ಕನ್ನಡದ ಭರವಸೆಯ ಖ್ಯಾತ ನಟಿ ಭೂಮಿ ಶೆಟ್ಟಿ ಅವರ ಕುಂದಾಪುರದ ಮನೆ ಹೇಗಿದೆ ಗೊತ್ತಾ?? ಮೊದಲ ಬಾರಿಗೆ ಸಂಪೂರ್ಣ ತೋರಿಸುತ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ಕಿರುತೆರೆಯ ಮೂಲಕ ಸೆಲೆಬ್ರಿಟಿ ಆದವರು ಸಾಕಷ್ಟು ಮಂದಿ ಇದ್ದಾರೆ. ಅದರಲ್ಲೂ ಇಂದಿನ ಹೇಳಹೊರಟಿರುವ ನಟಿ ಅಂತೂ ಅತಿ ಕಡಿಮೆ ವಯಸ್ಸಿನಲ್ಲಿಯೇ ಕಿರುತೆರೆಯ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಎಲ್ಲರ ಮನ ಗೆದ್ದವರು. ಹೌದು ಗೆಳೆಯರೇ ನಾವು ಮಾತನಾಡಲು ಹೊರಟಿರುವುದು ಭೂಮಿಕ ಶೆಟ್ಟಿ ಅವರ ಕುರಿತಂತೆ. ಭೂಮಿಕ ಶೆಟ್ಟಿ ಅವರು ಅತಿ ಕಡಿಮೆ ವಯಸ್ಸಿನಲ್ಲಿ ಕಿರುತೆರೆ ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯತೆ ಪಡೆದವರು ಎಂದರೆ ತಪ್ಪಾಗಲಾರದು.

ಭೂಮಿಕ ಶೆಟ್ಟಿ ಅವರು ಎಂಜಿನಿಯರಿಂಗ್ ಓದುತ್ತಿರಬೇಕಾದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಬೇಕಾಗಿದ್ದ ಕಿನ್ನರಿ ದಾರವಾಹಿಗೆ ಆಡಿಶನ್ ನೀಡಿ ಅದರಲ್ಲಿ ಕೂಡ ಯಶಸ್ವಿಯಾಗಿ ಪ್ರಮುಖ ಪಾತ್ರವನ್ನು ಮಾಡಲು ಸೆಲೆಕ್ಟ್ ಆಗುತ್ತಾರೆ. ಇನ್ನು ನಿಮಗೆಲ್ಲ ತಿಳಿದಿರುವಂತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಿನ್ನರಿ ಧಾರಾವಾಹಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಇನ್ನು ಇದಾದನಂತರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಕನ್ನಡ ಕಿರುತೆರೆಯ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಕೂಡ ಭಾಗವಹಿಸಿ ಜನರ ಮೆಚ್ಚುಗೆಯನ್ನು ಪಡೆಯುವಲ್ಲಿ ಕೂಡ ಸಫಲರಾಗುತ್ತಾರೆ. ಇನ್ನು ಬಿಗ್ ಬಾಸ್ ನಿಂದ ಹೊರಬಂದ ನಂತರ ಭೂಮಿಕಾ ಶೆಟ್ಟಿ ಅವರು ನಟಿಸಿರುವ ಹಾಗೂ ನಾಗಭೂಷಣ ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಇಕ್ಕಟ್ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿ ಕನ್ನಡ ಸಿನಿಮಾ ಪ್ರೇಕ್ಷಕರ ಮನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಇನ್ನು ಮುಂದಿನ ದಿನಗಳಲ್ಲಿ ಕೂಡ ಭೂಮಿಕಾ ಶೆಟ್ಟಿ ಅವರು ಹಲವಾರು ಸಿನಿಮಾಗಳಲ್ಲಿ ನಟಿಸುವ ಭರವಸೆಯನ್ನು ಮೂಡಿಸಿದ್ದಾರೆ. ಇನ್ನು ನಿಮಗೆಲ್ಲಾ ಗೊತ್ತಿರುವಂತೆ ಭೂಮಿಕಾ ಶೆಟ್ಟಿಯವರು ಮೂಲತಹ ಕುಂದಾಪುರದವರು. ಇಂದಿನ ವಿಚಾರದಲ್ಲಿ ನಾವು ಅವರ ಮನೆಯ ಕುರಿತಂತೆ ನಿಮಗೆ ಹೇಳಲು ಹೊರಟಿದ್ದೇವೆ. ಕುಂದಾಪುರದ ಹಸಿರಿನ ಸಿರಿಯ ನಡುವೆ ಇರುವ ಇವರ ಸುಂದರವಾದ ಮನೆಯ ವಿಡಿಯೋ ವನ್ನು ನೀವು ಇಲ್ಲಿ ನೋಡಬಹುದಾಗಿದೆ. ಕುಂದಾಪುರದ ಪರಿಸರಕ್ಕೆ ತಕ್ಕಂತೆ ಶ್ರೀಮಂತವಾಗಿದೆ ಭೂಮಿಕ ಶೆಟ್ಟಿ ಅವರ ಮನೆ. ಭೂಮಿಕ ಶೆಟ್ಟಿ ಅವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.