ಇನ್ನು ಚಿತ್ರೀಕರಣ ಮುಗಿಯುವ ಮುನ್ನವೇ ದಾಖಲೆ ಮೊತ್ತಲೇ ಹಣ ಬಾಚಿದ ಪುನೀತ್ ಜೇಮ್ಸ್, ಎಷ್ಟು ಕೋಟಿ ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜ ಕುಮಾರ್ ಅವರ ಸಿನಿಮಾಗಳು ಎಂದ್ರೆನೆ ಹಾಗೆ. ಅದರಲ್ಲಿ ಏನಾದರೂ ಹೊಸತನ ಇದ್ದೇ ಇರುತ್ತೆ. ಇನ್ನು ನಿರ್ದೇಶಕರುಗಳೂ ಕೂಡ ಅಪ್ಪು ಅವರಿಗೆ ಸೂಟ್ ಆಗುವ ರೀತಿಯಲ್ಲಿಯೇ ಕತೆಯನ್ನು ಕೂಡ ಹೇಳುವುದು ವಿಶೇಷ! ಹಾಗಾಗಿ ಪುನೀತ್ ಅವರ ಚಿತ್ರ ಯಾವಾಗಲೂ ಬಹು ನಿರೀಕ್ಷೆಯನ್ನು ಹುಟ್ಟುಹಾಕುತ್ತವೆ. ಪುನೀತ್ ಒಪ್ಪಿಕೊಂಡ ಸಿನಿಮಾ ಚಿತ್ರೀಕರಣ ಮುಗಿದು ಬಿಡುಗಡೆಯಾಗುವುದನ್ನೇ ಕಾಯುತ್ತಿರುತ್ತೆ ಅಭಿಮಾನಿ ಬಳಗ.

ಇನ್ನು ’ಯುವರತ್ನ’ ಚಿತ್ರದ ಯಶಸ್ಸಿನ ಬೆನ್ನಲ್ಲೇ ಅಪ್ಪುವಿನ ’ಜೇಮ್ಸ್’ ಸೆಟ್ಟೇರಿತ್ತು. ಕರೋನಾ ತಡೆ ನಿಯಮಗಳ ನಡುವೆಯೂ ಕೂಡ ಮೊದಲಹಂತದ ಚಿತ್ರೀಕರಣವನ್ನೂ ಮುಗಿಸಲಾಗಿದೆ. ಇನ್ನು ಈ ಚಿತ್ರದ ಚಿತ್ರೀಕರಣ ಮುಗಿಯುವುದಕ್ಕೂ ಮೊದಲೇ ಜೇಮ್ಸ್ ಚಿತ್ರದ ಸ್ಯಾಟಲೈಟ್ ಹಕ್ಕು ಮಾರಾಟವಾಗಿದೆ. ಇನ್ನೂ ಚಿತ್ರೀಕರಣವೇ ಮುಗಿಯದೇ ಇದ್ದರೂ ಅತೀಹೆಚ್ಚು ಬೆಲೆಗೆ ಸೇಲ್ ಆಗುರುವ ಚಿತ್ರ ಜೇಮ್ಸ್!

ಜೇಮ್ಸ್ ಚಿತ್ರದ ಸ್ಯಾಟಲೈಟ್ ಹಕ್ಕನ್ನು ಖರಿದೀಸಿದ್ದು ಸ್ಟಾರ್ ಸುವರ್ಣ ವಾಹಿನಿ. ಸುವರ್ಣ ವಾಹಿನಿ ಬರೋಬ್ಬರಿ 15 ಕೋಟಿ ರೂಪಾಯಿಗೆ ಸ್ಯಾಟಲೈಟ್ ಹಕ್ಕನ್ನು ಖರೀದಿಸಿದೆ. ಈ ಮೂಲಕ ಅತೀ ಹೆಚ್ಚು ಬೆಲೆಗೆ ಸೇಲ್ ಆದ ಪುನೀತ್ ರಾಜಕುಮಾರ್ ಚಿತ್ರ ಎನಿಸಿಕೊಂಡಿದೆ ಜೇಮ್ಸ್. ಇನ್ನು ಈ ಸಿನಿಮಾದ ಡಿಜಿಟಲ್ ಹಕ್ಕು ಹಾಘೂ ಡಬ್ಬಿಂಗ್ ರೈಟ್ಸ್ ಖರೀದಿಗೂ ಕೂಡ ಪೈಪೋಟಿ ನಡೆದಿದೆ ಎನ್ನಲಾಗುತ್ತಿದೆ. ಜೇತನ್ ಕುಮಾರ್ ನಿರ್ದೇಶನ ಹಾಗೂ ಪುನೀತ್ ನಟನೆಯ ಮೊದಲ ಚಿತ್ರ ಜೇಮ್ಸ್. ಜೇಮ್ಸ್ ಚಿತ್ರದ ನಾಯಕಿಯಾಗಿ ಪ್ರಿಯಾ ಆನಂದ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ರಂಗಾಯಣ ರಘು, ಅನು ಪ್ರಭಾಕರ ಮೊದಲಾದ ಅನುಭವಿ ತಾರಾಗಣವೇ ಈ ಚಿತ್ರದಲ್ಲಿದೆ. ಹಾಗಾಗಿ ಈ ಚಿತ್ರ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದ್ದಂತೂ ಸುಳ್ಳಲ್ಲ.