ಋತುಚಕ್ರದ ಸಮಯದಲ್ಲಿ ತಪ್ಪುಯೂ ಈ ಕೆಲಸಗಳನ್ನು ಮಾಡಬೇಡಿ; ಇದರಿಂದ ದೋಷ ಉಂಟಾಗಬಹುದು

ನಮಸ್ಕಾರ ಸ್ನೇಹಿತರೇ ಬಹಳ ಹಿಂದಿನ ಕಾಲದಿಂದಲೂ ನಮ್ಮಲ್ಲಿ ಅದರಲ್ಲೂ ಹಿಂದುಗಳಲ್ಲಿ ಒಂದು ಪದ್ಧತಿ ಇದೆ. ಋತುಚಕ್ರ ಅಥವಾ ಮುಟ್ಟಾದ ಮಹಿಳೆಯರು ಎಲ್ಲರನ್ನೂ ಮುಟ್ಟಿಸಿಕೊಳ್ಳುವಂತಿಲ್ಲ, ಮನೆಯ ಯಾವುದೇ ಕೆಲಸಗಳನ್ನೂ ಮಾಡುವಂತಿಲ್ಲ. ಯಾವುದೇ ಶುಭ ಕಾರ್ಯಗಳಲ್ಲಿ ಭಾಗವಹಿಸುವಂತಿಲ್ಲ, ಮುಟ್ಟಾದ ನಾಲ್ಕು ದಿನಗಳ ಕಾಲ ಮನೆಯ ಎಲ್ಲೆಂದರಲ್ಲಿ ತಿರುಗಾಡದೆ ಒಂದೇ ಸ್ಥಳದಲ್ಲಿ ಇದ್ದು ತಮ್ಮ ಮುಟ್ಟಿನ ದಿನಗಳನ್ನು ಕಳೆಯಬೇಕು.

ಹೀಗೆ ಮುಟ್ಟಿನ ಸಮಯದಲ್ಲಿ ಹೆಣ್ಣುಮಕ್ಕಳನ್ನು ಪ್ರತ್ಯೇಕವಾಗಿ ಇಡುವುದು ಮೌಢ್ಯ, ಮುಟ್ಟಾದರೆ ಯಾವುದೇ ದೋಷವಾಗುವುದಿಲ್ಲ ಎಂಬಿತ್ಯಾದಿ ವಾದಗಳೂ ಕೂಡ ನಮ್ಮಲ್ಲಿದೆ. ಇದು ಸತ್ಯ ಕೂಡ. ಹೆಣ್ಣು ಮುಟ್ಟಾದರೆ ಮೈಲಿಗೆ ಎನ್ನುವಂಥದ್ದು ತಪ್ಪು. ಆದರೆ ನೀವು ದೈವಿಕವಾಗಿಯಲ್ಲದೆ ವೈಜ್ಞಾನಿಕವಾಗಿ ನೋಡಿದರೂ ಕೂಡ ಮುಟ್ಟಿನ ಸಮಯದಲ್ಲಿ ಮಹಿಳೆ ಎಲ್ಲದರಿಂದ ದೂರ ಇದ್ದು ಆ ಸಮಯ ಕಳೆಯುವುದು ಉತ್ತಮ. ಇದಕ್ಕೆ ಬಲವಾದ ಕಾರಣಗಳೂ ಇವೆ.

ಮಹಿಳೆಯ ಋತುಚಕ್ರದ ಸಮಯ ಎಂದ್ರೆ ಬಹಳ ಕಷ್ಟದ ಸಮಯ ಅಂತಾನೇ ಹೇಳಬಹುದು. ಈ ಸಮಯದಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹೆಣ್ಣು ಕುಗ್ಗುತ್ತಾಳೆ. ಸಾಮಾನ್ಯ ದಿನಗಳಲ್ಲಿ ಇರುವಂತೆ ಈ ಸಮಯದಲ್ಲಿ ಮಹಿಳೆಗೆ ಇರಲು ಸಾಧ್ಯವಾಗುವುದಿಲ್ಲ. ದೇಹದಿಂದ ಉಂಟಾಗುವ ರಕ್ತಸ್ರಾವದಿಂದಾಗಿ ದೇಹದಲ್ಲಿ ಶಕ್ತಿಯೇ ಕುಂದಿರುತ್ತದೆ. ಹಾಗಾಗಿ ಯಾವುದೇ ಕೆಲಸಗಳನ್ನೂ ಮಾಡದೆ ಈ ನಾಲ್ಕು ದಿನಗಳ ಕಾಲ ಆಕೆ ವಿಶ್ರಾಂತಿ ಪಡೆಯುವುದು ಅತ್ಯಗತ್ಯ. ಈ ಅರ್ಥದಲ್ಲಿ ನೋಡಿದರೆ ಮುಟ್ಟಾದಾಗ ಮಹಿಳೆ ಪ್ರತ್ಯೇಕವಾಗಿದ್ದು ವಿಶ್ರಾಂತಿ ಪಡೆಯುವುದು ಅತ್ಯಂತ ಸಮಂಜಸ.

ಇನ್ನು ದೈವಿಕ ಕಾರಣಗಳನ್ನು ನೋಡುವುದಾದರೆ, ಸಾಕಷ್ಟು ಜನರಿಗೆ ಮುಟ್ಟಿನ ದೋಷ ತಗುಲುತ್ತದೆ ಎನ್ನುವುದು ಸುಳ್ಳಲ್ಲ. ಇನ್ನು ಮುಟ್ಟಾದ ಮಹಿಳೆಯಿಂದ ನಾಗ ದೇವರಿಗೆ ಮೈಲಿಗೆಯಾದರೆ ದೋಷ ಉಂಟಾಗುತ್ತದೆ. ತಿಂಗಳಲ್ಲಿ ನಾಲ್ಕು ದಿನಗಳ ಕಾಲ ಅಂದರೆ ಮುಟ್ಟಿನ ಸಮಯದಲ್ಲಿ ಮಹಿಳೆಯರು, ದೇವರ ಮನೆಗೆ ಪ್ರವೇಶ ಮಾಡುವುದು, ತುಳಸಿ ಗಿಡವನ್ನು ಮುಟ್ಟುವುದು, ಅರಳಿ ಕಟ್ಟೆ ಸುತ್ತುವುದು, ಗೋಮಾತೆಯನ್ನು ಮುಟ್ಟುವುದು ಹೀಗೆ ಕೆಲವು ತಪ್ಪುಗಳನ್ನು ಮಾಡಲೇಬಾರದು. ಈ ಎಲ್ಲಾ ವಿಷಯಗಳಲ್ಲಿ ದೇವಾನುದೇವತೆಗಳು ಅಡಗಿರುತ್ತಾರೆ ಎಬ ನಂಬಿಕೆ ಹಿಂದುಗಳಲ್ಲಿದೆ. ಹಾಗಾಗಿ ಈ ಸಮಯದಲ್ಲಿ ಇಂಥ ತಪ್ಪುಗಳನ್ನು ಮಾಡದೇ ಇರುವುದೇ ಉತ್ತಮ.