ಅಧಿಕೃತ ಭಾರತದ ಕೋಚ್ ದ್ರಾವಿಡ್ ರವರ ಫ್ಯಾಮಿಲಿ ಹೇಗಿದೆ ಗೊತ್ತೇ?? ಸೈಲೆಂಟ್ ಆಗಿ ಕಂಡರೂ ಲವ್ ಮಾಡಿ ಮದುವೆಯಾದ ವಾಲ್. ಹೇಗಿದೆ ಗೊತ್ತಾ ಕುಟುಂಬ??

ನಮಸ್ಕಾರ ಸ್ನೇಹಿತರೇ ಭಾರತ ಕ್ರಿಕೆಟ್ ತಂಡ ಯಾವಾಗೆಲ್ಲ ಒಂದು ಕಾಲದಲ್ಲಿ ಸಂಕಷ್ಟವನ್ನು ಅನುಭವಿಸಿತ್ತೋ ಆವಾಗೆಲ್ಲಾ ರಾಹುಲ್ ದ್ರಾವಿಡ್ ಅವರು ಬಂದು ಭಾರತೀಯ ಕ್ರಿಕೆಟ್ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದರು. ಅದಕ್ಕಾಗಿ ಅವರನ್ನು ಭಾರತೀಯ ಕ್ರಿಕೆಟ್ ತಂಡದ ದ ವಾಲ್ ಎನ್ನುವುದಾಗಿ ಕರೆಯುತ್ತಾರೆ‌.

ರಾಹುಲ್ ದ್ರಾವಿಡ್ ಅವರು ಜನಿಸಿರುವುದು ಇಂದೋರಿನಲ್ಲಿ ಆದರೂ ಕೂಡ ಚಿಕ್ಕವಯಸ್ಸಿನಿಂದ ಇಲ್ಲಿಯವರೆಗೂ ಬೆಳೆದು ಬದುಕಿರುವುದು ನಮ್ಮ ಬೆಂಗಳೂರಿನಲ್ಲಿ. ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಅದರಲ್ಲೂ ಕೂಡ ಟೆಸ್ಟ್ ಕ್ರಿಕೆಟ್ ನಲ್ಲಿ ರಾಹುಲ್ ದ್ರಾವಿಡ ರವರ ಹವಾ ಇಂದಿಗೂ ಕೂಡ ನವನವೀನ ವಾಗಿದೆ. 2005 ರಿಂದ 2007 ರವರೆಗೆ ಭಾರತ ಕ್ರಿಕೆಟ್ ತಂಡದ ಕಪ್ತಾನನಾಗಿ ಕೂಡ ಕಾಣಿಸಿಕೊಂಡಿದ್ದಾರೆ. ಇದುವರೆಗೂ ಅಂತರಾಷ್ಟ್ರ ಕ್ರಿಕೆಟ್ನಲ್ಲಿ ಒಟ್ಟು ರಾಹುಲ್ ದ್ರಾವಿಡ್ ರವರು 24177 ರನ್ಗಳನ್ನು ಬಾರಿಸಿದ್ದಾರೆ. ಇನ್ನು ಅಂಡರ್ 19 ತಂಡದ ಕೋಚ್ ಆಗಿ ಕೂಡ ಗೆಲ್ಲಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡಕ್ಕೆ ಅದೆಷ್ಟು ಯುವಪ್ರತಿಭೆಗಳನ್ನು ತಯಾರಿಸಿ ಕಳುಹಿಸಿದ್ದಾರೆ.

ಇನ್ನು ಈಗ ರವಿಶಾಸ್ತ್ರಿ ನಂತರ ಭಾರತೀಯ ಕ್ರಿಕೆಟ್ ತಂಡಕ್ಕೆ ಪ್ರಮುಖ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರು ಆಯ್ಕೆಯಾಗಿದ್ದು ಬಿಸಿಸಿಐ ಅವರಿಗೆ 10 ಕೋಟಿ ಸಂಭಾವನೆ ನೀಡಲಿದೆ. ಇನ್ನು ರಾಹುಲ್ ದ್ರಾವಿಡ್ ರವರ ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ 2003 ರಲ್ಲಿ ವಿಜೇತ ಪಂಧರ್ಕರ್ ರವರನ್ನು ಆರೆಂಜ್ ಕಮ್ ಲವ್ ಮ್ಯಾರೇಜ್ ಆಗಿದ್ದಾರೆ. ಇವರಿಬ್ಬರ ಕುಟುಂಬಗಳು ಸಾಕಷ್ಟು ಪರಿಚಿತರಾಗಿದ್ದು ಈ ಪರಿಚಯವೇ ಅವರನ್ನು ಪ್ರೀತಿಸಿ ಮದುವೆಯಾಗುವಂತೆ ಮಾಡಿದೆ. ಇವರಿಬ್ಬರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಸಮೀತ್ ಹಾಗೂ ಅನ್ವೇ ಎಂದು. ಇನ್ನು ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.