ಕೊನೆ ಬಾಲ್ ನಲ್ಲಿ ಸಿಕ್ಸ್ ಗಳಿಸಿ ಮ್ಯಾಚ್ ವಿನ್ ಮಾಡಿಸಿದ ಭರತ್ ರವರಿಗೆ ಒಂದೇ ಒಂದು ಪಂದ್ಯದಿಂದ ಸಿಕ್ಕ ಹಣವೆಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ ಮ್ಯಾಚ್ ಶುರುವಾಯ್ತು ಅಂದ್ರೆ ಸಾಕು ಅದೆಷ್ಟೋ ಜನರ ಕಣ್ಣು ಟಿವಿ ಪರದೆಯ ಮೇಲೆಯೇ! ತಮಗಿರುವ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಐಪಿಎಲ್ ನ್ನು ವೀಕ್ಷಿಸುತ್ತಾರೆ. ಇನ್ನು ಐಪಿಎಲ್ ನ ಒಂದೊಂದು ತಂಡಕ್ಕೂ ಕೋಟಿಗಟ್ಟಲೇ ಅಭಿಮಾನಿಗಳಿದ್ದು, ಕರ್ನಾಟಕದಲ್ಲಿ ಆರ್ ಸಿ ಬಿ ಗೆ ಮಾತ್ರ ಎಲ್ಲಿಲ್ಲದ ಬೆಂಬಲ. ಇನ್ನು ಐಪಿಎಲ್ ನಲ್ಲಿ ಆಡುವ ಕ್ರಿಕೆಟಿಗರ ಬಗ್ಗೆ ಹೀಗೆ ಎಂದು ಹೇಳಲು ಸಾದ್ಯವಿಲ್ಲ, ಯಾಕೆಂದ್ರೆ ಯಾರು ಯಾವ ಪಂದ್ಯದಲ್ಲಿ ಸ್ಟಾರ್ ಆಗಿ ಬಿಡ್ತಾರೆ ಎಂದು ಹೇಳಲು ಸಾಧ್ಯವಿಲ್ಲ.

ಹೀಗೆ ಐಪಿಎಲ್ ನಲ್ಲಿ ಊಹಿಸದ ರೀತಿಯಲ್ಲಿ ಪ್ರದರ್ಶನ ನಿಡಿದ ಹಲವು ಯುವ ಆಟಗಾರರು ಅಂತರಾಷ್ಟ್ರೀಯ ಆಟಗಳನ್ನು ಆಡುವಲ್ಲಿ ಭಡ್ತಿ ಪಡೆದುಕೊಳ್ಳುತ್ತಿದ್ದಾರೆ. ಸದ್ಯ ಈ ರೀತಿ ಸುದ್ದಿಯಲ್ಲಿರುವವರು ಶ್ರೀಕರ ಭರತ್. ಒಂದೇ, ಒಂದು ಮ್ಯಾಚ್, ಒಂದೇ ದಿನದ ಆಟ.. ಶ್ರೀಕರ್ ಭರತ್ ಸ್ಟಾರ್ ಆಟಗಾರನಾಗಿ ಅಭಿಮಾನಿಗಳ ಎದುರು ನಿಂತಿದ್ದಾರೆ. ಈ ಬಾರಿ ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಅವರ ಬಗೆಗಿನ ಅಭಿಮಾನವನ್ನು ಇಮ್ಮಡಿಗೊಳಿಸಿದೆ.

ನಿನ್ನೆ ಅಂದರೆ ಶುಕ್ರವಾರ ಆರ್ ಸಿ ಬಿ ಹಾಗೂ ಡೆಲ್ಲಿ ನಡುವೆ ಹಣಾಹಣಿ ಜೋರಾಗಿಯೇ ಇತ್ತು. ಇನ್ನು ಕೊನೆಯ ಬಾಲಿಗೆ ಸಿಕ್ಸರ್ ಬಾರಿಸುವುದು ಎಂದರೆ ಸುಲಭದ ಕೆಲಸವೇನಲ್ಲ, ಇಲಿ ಶ್ರಮದ ಜೊತೆಗೆ ಲಕ್ ಕೂಡ ಬೇಕು. ಈ ಬಾರಿ ವಿಜಯಲಕ್ಷ್ಮಿ ಒಳಿದಿದ್ದು ಶ್ರೀಕರ್ ಭರತ್ ಪಾಲಿಗೆ. ಹೌದು, ಭರತ್ ಅವರು ತಮ್ಮ ಆಟದ ಮೂಲಕ ತಂದದ ಗೆಲುವಿಗೆ ಕಾರಣವಾಗಿರುವುದು ಮಾತ್ರವಲ್ಲದೇ ಬಾರಿ ಮೊತ್ತದ ಹಣವನ್ನು ಗಳಿಸಿದ್ದಾರೆ.

ಡ್ರೀಮ್ 11 ಗೇಮ್ ಚೇಂಜರ್ ಆಫ್ ದಿ ಮ್ಯಾಚ್ಗೆ ಒಂದು ಲಕ್ಷ ರೂಪಾಯಿ, ಅನ್ಅಕಾಡೆಮಿ ಕ್ರ್ಯಾಕಿಂಗ್ ಸಿಕ್ಸ್ಗೆ 1 ಲಕ್ಷ ರೂಪಾಯಿ, ಮೋಸ್ಟ್ ವ್ಯಾಲಿವೆಬಲ್ ಅಸೆಟ್ ಆಫ್ ದಿ ಮ್ಯಾಚ್ಗೆ ಒಂದು ಲಕ್ಷ ರೂಪಾಯಿ ಜೊತೆಗೆ ಈ ಬಾರಿಯ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದ್ದಾರೆ ಭರತ್! ಆರ್ಸಿಬಿ ಫ್ರಾಂಚೈಸಿ ಭರತ್ ಅವರನ್ನು 20 ಲಕ್ಷಕ್ಕೆ ಹರಾಜಿನಲ್ಲಿ ಖರೀದಿ ಮಾಡಿತ್ತು.

ಪಂದ್ಯ ಮುಗಿದ ಬಳಿಕ ಮಾತನಾಡಿದ ಕೆಎಲ್ ಭರತ್ ಅವರು ತಮ್ಮ ಗೆಲುವಿಗೆ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ, “ ಮ್ಯಾಚ್ ನ್ನು ಸಿಕ್ಸರ್ ಮೂಲಕ ಮುಗಿಸಿದ್ದುಅದ್ಭುತ ಅನುಭವ ನೀಡಿದೆ. ಮ್ಯಾಕ್ಸ್ವೆಲ್ ಹಾಗೂ ನಾನು ಪಂದ್ಯವನ್ನು ಕೊನೆಯವರೆಗೂ ಆಡಬೇಕು ಎಂದು ಮಾತನಾಡಿಕೊಂಡಿದ್ದೇವು. ಹಾಗಾಗಿ ಕುಗ್ಗದೆ ಕೊನೆಯ ವರೆಗೂ ನಮ್ಮ ಬೆಸ್ಟ್ ಕೊಟ್ಟಿದ್ದೇವೆ’. ಎಂದು ಹೇಳಿದ್ದಾರೆ.

ಈ ಬಾರಿಯ ಐಪಿಎಲ್ನಲ್ಲಿ ಒಟ್ಟು ಏಳು ಪಂದ್ಯಗಳನ್ನು ಆಡಿರುವ ಭರತ್ 182 ರನ್ ಗಳಿಸಿದ್ದಾರೆ. ಅದರಲ್ಲಿ 1 ಅರ್ಧಶತಕ, 10 ಬೌಂಡರಿ, ಹಾಗೂ 8 ಸಿಕ್ಸರ್ ಗಳನ್ನು ಒಳಗೊಂಡಿದೆ. ಇದೀಗ ಆರ್ ಸಿ ಬಿ ನಾಲ್ಕನೇ ಸ್ಥಾನದಲ್ಲಿದೆ. ಅಕ್ಟೋಬರ್ 11 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರ್ ಸಿ ಬಿ ಪಂದ್ಯವಾಡಲಿದೆ. ಇಲ್ಲಿ ಸೋತ ತಂಡ ಐಪಿಲ್ ಜರ್ನಿ ಮುಗಿಸಿದರೆ, ಗೆದ್ದ ತಂಡ ಮೊದಲ ಕ್ವಾಲಿಫೈಯರ್ನಲ್ಲಿ ಸೋತ ತಂಡದೊಂದಿಗೆ ಫೈನಲ್ಗಾಗಿ ಸೆಣೆಸಲಿದೆ.