ಮತ್ತೊಮ್ಮೆ ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚಿಸಿದ ರಚಿತಾ ರಾಮ್, ಮತ್ತೊಮ್ಮೆ ವೈರಲ್ ಆದ ಫೋಟೋಗಳು.

ನಮಸ್ಕಾರ ಸ್ನೇಹಿತರೇ ನಟಿ ರಚಿತಾರಾಮ್ ಸದ್ಯ ಸ್ಯಾಂಡಲ್ ವುಡ್ ನ ಬೇಡಿಕೆಯ ನಟಿ. ರಮೇಶ್ ಅರವಿಂದ್ ರಿಂದ ಹಿಡಿದು ಅಜೇಯ್ ರಾವ್ ರವರ ತನಕ.ಎಲ್ಲರಿಗೂ ನಾಯಕಿ ಆಗಿರುವುದು ರಚಿತಾ ರಾಮ್ ರವರ ವಿಶೇಷ ದಾಖಲೆಯಾಗಿದೆ. ಆಗಾಗ ಗಾಸಿಪ್ ಗಳಲ್ಲೂ ಕಾಣಿಸಿಕೊಳ್ಳುವ ರಚಿತಾ ರಾಮ್, ಈಗ ತಮ್ಮ ಹಾಟ್ ನೆಸ್ ಹಾಗೂ ಬೋಲ್ಡ್ ಅವತಾರದಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಈ ಹಿಂದೆ ಉಪೇಂದ್ರ ಅಭಿನಯದ , ಚಂದ್ರು ನಿರ್ದೇಶನದ ಐಲವ್ ಯೂ ಸಿನಿಮಾದಲ್ಲಿ ಒಂದು ಹಾಡಿನಲ್ಲಿ ರಚಿತಾ ರಾಮ್ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡರು. ಆ ಹಾಡು ಸಖತ್ ವೈರಲ್ ಆಗಿತ್ತು. ರಚಿತಾ ಮೊದಲ ಭಾರಿಗೆ ಆ ಪಾಟಿ ಬೋಲ್ಡ್ ಆಗಿ ಕಾಣಿಸಿಕೊಂಡ ಕಾರಣ ಸಿನಿಮಾ ರಚಿತಾ ಕಾರಣಕ್ಕೆ ಹಿಟ್ ಆಗಿತ್ತು. ಆದರೇ ಸಿನಿಮಾ ಬಿಡುಗಡೆಯಾದ ರಚಿತಾ ರಾಮ್ ಹಾಟ್ ಅವತಾರ ಕೆಲವೊಂದು ವಿವಾದ ಸೃಷ್ಠಿಸಿತ್ತು. ರಚಿತಾ ರಾಮ್ ನ್ಯೂಸ್ ಚಾನೆಲ್ ಗಳಲ್ಲಿ ಕಣ್ಣೀರು ಸುರಿಸುತ್ತಾ, ಮತ್ತೊಮ್ಮೆ ಇಂತಹ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.

ಆದರೇ ಈಗ ರಚಿತಾ ರಾಮ್, ಅಜೇಯ್ ರಾವ್ ನಾಯಕರಾಗಿರುವ, ಗುರು ದೇಶಪಾಂಡೆ ನಿರ್ದೇಶನದ ರಚ್ಚು ಐ ಲವ್ ಯೂ ಸಿನಿಮಾದಲ್ಲಿ ಮತ್ತದೇ ಅಂತಹ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವ ಫೋಟೋಗಳನ್ನ ಸಿನಿಮಾ ತಂಡ ಬಿಡುಗಡೆ ಮಾಡಿದೆ. ಮಂಗಳವಾರ ಸಿನಿಮಾದ ಮೊದಲ ಹಾಡು ಮುದ್ದು ನೀನು ಎಂಬ ಹಾಡನ್ನ ಬಿಡುಗಡೆಗೊಳಿಸುತ್ತೇವೆ ಎಂದು ಘೋಷಿಸಿರುವ ಚಿತ್ರ ತಂಡ, ಅಜೇಯ್ ಹಾಗೂ ರಚಿತಾ ಜೊತೆಗಿರುವ ಬಿಸಿ ಬಿಸಿ ದೃಶ್ಯದ ಫೋಟೋಗಳನ್ನ ಇಂದೇ ಬಿಡುಗಡೆ ಮಾಡಿ ಅಭಿಮಾನಿಗಳಲ್ಲಿ ಸಖತ್ ಕ್ರೇಜ್ ಸೃಷ್ಠಿ ಮಾಡಿದೆ. ಇನ್ನು ಇದೇ ರಚ್ಚು ಐ ಲವ್ ಯೂ ಸಿನಿಮಾದ ಶೂಟಿಂಗ್ ವೇಳೆಯಲ್ಲಿಯೇ, ಬಿಡದಿ ಬಳಿ ಇಬ್ಬರು ಸಾಹಸ ಕಲಾವಿದರು ಕರೆಂಟ್ ಶಾಕ್ ತಲುಗಿ ಸ್ದಳದಲ್ಲಿಯೇ ಅಗಲಿದ್ದರು. ಆಗ ಸುದ್ದಿಯಾಗಿದ್ದ ಈ ಸಿನಿಮಾ, ಸದ್ಯ ಈಗ ರಚಿತಾ ರಾಮ್ ರವರ ಬೋಲ್ಡ್ ದೃಶ್ಯಗಳ ಮೂಲಕ ಮತ್ತೊಮ್ಮೆ ಗಮನಸೆಳೆದಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.