ದರ್ಶನ್ ರವರು ಉಮಾಪತಿ ರವರನ್ನು ದೂರ ಇತ್ತ ಮೇಲೆ, ಫಿಲಂ ಸಿಟಿ ನಿರ್ಮಾಣ ಮಾಡಿ ಎಂದು ಹೇಳಿದ ಟಾಪ್ ನಟ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಿನಿಮಾ ಅಂದ್ರೆ ಅದರಲ್ಲಿ ನಾನಾ ಬಗೆಯ ಕಥೆಗಳಿರುತ್ತೆ, ಆ ಕಥೆಗಳಿಗೆ ತಕ್ಕ ಹಾಗೆ ಚಿತ್ರೀಕರಣ ಮಾಡಲು ಸೂಕ್ತ ಸ್ಥಳವೂ ಕೂಡ ಬೇಕಾಗತ್ತೆ. ಕೆಲವು ಇನ್ ಡೋರ್ ಶೂರ್ ಆದರೆ ಇನ್ನು ಕೆಲವು ಔಟ್ ಡೋರ್. ಅಂದರೆ ಕೆಲವು ಸನ್ನಿವೇಶಗಳನ್ನು ಸೆಟ್ ಹಾಕಿ ಅದರಲ್ಲಿಯೇ ಚಿತ್ರೀಕರಣ ಮಾಡಲಾಗುತ್ತೆ. ಇನ್ನು ಕೆಲವು ದೇಶ ವಿದೇಶಗಳ ಬೇರೆ ಬೇರೆ ಸ್ಥಳಗಳಿಗೆ ಹೋಗಿ ಚಿತ್ರೀಕರಣ ಮಾಡುವುದು. ಆದರೆ ಇನ್ನು ಈ ಸೆಟ್ ಹಾಕಿ ಇನ್ ಡೋರ್ ಶೂಟ್ ಮಾಡೋದು ಇದ್ಯಲ್ಲ. ಇದಕ್ಕಾಗಿ ನಾವಿನ್ನು ರಾಮೋಜಿ ರಾವ್ ಫಿಲ್ಮ್ ಸಿಟಿಯನ್ನೇ ಅವಲಂಬಿಸಬೇಕಾಗಿಲ್ಲ!

ಹೌದು ನಿರ್ಮಾಪಕ ಉಮಾಪತಿ ಕನ್ನಡ ನೆಲದಲ್ಲೇ ಫಿಲ್ ಸಿಟಿಯೊಂದನ್ನು ನಿರ್ಮಾಣ ಮಾಡುವತ್ತ ಲಕ್ಷ ವಹಿಸಿದ್ದಾರೆ. ಹೆಬ್ಬುಲಿ, ರಾಬರ್ಟ್ ಮೊದಲಾದ ಹಿಟ್ ಚಿತ್ರಗಳನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿ ಕನ್ನಡ ಚಿತ್ರರಂಗಕ್ಕೆ ಒಬ್ಬ ಸಂಪನ್ಮೂಲ ನಿರ್ಮಾಪಕ ಎನಿಸಿದ್ದಾರೆ ಉಮಾಪತಿ. ಇದೀಗ ಸಾಕಷ್ಟು ವಿಸ್ತೀರ್ಣ ಹೊಂದಿರುವ ಜಾಗದಲ್ಲಿ ಈಗಾಗಲೇ ಕಾಂಪೊಂಡ್ ನಿರ್ಮಿಸಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇನ್ನು ಉಮಾಪತಿಯವರಿಗೆ ಈ ಆಲೋಚನೆ ಬರಲು ಕಾರಣ ಕಿಚ್ಚ ಸುದೀಪ್ ಅಂತೆ!

ಕಿಚ್ಚ ಸುದೀಪ್ ಅವರು ಉಮಾಪತಿಯವರ ಬಳಿ ನಿಮ್ಮಲ್ಲಿ ಲ್ಯಾಂಡ್ ಇದೆ ಒಂದು ಸುಸಜ್ಜಿತ ಸ್ಟುಡಿಯೋ ನಿರ್ಮಿಸಿ, ತಾನು ಐಡಿಯಾ ಕೊಡುತ್ತೇನೆ ಎಂದಿದ್ದರಂತೆ. ಸುದೀಪ್ ಅವರ ಈ ಮಾತನ್ನೇ ಸ್ಪೂರ್ತಿಯಾಗಿ ತೆಗೆದುಕೊಂಡ ಉಮಾಪತಿ ತಮ್ಮ ಬಹು ವರ್ಷದ ಕನಸನ್ನು ನನಸಾಗಿಸಲು ಹೊರಟಿದ್ದಾರೆ. ಇನ್ನು ಸರ್ಕಾರಿ ಕಾಗದ ಪತ್ರಗಳ ಕೆಲಸ ಮುಗಿಯುತ್ತಿದ್ದಂತೆ ಕೆಲಸ ಆರಂಭಿಸಿ 2022 ಮುಗಿಯುವಷ್ಟರಲ್ಲಿ ಫಿಲ್ಮ್ ಸಿಟಿ ಚಿತ್ರೀಕರಣಕ್ಕೆ ಸಿದ್ಧವಾಗುತ್ತದೆ ಎಂದಿದ್ದಾರೆ. ಇನ್ನು ದೂರದೃಷ್ಟಿಯನ್ನು ಹೊಂದಿರುವ ನಿರ್ಮಾಪಕ ಉಮಾಪತಿ, ಮುಂದಿನ ವರ್ಷಗಳಲ್ಲಿ ಇತರ ಭಾಷೆಯ ಸಿನಿಮಾ ಚಿತ್ರೀಕರಣಕ್ಕೂ ಅವಕಾಶ ಮಾಡಿಕೊಡಲಾಗುವುದು ಎಂದಿದ್ದಾರೆ. ಸದ್ಯ ಇಂಥದ್ದೊಂದು ಫಿಲ್ಮ್ ಸಿಟಿ ಕರ್ನಾಟಕದಲ್ಲಿಯೇ ನಿರ್ಮಾಣವಾಗುತ್ತಿರುವುದು ಕನ್ನಡ ಸಿನಿಮಾ ನಿರ್ಮಾಣಕ್ಕೆ ದೊಡ್ಡ ರಿಲೀಫ್ ಎನ್ನಬಹುದು!