ಆ ಸಿನೆಮಾ ಇಷ್ಟು ಕೋಟಿ, ಈ ಸಿನಿಮಾ ಅಷ್ಟು ಕೋಟಿ ಅನ್ನುವ ಮೊದಲು, ಅಂದಿನ ಕಾಲದಲ್ಲಿಯೇ ಜೋಗಿ ಬಾಚಿದ್ದು ಎಷ್ಟು ಕೋಟಿ ಗೊತ್ತೇ??

ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾಗಿ ಎಂದು ಮರೆಯಲಾಗದಂತಹ ದಾಖಲೆಯನ್ನು ನಿರ್ಮಿಸಿದ ಚಿತ್ರವೆಂದರೆ ಅದು ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ ಆಲ್ ಟೈಮ್ ಇಂಡಸ್ಟ್ರಿ ಸೂಪರ್ ಹಿಟ್ ಜೋಗಿ ಚಿತ್ರ. ಜೋಗಿ ಚಿತ್ರ ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಇಂದಿಗೆ ಬರೋಬ್ಬರಿ 15 ವರ್ಷಕ್ಕೂ ಹೆಚ್ಚು ವರ್ಷಗಳು ಕಳೆದಿದ್ದರೂ ಕೂಡ ಆ ಚಿತ್ರ ನೀಡಿದಂತಹ ಸಿನಿಮಾ ಅನುಭವ ಇಂದಿಗೂ ಕೂಡ ಪ್ರೇಕ್ಷಕರಲ್ಲಿ ತಾಜಾತನ ವಾಗಿದೆ.

ಪ್ರೇಮ್ ನಿರ್ದೇಶನದಲ್ಲಿ ಹಾಗೂ ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ ಕಾಂಬಿನೇಷನ್ ನಲ್ಲಿ ಮೂಡಿ ಬಂದಂತಹ ಈ ಚಿತ್ರ ಇಂದಿಗೂ ಕೂಡ ಸಿನಿಮಾ ಪ್ರೇಕ್ಷಕರಲ್ಲಿ ಹಚ್ಚಹಸಿರಾಗಿ ಉಳಿದುಕೊಂಡಿದೆ. ಈ ಚಿತ್ರ ಈಗಾಗಲೇ ಚಿತ್ರ ಮಂದಿರಗಳಲ್ಲಿ ಹಲವಾರು ಬಾರಿ ಮರು ಬಿಡುಗಡೆಯಾದರೆ ಕೂಡ ಅದೇ ಮಟ್ಟದ ಕ್ರೇಜ್ ಅನ್ನು ಅಭಿಮಾನಿಗಳಲ್ಲಿ ಹೊಂದಿದೆ. ಅದರಲ್ಲೂ ಕೂಡ ಜೋಗಿ ಹಾಗೂ ತಾಯಿಯ ಸೆಂಟಿಮೆಂಟ್ ಈ ಚಿತ್ರವನ್ನು ಎಲ್ಲಾ ಕನ್ನಡ ಪ್ರೇಕ್ಷಕರು ಮೆಚ್ಚಲು ಕಾರಣವಾಯಿತು. 2005 ರಲ್ಲಿ ರಾಜ್ಯಾದ್ಯಂತ ಬಿಡುಗಡೆಯಾದಂತಹ ಈ ಚಿತ್ರ ಹಿಂದೆಂದೂ ಕಾಣದಂತಹ ಪ್ರಚಂಡ ಯಶಸ್ಸನ್ನು ಕಾಣುತ್ತದೆ.

ಕೇವಲ 4 ಕೋಟಿ ಬಜೆಟ್ ನಲ್ಲಿ ತಯಾರಾದಂತಹ ಈ ಚಿತ್ರ ಬಾಕ್ಸಾಫೀಸ್ ನಲ್ಲಿ ಮೊದಲ ವಾರದಲ್ಲಿ ಮೂರು ಕೋಟಿ ಗಳಿಕೆಯನ್ನು ಆ ಕಾಲದಲ್ಲೇ ಕಂಡಿತ್ತು. ಜೋಗಿ ಚಿತ್ರ ಅಂದಿನ ಕಾಲದಲ್ಲಿ ಬಾಕ್ಸಾಫೀಸಿನಲ್ಲಿ ಮೊತ್ತ ನಲವತ್ತು ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡಿತ್ತು. ಚಿತ್ರಮಂದಿರಗಳಲ್ಲಿ ಶತದಿನೋತ್ಸವವನ್ನು ಕೂಡ ಭರ್ಜರಿಯಾಗಿ ಕಂಡಿತ್ತು ಸೂಪರ್ಹಿಟ್ ಜೋಗಿ ಚಿತ್ರ. ಜೋಗಿ ಚಿತ್ರ ಎಷ್ಟೇ ಮಾಸ್ ಆಗಿದ್ದರೂ ಕೂಡ ಈ ಚಿತ್ರ ಗೆದ್ದಿದ್ದು ತಾಯಿ ಸೆಂಟಿಮೆಂಟ್ ಇಂದ ಎಂದರೆ ತಪ್ಪಾಗಲಾರದು.