ಅಂಜದ ಗಂಡು ಸಮಯದಲ್ಲಿ ರವಿಚಂದ್ರನ್ ಹಾಗೂ ಹಂಸಲೇಖ ನಡುವೆ ಮನಸ್ತಾಪ ಬಂದಿದ್ದೇಕೆ? ಮತ್ತೆ ಒಂದಾಗಿದ್ದು ಹೇಗೆ ಈ ಜೋಡಿ

ನಮಸ್ಕಾರ ಸ್ನೇಹಿತರೇ, ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅತ್ಯದ್ಭುತ ಹಾಡುಗಳನ್ನು ಸಿನಿಮಾಗಳಲ್ಲಿ ಸೇರಿಸಿ ಆ ಸಿನಿಮಾ ಹಿಟ್ ಆಗುವುದಕ್ಕೆ ನಾದ ಬ್ರಹ್ಮ ಹಂಸಲೇಖ ಮುಖ್ಯ ಕಾರಣ. ಇನ್ನು ರವಿಚಂದ್ರನ್ ಅವರ ಜೊತೆ ಸೇರಿ ಹಲವಾರು ಹಾಡುಗಳನ್ನು ಗೀಚಿದ ಹಂಸಲೇಖ ರವಿಚಂದ್ರನ್ ಅವರ ಆಪ್ತ ಸಂಗೀತ ನಿರ್ದೇಶಕರೂ ಹೌದು. ಸುಮಾರು 25 ಕ್ಕೂ ಹೆಚ್ಚಿನ ಸಿನಿಮಾಗಳನ್ನು ಕ್ರೇಜಿಸ್ಟಾರ್, ಹಂಸಲೇಖ ಅವರ ಜೊತೆ ಸೇರಿ ಮಾಡಿದ್ದಾರೆ. ಅಂತೆಯೇ ಉತ್ತಮ ಯಶಸ್ಸನ್ನೂ ಕಂಡಿದೆ ಈ ಸಿನಿಮಾಗಳು.

ಇಂತಿಪ್ಪ ರವಿಚಂದ್ರನ್ ಹಾಗೂ ಹಂಸಲೇಖ ಜೋಡಿ ನಡುವೆ ಒಂದು ಕಾರಣಕ್ಕೆ ಬಿರುಕು ಮೂಡುತ್ತೆ. ಆ ಒಂದು ಘಟನೆ ಕನ್ನಡ ಚಿತ್ರರಂಗದಲ್ಲಿ ಮಬ್ಬು ಕವಿಯುವಂತೆ ಮಾಡಿದ್ದು ಕೂಡ ಸುಳ್ಳಲ್ಲ. ಹೌದು ಸ್ನೇಹಿತರೆ ಕನ್ನಡದ ಒಂದು ಯಶಸ್ವಿ ಚಿತ್ರ ಅಂಜದ ಗಂಡು. ತಮಿಳಿನಲ್ಲಿ ರಜನಿಕಾತ್ ನಟಿಸಿದ್ದ ’ತಂಬಿಕ್ಕು ಎಂದ ಉರು’ ಚಿತ್ರ ಕನ್ನಡದಲ್ಲಿ ರವಿಚಂದ್ರನ್ ನಟನೆಯ ಅಂಜದ ಗಂಡು ಚಿತ್ರ. ಈ ಚಿತ್ರಕ್ಕೆ ಅತ್ಯಂತ ಸುಮಧುರ ಸಾಹಿತ್ಯ ನೀಡಿದ್ದು ಹಂಸಲೇಖ.

ಈ ಚಿತ್ರದ ಚಿತ್ರೀಕರಣ ಮುಗಿಸಿ, ಪ್ರೀತಿಯಲಿ ಇರೋ ಸುಖ.. ಹಾಡಿನ ರೀರೆಕಾರ್ಡಿಂಗ್ ನಡೆಯ ಬೇಕಿದ್ದ ಸಂದರ್ಭ. ಈ ರೆಕಾರ್ಡಿಂಗ್ ಗಳು ಮದ್ರಾಸ್ ನಲ್ಲಿಯೇ ನಡೆಯಬೇಕಿತ್ತು. ಆಗಿನ್ನೂ ಕನ್ನಡ ಚಿತ್ರರಂಗ ಬೆಂಗಳೂರಿನಲ್ಲಿ ಕೆಲಸ ಮಾಡುವಷ್ತು ಮುಂದುವರೆದಿರಲಿಲ್ಲ. ಅಲ್ಲದೇ ಸಿನಿಮಾ ಮೌಲ್ಯಕ್ಕೆ ಹೆಚ್ಚು ಗಮನವನ್ನು ನೀಡುತ್ತಿದ್ದ ನಟ ರವಿಚಂದ್ರನ್ ಬೆಂಗಳೂರಿನ ಸೃಡಿಯೋದಲ್ಲಿ ರೆಕಾರ್ಡಿಂಗ್ ಪ್ರಯೋಗ ಕೈಗೊಳ್ಳಲು ರೆಡಿ ಇರಲಿಲ್ಲ. ಆದರೆ ಅಂಜದ ಗಂಡು ನಿರ್ದೇಶಕ ರೇಣುಕಾ ಶರ್ಮ ಹಾಡುಗಳನ್ನು ಬೆಂಗಳೂರಿನಲ್ಲಿ ರಿರೆಕಾರ್ಡಿಂಗ್ ಮಾಡುವ ಇರಾದೆಯನ್ನು ಹಂಸಲೇಖ ಅವರ ಮುಂದೆ ಇಡುತ್ತಾರೆ.

ಹಂಸಲೇಖ ಹಾಗೂ ಚಿತ್ರತಂಡ ಇದಕ್ಕೆ ಅಸ್ತು ಎನ್ನುತ್ತೆ. ಆದರೆ ರವಿಚಂದ್ರನ್ ಮಾತ್ರ ಇದಕ್ಕೆ ಸುತಾರಾಂ ಒಪ್ಪುವುದಿಲ್ಲ. ಆದರೆ ಎಲ್ಲರೂ ಒಪ್ಪಿಕೊಂಡಿದ್ದಕ್ಕೆ ಅವರು ಹಂಸಲೇಖ ಅವರ ಮೇಲೆ ತುಸು ಜಾಸ್ತಿಯೇ ಸಿಟ್ಟು ಮಾಡಿಕೊಂಡಿದ್ದರು. ಆದರೆ ಬೆಂಗಳೂರಿನ ಸಂಕೇ ಸ್ಟುಡಿಯೋದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ರೆಕಾರ್ಡಿಂಗ್ ಮುಗಿಸಿ ರವಿಚಂದ್ರನ್ ಅವರ ಕೋಪ ತಣ್ಣಗಾಗುವಂತೆ ಮಾಡುತ್ತಾರೆ ನಾದ ಬ್ರಹ್ಮ ಹಂಸಲೇಖ. ಅಲ್ಲಿಂದ ಮುಂದೆ ರವಿಚಂದ್ರನ್ ಹಾಗೂ ಹಂಸಲೇಖ ಜೊತೆಯಾದ ಜರ್ನಿ ಮತ್ತೆ ಮುಂದುವರೆಯುತ್ತೆ.