ಇದೇ ಶುಕ್ರವಾದ 18 ತಾರೀಕಿನಂದು ಬರುವ ಕಾರ್ತಿಕ ಹುಣ್ಣಿಮೆಯಂದು ಈ ಚಿಕ್ಕ ಕೆಲಸ ಮಾಡಿ, ಅದೃಷ್ಟ ಖುಲಾಯಿಸುತ್ತದೆ. ಏನು ಮಾಡ್ಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕಾರ್ತೀಕ ಹುಣ್ಣಿಮೆಗೆ ಅದರದ್ದೇ ಆದ ಮಹತ್ವವಿದೆ. ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲು ಇದು ಅತ್ಯಂತ ಸೂಕ್ತ ಸಮಯವೂ ಕುಡ. ಕಾರ್ತಿಕ ಮಾಸದಲ್ಲಿ ಶ್ರೀಮನ್ನಾರಾಯಣನು ಪತ್ನಿ ಲಕ್ಷ್ಮಿಯ ಸಮೇತನಾಗಿ ಭೂಮಂಡಲದಲ್ಲಿ ಸಂಚರಿಸುತ್ತಾನೆ. ಹೀಗಾಗಿ ಈ ಸಮಯದಲ್ಲಿ ನಾವು ನಾರಾಯಣನಿಗೆ ಇಷ್ಟವಾಗುವಂಥ ಕಾರ್ಯಗಳನ್ನೇ ಮಾಡಬೇಕು ಎನ್ನಲಾಗುತ್ತದೆ.

ಕಾರ್ತಿಕ ದೀಪ ದೇವರಿಗೆ ಪ್ರಿಯ, ಕಾರ್ತಿಕ ಮಾಸದಲ್ಲಿ ದೀಪ ಬೆಳಗುವುದು, ತುಳಸಿ ಮದುವೆ ಇವೆಲ್ಲವೂ ಅತ್ಯಂತ ಪುಣ್ಯದಾಯಕ ಕಾರ್ಯವೂ ಹೌದು. ಇದೆಲ್ಲದರ ಜೊತೆಗೆ ಈ ದಿನ ವೃತವನ್ನು ಕೈಗೊಂಡರೆ ಶ್ರೇಯಸ್ಸಾಗುತ್ತದೆ. ಕಾರ್ತಿಕ ಹುಣ್ಣಿಮೆಯಂದು ನಾವು ದಾನ ನೀಡಿದರೆ ಅದರ ಸಂಪೂರ್ಣ ಫಲ ನಮಗೆ ದೊರೆಯುತ್ತದೆ. ಕಾರ್ತಿಕ ಹುಣ್ಣಿಮೆಯ ಬ್ರಾಹ್ಮೀ ಮುಹೂರ್ತದಲ್ಲಿ, ಸರೋವರದಲ್ಲಿ ಮಿಂದು, ತುಪ್ಪದ ದೀಪವನ್ನು ದೇವರ ಮನೆಯಲ್ಲಿ ಹಚ್ಚಬೇಕು. ನಾರಾಯಣ ಹಾಗೂ ಲಕ್ಷ್ಮಿಗೆ ಪೂಜೆ ಮಾಡಿ, ಆರತಿ ಬೆಳಗಬೇಕು. ತುಳಸಿಯನ್ನೂ ಪೂಜಿಸಬೇಕು ರಾತ್ರಿ ಚಂದ್ರ ಕಾಣಿಸಿಕೊಂಡ ಮೇಲೆ ಅರ್ಘ್ಯ ಬಿಟ್ಟ ಮೇಲೆ ವೃತ ಸಮಾಪ್ತವಾಗುತ್ತದೆ.

ಹುಣ್ಣಿಮೆಯು ಪ್ರತಿ ಶುಕ್ಲ ಪಕ್ಷದ ಕೊನೆಯ ದಿನ ಬರುತ್ತದೆ. ಕಾರ್ತಿಕ ಹುಣ್ಣಿಮೆ ಈ ಬಾರಿ ನವೆಂಬರ್ 19 ಶುಕ್ರವಾರ.ಈ ದಿನ ಚಂದ್ರ ಹಾಗೂ ವಿಷ್ಣುವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಕಾರ್ತಿಕ ಮಾಸದ ಕೊನೆಯ ದಿನವೇ ಕಾರ್ತಿಕ ಹುಣ್ಣಿಮೆ. ತ್ರಿಪುರಾಸುರನ ವಧೆಯಾದ ದಿನ ಇದು. ರಾಕ್ಷಸನ ಸಂಹಾರವಾದ ಕೂಡಲೇ ದೇವಾನುದೇವತೆಗಳು ದೀಪ ಹಚ್ಚಿ ಸಂಭ್ರಮಿಸಿದರಂತೆ. ಹಾಗಾಗಿ ಈ ದಿನವನ್ನು ದೇವ ದೀಪಾವಳಿ ಎಂದು ಕರೆಯುತ್ತಾರೆ. ಕಾರ್ತಿಕ ಹುಣ್ಣಿಮೆ ನವೆಂಬರ್ 18 ಮಧ್ಯಾಹ್ನ 12 ಗಂಟೆಗೆ ಆರಂಭವಾಗಿ ನವೆಂಬರ್ 19, 2.22 ನಿಮಿಷಕ್ಕೆ ಮುಗಿಯುತ್ತದೆ ಈ ಕಾರ್ತಿಕ ಹುಣ್ಣಿಮೆಯಂದು ಚಂದ್ರ ಸಂಜೆ 5 ಗಂಟೆ 28 ನಿಮಿಷ 24 ಸೆಕೆಂಡ್ ಕ್ಕೆ ಮೂಡುತ್ತಾನೆ. ಈ ಸಮಯದಲ್ಲಿ ದೀಪ ಬೆಳಗಬೇಕು. ಈ ದಿನ ಅತ್ಯಂತ ಮಹತ್ವವಾಗಿದ್ದು ನಿಮ್ಮ ಕೈಲಾದ ದಾನ ಧರ್ಮವನ್ನು ಈ ದಿನ ಮಾಡಿದರೆ ಅತ್ಯಂತ ಶ್ರೇಯಸ್ಸು.