ಪುಷ್ಪ ಚಿತ್ರದ ಐಟಂ ಸಾಂಗ್ನಲ್ಲಿ ಸ್ಟೆಪ್ ಹಾಕಲು ಸಮಂತ ಪಡೆದುಕೊಂಡಿರುವ ಸಂಭಾವನೆ ಎಷ್ಟು ಕೋಟಿ ಗೊತ್ತಾ?? ಯಪ್ಪಾ ಇಷ್ಟೊಂದಾ??

ನಮಸ್ಕಾರ ಸ್ನೇಹಿತರೇ ತೆಲುಗು ಚಿತ್ರರಂಗದಲ್ಲಿ ಈಗ ಸಾಕಷ್ಟು ಸದ್ದು ಮಾಡುತ್ತಿರುವ ಚಿತ್ರವೆಂದರೆ ಅದು ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ ಚಿತ್ರ. ಹೌದು ಸುಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಈಗಾಗಲೇ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗುವುದರಿಂದಾಗಿ ಸಾಕಷ್ಟು ಪರ ಭಾಷೆಗಳಲ್ಲಿಯೂ ಕೂಡ ದೊಡ್ಡ ಸದ್ದನ್ನು ಮಾಡುತ್ತಿದೆ. ಇನ್ನು ಈಗಾಗಲೇ ಚಿತ್ರದಿಂದ ಹಲವಾರು ಹಾಡುಗಳು ಕೂಡ ಬಿಡುಗಡೆಯಾಗಿದ್ದು ಸಂಗೀತ ಪ್ರಿಯರಲ್ಲಿ ಸಾಕಷ್ಟು ಉತ್ತಮ ರೆಸ್ಪಾನ್ಸ್ ಕೂಡ ಪಡೆದಿದೆ.

ಇನ್ನು ಚಿತ್ರದ ಟೀಸರ್ ಕೂಡ ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿ ವೀಕ್ಷಣೆಯಲ್ಲಿ ದಾಖಲೆಯನ್ನು ನಿರ್ಮಿಸಿತ್ತು. ಚಿತ್ರದಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಪ್ರೇಕ್ಷಕರು ಹೊಸರೀತಿಯ ಅಲ್ಲು ಅರ್ಜುನ್ ರವರ ನಟನೆಯನ್ನು ಈ ಚಿತ್ರದಲ್ಲಿ ವೀಕ್ಷಿಸಬಹುದಾಗಿದೆ. ಈ ಚಿತ್ರದಲ್ಲಿ ಎಲ್ಲಾ ತೆಲುಗು ಚಿತ್ರಗಳಂತೆ ಒಂದು ಸೂಪರ್ ಐಟಂ ಸಾಂಗ್ ಕೂಡ ಇದೆ. ಇನ್ನು ಐಟಂ ಸಾಂಗ್ ಅನ್ನು ಮೊದಲಿಗೆ ಪೂಜಾ ಹೆಗಡೆ ಹಾಗೂ ಸನ್ನಿಲಿಯೋನ್ ಅವರ ಬಳಿ ಕೇಳಲಾಗಿತ್ತು.

ಆದರೆ ಅವರಿಬ್ಬರೂ ಕೂಡ ಒಪ್ಪದ ಕಾರಣ ಸಮಂತ ರವರು ಈ ಐಟಂ ಸಾಂಗ್ ಅನ್ನು ಮಾಡಿದ್ದಾರೆ. ಇನ್ನು ಸಮಂತ ರವರು ಈ ಸ್ಪೆಷಲ್ ಐಟಂ ಸಾಂಗ್ ಗೆ ಬರೋಬ್ಬರಿ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಕೂಡ ಕೇಳಿ ಬರುತ್ತಿದೆ. ಹೌದು ಗೆಳೆಯರೇ ಸಮಂತ ರವರು ಪುಷ್ಪ ಚಿತ್ರದ ಐಟಂ ಸಾಂಗ್ ಗಾಗಿ ಬರೋಬ್ಬರಿ 1.5 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರಂತೆ. ಇನ್ನು ಚಿತ್ರದ ಬಿಡುಗಡೆಗೆ ಕಾತರ ರಾಗಲು ಇನ್ನೊಂದು ಕಾರಣ ಸಿಕ್ಕಿತು ಎಂದು ಹೇಳಬಹುದಾಗಿದೆ ಅಭಿಮಾನಿಗಳಿಗೆ.