ಸಾವಿರಾರು ಕೋಟಿ ಆಸ್ತಿ ಹೊಂದಿದ್ದ ಮಲ್ಯ ಸಾಮ್ರಾಜ್ಯ ಪತನವಾಗಲು ಕಾರಣ ಮಾತ್ರ ಆ ಒಂದು ತಪ್ಪು ನಿರ್ಧಾರ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಕಿಂಗ್ ಫಿಶರ್ ಬ್ರ್ಯಾಂಡ್ ಬಗ್ಗೆ ಮಾತನಾಡಿದರೆ ಸಾಕು ನೆನಪಿಗೆ ಬರುವುದೇ ವಿಜಯ್ ಮಲ್ಯ. ಐಷಾರಾಮಿ ಜೀವನ, ಹಣ ಅಂತಸ್ತುಗಳಲ್ಲಿ ಮಿಂದು ಎದ್ದವನು ಮಲ್ಯ. ದೇಶಕ್ಕೆ ಒಂದಿಷ್ಟು ಉತ್ತಮ ವಿಷಯಗಳನ್ನು ಕೊಟ್ಟ ಮಲ್ಯ, ತನ್ನ ತಪ್ಪು ನಿರ್ಧಾರಗಳು, ನಿರ್ಲಕ್ಷಗಳಿಂದ ತನಗೆ ತಾನೇ ಕಂಟ.ಕ ತಂದುಕೊಂಡು ಬಿಟ್ಟನು ಎನ್ನಬಹುದು. ಬ್ಯಾಂಕ್ ಗೆ ಮೋ.ಸ ಮಾಡಿ ವಿದೇಶಕ್ಕೆ ಹಾರಿದ ಮಲ್ಯ ಅವನ ಕಥೆಯಿದು.

ಹೌದು ಸ್ನೇಹಿತರೆ ದೇಶದ ಶ್ರೀಮಂತ ಉದ್ಯಮಿಯಾದ ಮಲ್ಯ ಒಂದಲ್ಲ ಎರೆಡಲ್ಲ ಬರೊಬ್ಬರಿ 9 ಸಾವಿರ ಕೋಟಿ ರೂಪಾಯಿಗಳ‌ ವಂ’ಚ’ನೆ ಮಾಡಿದ ವ್ಯಕ್ತಿ. 2014 ರಂದು ಬರೊಬ್ಬರಿ 9 ಸಾವಿರ ಕೋಟಿ ರೂಪಾಯಿಗಳ‌ ವಂಚ.ನೆಯಾಗಿತ್ತು. 6 ಸಾವಿರ ಕೋಟಿ ಸಾಲ ಪಡೆದಿದ್ದು ಅದರ ಬಡ್ಡಿ 3 ಸಾವಿರ ಕೋಟಿ ತಲುಪಿತ್ತು. ಇದಾದ ಬಳಿಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೋರ್ಟ್ ಮೊರೆಹೋಗಿತ್ತು. ಆದರೆ ಕೋರ್ಟ್ ನ ಬಂಧ.ನದ ಆದೇಶ ಬರುವ ವಾರದ ಮೊದಲೆ ಲಂಡನ್ ಗೆ ಹಾರಿ ಬಿಟ್ಟಿದ್ದ ವಿಜಯ್ ವಿಠಲ್ ಮಲ್ಯ. ಅಷ್ಟೇ ಅಲ್ಲ, ದೇಶದ 12 ಕ್ಕೂ ಹೆಚ್ಚು ಬ್ಯಾಂಕುಗಳಿಂದ ಸಾವಿರಾರು ಕೋಟಿ‌ ರೂಪಾಯಿ ಸಾಲ ಪಡೆದು ವಂಚಿಸಿ ಲಂಡನ್ ಗ್ಗೆ ಹಾರಿದರೂ ಅಲ್ಲಿ ಮಲ್ಯನನ್ನು ಬಂ’ಧಿ’ಸಲಾಯಿತು‌.

ವಿಜಯ್ ಮಲ್ಯ ಯುಬಿ ಗ್ರುಪ್ ನಿಂದ ತಯಾರಾಗುವ ಕಿಂಗ್ ಫೀಶರ್ ಬೀ’ಯ’ರ್ ಮುಖ್ಯಸ್ಥ ಹಾಗೂ ಎರಲೈನ್, ಸ್ಪೋಟ್ಸ್ ಪ್ರಾಂಚಸಿ ವರಗೆ ವಿಜಯ ಮಲ್ಯ ಅವರ ಹೆಸರೇ ಕೇಳಿಬರುತ್ತಿತ್ತು. 1999ರಿಂದ 2005 ರವರೆಗೂ ಯಾವುದೇ ಅಡ್ಡಿಯಿಲ್ಲದೆ ಉದ್ಯಮ ನಡೆಸಿ ಮಲ್ಯ ವಾಯುಯಾನದಲ್ಲೂ ಉದ್ಯಮ ವಿಸ್ತರಿಸಿ ಕಿಂಗ್ ಫೀಶರ್ ಎರಲೈನ್ಸ್ ಪ್ರಾರಂಭಿಸಿದ. 4 ವಿಮಾನ ಖರೀದಿಸಿ ಮುಂಬೈ ದೆಹಲಿ ಹಾರಾಟ ಆರಂಭಿಸಲಾಯಿತು. ಆದರೆ 2008ರ ಹೊತ್ತಿಗೆ ಕಿಂಗ್ ಫಿಶರ್ಸ್ ಎರಲೈನ್ಸ್ ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾಯ್ತು.

ಆದರೆ ಇದಕ್ಕೆಲ್ಲ ಜಗ್ಗದ ಮಲ್ಯ ಎರ್ ಡೆಕ್ಕನ ಎಂಬ ವಿದೇಶಿ ಎರಲೈನ್ಸ್ ಖರೀದಿ ಮಾಡಿ ಅದನ್ನು ಕಿಂಗ್ ಫೀಶರ್ ಎರಲೈನ್ಸ್ ನೊಂದಿಗೆ ವಿಲಿನ ಮಾಡಲು ನಿರ್ಧರಿಸಿಯೇ ಬಿಟ್ಟ. ಆದರೆ ಈ ಒಂದು ತಪ್ಪು ನಿರ್ದಾರವೇ ಇತನ 9 ಸಾವಿರ ಕೋಟಿ ಸಾಲಕ್ಕೆ ಕಾರಣವಾಗಿಬಿಡ್ತು. ಇಂಧನದ ಬೆಲೆ ಎರಿಕೆ ಇಂದ ನಷ್ಟ ಅನುಭವಿಸಿದ ಮಲ್ಯ ತನ್ನ ಕೆಲವೂಂದು ಶೇರುಗಳನ್ನ ಮಾರಬೇಕಾಯಿತು. ನಂತರ ಬ್ಯಾಂಕ್ ಗಳೂ ಕೂಡ ಸಾಲ‌ ನೀಡಲು‌ ಮುಂದಾಗಲಿಲ್ಲ‌. ಬಳಿಕ ಸರ್ಕಾರ ಎರಲೈನ್ಸ್ ಲೈಸೆನ್ಸ್ ರದ್ದುಗೊಳಿಸಿ ವಿಮಾನಗಳನ್ನು‌ ವಶಕ್ಕೆ ಪಡೆದುಕೊಂಡಿತು. ಆದರೆ ಬ್ಯಾಂಕ್ ಸಾಲವನ್ನು ಮಾತ್ರ ತೀರಿಸದೆ ಲಂಡನ್ ಗೆ ಹಾರಿಯೇ ಬಿಟ್ಟ ಮಲ್ಯ. ನಂತರ ಅಲ್ಲಿಯೇ ಬಂಧಿಸಿ ವಿಚಾರಣೆ ನಡೆಸಿದ್ದು ಮತ್ತೊಂದು ಕಥೆ!