ಅಳಿಯ ಸಾಯಿ ಧರಮ್ ಆರೋಗ್ಯ ಪರಿಸ್ಥಿತಿ ಕುರಿತು ಕುದ್ದು ಮಾಹಿತಿ ನೀಡಿದ ಪವನ್ ಕಲ್ಯಾಣ್, ಹೇಗಿದ್ದಾರೆ ಗೊತ್ತೇ ಸಾಯಿ ಧರಮ್ ತೇಜ್??

ನಮಸ್ಕಾರ ಸ್ನೇಹಿತರೇ ಟಾಲಿವುಡ್ ಚಿತ್ರರಂಗದ ದುಃಖ್ಖಕ್ಕೆ ಕಾರಣವಾಗಿತ್ತು ಈ ವಿಷಯ. ’ರಿಪಬ್ಲಿಕ್’ ಸಿನಿಮಾದಲ್ಲಿ ಐಎಎಸ್ ಅಧಿಕಾರಿಯ ಪಾತ್ರ ಮಾಡಿದ್ದ ಇವರು ಇವರ ನಟನೆಯನ್ನು ಈ ಚಿತ್ರದಲ್ಲಿ ನೋಡುವುದಕ್ಕೂ ಮೊದಲೇ ಈ ಘಟನೆ ನಡೆದು ಹೋಗಿದೆ. ಹೌದು ನಟ ಸಾಯಿ ಧರಮ್ ಅವರು ಬೈಕ್ ನಲ್ಲಿ ಜಾರಿದ್ದು ಆಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಪ್ಟೆಂಬರ್ 10ರಂದು ಹೈದ್ರಾಬಾದ್ ನಲ್ಲಿ ತಮ್ಮ ಸ್ಪೋಟ್ಸ್ ಬೈಕ್ ನಲ್ಲಿ ಚಲಿಸುತ್ತಿರುವಾಗ ಈ ಘಟನೆ ಸಂಭವಿಸಿದೆ. ಸಾಯಿ ಧರಮ್ ಕೇವಲ 45 ಕಿ.ಮಿ ವೇಗದಲ್ಲಿದ್ದರು ಅಷ್ಟೆ. ಇವರ ಈ ಕಡಿಮೆ ವೇಗದಲ್ಲಿರುವುದು ಸಿಸಿ ಟಿವಿಯಲ್ಲೂ ಕೂಡ ದಾಖಲಾಗಿದೆ. ಆದರೆ ಆಕ್ಸಿಡೆಂಟ್ ಆಗಿ ಆಸ್ಪತ್ರೆ ದಾಖಲಾದ ನಟ ಸಾಯಿ ಧರಮ್ ಇದೀಗ ಕೋಮಾ ಸ್ಥಿತಿಯನ್ನು ತಲುಪಿದ್ದಾರೆ ಎನ್ನುವುದು ಕಹಿ ಸಂಗತಿ.

ಸಾಯಿ ಧರಮ್ ಅವರ ಸ್ಥಿತಿ ಹೇಗಿದೆ ಎಂದು ಅವರ ಅಭಿಮಾನಿಗಳು ಕೆಳುತ್ತಿದ್ದರು ಇದೀಗ ಅವರು ಕೋಮಾ ಸ್ಥಿತಿಯಲ್ಲಿರುವುದು ಸುದ್ದಿಯಾಗಿದೆ. ಆದರೆ ಇವರು ಈ ಸ್ಥಿತಿಯಲ್ಲಿರುವಾಗಲೇ ನಿರ್ಮಾಪಕರು ರಿಪಬ್ಲಿಕ್ ಸಿನಿಮಾವನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಇನ್ನು ಈ ಸಿನಿಮಾದ ಫ್ರಿ ರಿಲಿಸ್ ಕಾರ್ಯಕ್ರಮ ಅದ್ದೂರಿಯಾಗಿ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಪ್ರಮೋಷನ್ ಸಮಯದಲ್ಲಿ ಭಾಗವಹಿಸಿದ್ದ ಪವನ್ ಕಲ್ಯಾಣ್, ತನ್ನ ಅಳಿಯನಿಗೆ ಇನ್ನು ಪ್ರಜ್ಞೆ ಬರದೇ ಇರುವ ಶಾಕಿಂಗ್ ಸುದ್ದಿಯನ್ನು ಹಂಚಿ ಕೊಂಡಿದ್ದಾರೆ. ಜೊತೆಗೆ ಮಾಧ್ಯಮಗಳು ತೇಜ್ ಬಗ್ಗೆ ಅಲ್ಲ ರಾಜಕೀಯದಲ್ಲಿನ ಸಮಸ್ಯೆಯ ಬಗ್ಗೆ ಮಾತನಾಡಬೇಕಾಗಿದೆ ಎಂದು ಸಾಯಿ ಧರಮ್ ತೇಜ್ ಅವರ ತಪ್ಪಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇನ್ನು ಸಾಯಿ ಧರಮ್ ಇಂಥ ಸ್ಥಿತಿಯಲ್ಲಿರುವಾಗ ಅವರ ಚಿತ್ರ ತೆರೆ ಕಂಡರೆ ಅವರ ಅಭಿಮಾನಿಗಳ ಪ್ರಕ್ರಿಯೆ ಹೇಗಿರತ್ತೆ ಕಾದು ನೋಡಬೇಕು.