ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರಂತೆ ಸಚಿನ್ ಪುತ್ರಿ ಸಾರಾ, ಆ ಅದೃಷ್ಟವಂತ ಅಳಿಯ ಯಾರು ಗೊತ್ತಾ‌?? ಆತ ಕೂಡ ಟಾಪ್ ಕ್ರಿಕೆಟಿಗ.

ನಮಸ್ಕಾರ ಸ್ನೇಹಿತರೇ ಸಚಿನ್ ತೆಂಡೂಲ್ಕರ್. ಕ್ರಿಕೇಟ್ ಜಗತ್ತಿನ ದೇವರು. ಕ್ರಿಕೇಟ್ ನಮ್ಮ ಧರ್ಮವಾದರೇ, ಸಚಿನ್ ಆ ಧರ್ಮದ ಧರ್ಮಗುರು ಎಂದು ಸಹ ಹೇಳುವುದು ವಾಡಿಕೆ. ಅಂತರಾಷ್ಟ್ರೀಯ ಕ್ರಿಕೇಟ್ ನಲ್ಲಿ ಹಲವಾರು ದಾಖಲೆಗಳನ್ನ ನಿರ್ಮಿಸಿರುವ ಸಚಿನ್ ತೆಂಡೂಲ್ಕರ್ ಗೆ ಭಾರತ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಪತ್ನಿ ಅಂಜಲಿ ತೆಂಡೂಲ್ಕರ್, ವೃತ್ತಿಯಲ್ಲಿ ವೈದ್ಯರಾಗಿದ್ದರೇ, ಮಗಳು ಸಾರಾ ತೆಂಡೂಲ್ಕರ್ ಹಾಗೂ ಮಗ ಅರ್ಜುನ್ ತೆಂಡೂಲ್ಕರ್ ರವರ ಸುಂದರ ಸುಖಮಯ ಸಂಸಾರ ನಡೆಸುತ್ತಿದ್ದಾರೆ. ಈಗ ಸಚಿನ್ ತೆಂಡೂಲ್ಕರ್ ಕುಟುಂಬದಲ್ಲಿ ಶುಭ ಸಮಾಚಾರವೊಂದು ಕೇಳಿ ಬರುತ್ತಿದ್ದು, ಸಚಿನ ಪುತ್ರಿ ಸಾರಾ ತೆಂಡೂಲ್ಕರ್ ಶೀಘ್ರದಲ್ಲಿಯೇ ಹಸೆಮಣೆ ಏರಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.

ಈ ಮಧ್ಯೆ ಸಚಿನ್ ಪುತ್ರಿ ಸಾರಾ ಭಾರತೀಯ ಯುವ ಕ್ರಿಕೇಟಿಗನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆ ಕ್ರಿಕೇಟಿಗ ಬೇರಾರೂ ಅಲ್ಲ. ಭಾರತೀಯ ತಂಡದ ಆರಂಭಿಕ ಬ್ಯಾಟ್ಸಮನ್ ಶುಭಮಾನ್ ಗಿಲ್. ಸಚಿನ್ ಪುತ್ರಿ ಸಾರಾ ಮತ್ತು ಶುಭಮಾನ್ ಗಿಲ್ ಅತ್ಯಂತ ಆಪ್ತವಾಗಿದ್ದಾರಂತೆ. ಇನ್ಸ್ಟಾ ಗ್ರಾಂ ಖಾತೆಯಲ್ಲಿ ಒಬ್ಬರನ್ನು ಒಬ್ಬರು ಫಾಲೋ ಮಾಡುತ್ತಿದ್ದಾರೆ. ಪೋಸ್ಟ್ ಗಳಿಗೆ ಲೈಕು, ಕಮೆಂಟುಗಳನ್ನು ಸಹ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲದರ ಮಧ್ಯೆ ಇವರಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ ಎಂಬ ರೀತಿಯ ಕಮೆಂಟ್ ನ್ನು ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮಾಡಿದ್ದರು.

ಈ ಬಗ್ಗೆ ಸ್ಪಷ್ಠೀಕರಣ ಕೊಟ್ಟಿದ್ದ ಶುಭಮಾನ್ ಗಿಲ್, ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸುದೀರ್ಘವಾದ ಪೋಸ್ಟ್ ವೊಂದನ್ನು ಹಾಕಿದ್ದರು. ನಾನಿನ್ನು ಸಿಂಗಲ್ ಆಗಿ ಇದ್ದೇನೆ ಹಾಗೂ ನಾನು ರೋಮ್ಯಾಂಟಿಕ್ ರಿಲೇಷನ್ ಶಿಪ್ ಹೊಂದಲು ಇಷ್ಟಪಡುತ್ತಿದ್ದೇನೆ ಎಂದು ಪೋಸ್ಟ್ ಮಾಡಿದ್ದರು. ಅದಕ್ಕೆ ಸಾರಾ ತೆಂಡೂಲ್ಕರ್ ಸಹ ಕಮೆಂಟ್ ಮಾಡಿದ್ದು, ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಮಗಳಿಗೆ ಮದುವೆ ಮಾಡಿ ತನ್ನ ಜವಾಬ್ದಾರಿಯನ್ನು ಪೂರ್ಣಗೊಳಿಸುವ ಚಿಂತನೆಯಲ್ಲಿರುವ ಸಚಿನ್, ಟೀಂ ಇಂಡಿಯಾದ ಆಟಗಾರ ಶುಭಮಾನ್ ಗಿಲ್ ರನ್ನ ಅಳಿಯನನ್ನಾಗಿ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.