ಬೇರೆ ಎಲ್ಲಾ ವಿಚಾರದಂತೆ ಈ ವಿಚಾರದಲ್ಲಿಯೂ ಕೂಡ ಅಪ್ಪು ಥೇಟ್ ಅಣ್ಣಾವ್ರ ತರಾನೇ, ಶೇಕಡಾ ನೂರಕ್ಕೆ ನೂರರಷ್ಟು ಅಣ್ಣಾವ್ರೇ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗ ಇದೀಗ ಸವ್ಯಸಾಚಿ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಬಡವಾಗಿದೆ. ಯಾರ ಮನಸ್ಸಿಗೂ ಕೂಡ ಕಿಂಚಿತ್ ಕೂಡ ಕೇಡು ಬಯಸದಂತಹ ಪರಿಶುದ್ಧ ವ್ಯಕ್ತಿತ್ವ ಅಂತಹ ಮೇರು ವ್ಯಕ್ತಿತ್ವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರದ್ದು. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಆರು ತಿಂಗಳಿಗೆ ಬೇಕಾದರೆ ಬಾಲನಟನಾಗಿ ತಮ್ಮ ತಂದೆಯ ಜೊತೆಗೆ ಕಾಣಿಸಿಕೊಂಡಿದ್ದರು.

ಬಹುವಿಧದಲ್ಲಿ ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ರವರ ಹಲವಾರು ಗುಣಗಳನ್ನು ಪಡೆದುಕೊಂಡು ಬಂದವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಅದಕ್ಕಾಗಿಯೇ ಅಣ್ಣಾವ್ರನ್ನು ನೋಡಿದಾಗ ಹೇಗೆ ಗೌರವ ನೀಡಬೇಕೆಂದು ಅನಿಸುತ್ತದೆ ಹಾಗೆಯೇ ಪುನೀತ್ ರಾಜಕುಮಾರ್ ಅವರನ್ನು ನೋಡಿದಾಗಲೂ ಕೂಡ ಅದೇ ರೀತಿಯ ಗೌರವವನ್ನು ನೀಡಬೇಕೆಂದು ಅನಿಸುತ್ತದೆ ಎಂಬುದಾಗಿ ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ನಯ ವಿನಯ ಗುಣ ಹಲವಾರು ವಿಚಾರಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ತಮ್ಮ ತಂದೆಯನ್ನು ಹೋಲುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ವಿಚಾರದಲ್ಲಿ ಅಂತೂ ಅಣ್ಣಾವ್ರ ತರಾನೆ ನಮ್ಮ ಅಪ್ಪು.

ಹೌದು ಗೆಳೆಯರೆ ಊಟದ ವಿಚಾರದಲ್ಲಿ ಅಣ್ಣಾವ್ರನ್ನ ಹೋಲುವ ವ್ಯಕ್ತಿತ್ವ ನಮ್ಮ ಪುನೀತ್ ರಾಜಕುಮಾರ್ ಅವರದು. ಅಣ್ಣಾವ್ರಿಗೆ ಕೂಡ ಹಾಗೆ ನಾನ್ವೆಜ್ ಊಟ ಎಂದರೆ ಎಲ್ಲಿಲ್ಲದ ಪ್ರೀತಿ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೂಡ ಹಾಗೆ ರುಚಿಯಾದ ಊಟ ಎಲ್ಲೇ ಇದ್ದರೂ ಕೂಡ ಯಾವುದೇ ಹೋಟೆಲ್ ನಲ್ಲಿ ಇದ್ದರೂ ಕೂಡ ಕಾರು ನಿಲ್ಲಿಸಿ ಅಲ್ಲಿ ಊಟ ಮಾಡಿಕೊಂಡು ಬಂದು ಬಿಡುತ್ತಾರೆ. ಚಿಕ್ಕಂದಿನಿಂದಲೂ ಕೂಡ ಪ್ರತಿದಿನ ನಾನ್ವೆಜ್ ತಿನ್ನಲೇಬೇಕೆಂಬ ಪರಿಕ್ರಮ ಬೆಳೆಸಿಕೊಂಡು ಬಂದಿದ್ದಾರೆ. ತಿನ್ನುವ ವಿಚಾರದಲ್ಲಿ ಪುನೀತ್ ರಾಜಕುಮಾರ್ ಅವರನ್ನು ನೋಡಿ ಕಲಿಯಬೇಕು ಎಂದು ಹಲವಾರು ಜನ ಹೇಳಿದ್ದುಂಟು. ಆದರೆ ಇಂದು ಅವರನ್ನು ಕಳೆದುಕೊಂಡಿರುವ ನಾವು ಅವರ ನೆನಪುಗಳನ್ನು ಮಾತ್ರ ನೆನಪಿಸಿಕೊಳ್ಳಬೇಕಾದ ಅಂತಹ ಪರಿಸ್ಥಿತಿ ಎದುರಾಗಿದೆ.