ಹೆಚ್ಚಿಸುವುದಕ್ಕಾಗಿ ತಂಡ ಕೆಲಸ ಮಾಡುತ್ತದೆ. ಇನ್ನು ರಶ್ಮಿಕ ಮಂದಣ್ಣ ನಟನೆಯ ಮಿಷನ್ ಮಜ್ನು ಹಾಗೂ ಅಮಿತಾಬಚ್ಚನ್ ಜೊತೆ ನಟಿಸಿರುವ ಗುಡ್ಬೈ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರದಲ್ಲಿ ಕೂಡ ರಶ್ಮಿಕ ಮಂದಣ್ಣ ಅವರು ಕಾಣಿಸಿಕೊಂಡಿದ್ದಾರೆ. ಇದು ಕೂಡ ಹಿಂದಿಯಲ್ಲಿ ಬಿಡುಗಡೆಯಾಗಲಿದೆ.