ಸಲಗ ಹಾಗೂ ಕೋಟಿಗೊಬ್ಬ ಒಮ್ಮೆಲೇ ಬಿಡುಗಡೆಯಾಗಿರುವಾಗ ಸುದೀಪ್ ರವರ ಕುರಿತು ಷಾಕಿಂಗ್ ಹೇಳಿಕೆ ನೀಡಿದ ಸಲಗ ನಿರ್ಮಾಪಕ ಕೆಪಿ ಶ್ರೀಕಾಂತ್. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ರಾಜ್ಯ ಸರ್ಕಾರ ಇದೇ ಅಕ್ಟೋಬರ್ 1ರಂದು ರಾಜ್ಯದ್ಯಂತ ಚಿತ್ರಮಂದಿರಗಳಿಗೆ 100% ಸೀಟಿಂಗ್ ಅವಕಾಶವನ್ನು ನೀಡಿತು. ಈ ಕಾರಣದಿಂದಾಗಿ ಅಕ್ಟೋಬರ್ 14ರಂದು ಸಲಗ ಹಾಗೂ ಕೋಟಿಗೊಬ್ಬ-3 ಕ್ಷೇತ್ರ ಒಂದೇ ದಿನಕ್ಕೆ ಬಿಡುಗಡೆಯಾಗಬೇಕಿತ್ತು. ಸಲಗ ನಿಗದಿತ ಸಮಯಕ್ಕೆ ಬಿಡುಗಡೆಯಾಗಿತ್ತು ಆದರೆ ಕೋಟಿಗೊಬ್ಬ 3 ಚಿತ್ರ ಕೆಲವು ಸಮಸ್ಯೆಗಳಿಂದಾಗಿ ಒಂದು ದಿನ ಲೇಟಾಗಿ ಅಂದರೆ ಮತ್ತೊಬ್ಬ 15ರಂದು ವಿಜಯದಶಮಿ ಹಬ್ಬದ ಪ್ರಯುಕ್ತವಾಗಿ ಬಿಡುಗಡೆಯಾಗಿತ್ತು.

ಇನ್ನು ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ಸಲಗ ಚಿತ್ರ ಈಗಾಗಲೇ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು ನಿರ್ದೇಶಿಸಿದ ಮೊದಲ ಚಿತ್ರದಲ್ಲಿ ಭರ್ಜರಿ ಯಶಸ್ಸನ್ನು ಸಾಧಿಸಿದ್ದಾರೆ ದುನಿಯಾ ವಿಜಯ್. ಚಿತ್ರವು ಕೂಡ ಸಾಕಷ್ಟು ಮನೋರಂಜನಾತ್ಮಕ ವಾಗಿದ್ದು ಒಂದು ಒಳ್ಳೆಯ ಸಂದೇಶವನ್ನು ಸಮಾಜಕ್ಕೆ ನೀಡುವ ಪ್ರಯತ್ನವನ್ನು ಮಾಡಿದ್ದಾರೆ. ಇನ್ನು ಇತ್ತ ಕೋಟಿಗೊಬ್ಬ3 ಚಿತ್ರ ಒಂದು ದಿನ ಲೇಟಾಗಿ ಬಿಡುಗಡೆಯಾದರೂ ಕೂಡ ಬಾಕ್ಸ್ ಆಫೀಸ್ ನಲ್ಲಿ ಹಿಂದೆಂದೂ ಕಾಣದಂತಹ ಕಲೆಕ್ಷನ್ ಮಾಡುವುದರಲ್ಲಿ ಯಶಸ್ಸಾಗಿದೆ. ಆದರೆ ಕೋಟಿಗೊಬ್ಬ 3 ಚಿತ್ರ ಬಿಡುಗಡೆಯಾಗಲು ಹಲವಾರು ಜನರು ಅಡ್ಡಿಯಾಗಿದ್ದಾರೆ ಎಂಬುದನ್ನು ಸೂರಪ್ಪ ಬಾಬು ರವರು ಈ ಹಿಂದೆ ಸುದ್ದಿಮಾಧ್ಯಮಗಳಲ್ಲಿ ಹೇಳಿಕೊಂಡಿದ್ದರು ಹಾಗೂ ಇದರ ಕುರಿತಂತೆ ಕಾನೂನಾತ್ಮಕ ಕ್ರಮವನ್ನು ಕೈಗೊಳ್ಳಲು ಮುಂದುವರೆದಿದ್ದಾರೆ.

ಇನ್ನು ಈ ಕುರಿತಂತೆ ಮಾತನಾಡಿರುವ ಸಲಗ ಚಿತ್ರದ ನಿರ್ಮಾಪಕರಾಗಿರುವ ಕೆಪಿ ಶ್ರೀಕಾಂತ್ ಅವರು ಕಿಚ್ಚ ಸುದೀಪ್ ಅವರು ಕನ್ನಡ ಚಿತ್ರರಂಗದ ಒಂದು ಶಕ್ತಿ ಎಂದು ಹೇಳಬಹುದಾಗಿದೆ. ಅವರ ವಿರುದ್ಧ ಷಡ್ಯಂತ್ರ ರಚಿಸಲು ಇಲ್ಲಿ ಯಾರಿಗೂ ಕೂಡ ಧೈರ್ಯವಿಲ್ಲ. ಚಿತ್ರದ ಕುರಿತಂತೆ ಷಡ್ಯಂತ್ರ ರೂಪಿಸಿದ್ದಾರೆ ಅಂದುಕೊಳ್ಳುವುದು ತಪ್ಪು ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಎರಡು ಚಿತ್ರಗಳು ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು ಕನ್ನಡ ಚಿತ್ರರಂಗಕ್ಕೆ ಒಂದು ಒಳ್ಳೆಯ ಶಕ್ತಿಯನ್ನು ನೀಡಿದೆ ಎಂದು ಹೇಳಬಹುದಾಗಿದೆ.