ಲಕ್ನೋ ಟೀಮ್ ಕಡೆಯಿಂದ ಭರ್ಜರಿ ಪ್ಲಾನ್, ರಾಹುಲ್ ಕ್ಯಾಪ್ಟನ್. ಬಲಿಷ್ಠ ತಂಡ. ಹೇಗಿದೆ ಗೊತ್ತಾ ಲಕ್ನೋ ತಂಡದ ಸಂಭವನೀಯ. ಮೊದಲ ಬಾರಿಗೆ ಕಪ್ ಗೆಲ್ಲಲು ಯೋಜನೆಯೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿನ್ನೆಯಷ್ಟೇ ಐಪಿಎಲ್ ನ ಟೀಮ್ ಗಳಲ್ಲಿ ಆಟಗಾರರನ್ನ ರಿಟೇನ್ ಮಾಡಿಕೊಳ್ಳಲಾಗಿದೆ. ಘಟಾನುಘಟಿ ಆಟಗಾರರಾದ ಕೆ.ಎಲ್.ರಾಹುಲ್, ಡೇವಿಡ್ ವಾರ್ನರ್, ಹಾರ್ದಿಕ್ ಪಾಂಡ್ಯ, ಯುಜವೇಂದ್ರ ಚಾಹಲ್ ರಂತ ಆಟಗಾರರು ಈ ಭಾರಿ ಹರಾಜಿಗೆ ಲಭ್ಯರಿದ್ದಾರೆ. ಇದೇ ವೇಳೆ ಕೆ.ಎಲ್.ರಾಹುಲ್ ನಾಯಕತ್ವದಲ್ಲಿ ಸುಸಜ್ಜಿತ ತಂಡವನ್ನ ಕಟ್ಟಲು ಲಕ್ನೋ ತಂಡ ಪ್ಲಾನ್ ಹಾಕಿಕೊಂಡಿದೆ. ಲಕ್ನೋ ತಂಡ ಹೀಗಿದೆ.

ಆರಂಭಿಕರಾಗಿ ಕೆ.ಎಲ್.ರಾಹುಲ್ ಹಾಗೂ ಡೇವಿಡ್ ವಾರ್ನರ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಪ್ಲಾಫ್ ಡು ಪ್ಲೇಸಿ ಆಡಿದರೇ, ನಾಲ್ಕನೇ ಕ್ರಮಾಂಕದಲ್ಲಿ ವಿಕೇಟ್ ಕೀಪರ್ ಬ್ಯಾಟ್ಸಮನ್ ಇಶಾನ್ ಕಿಶನ್ ಆಡಲಿದ್ದಾರೆ. ಇನ್ನು ಐದನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಆಡಿದರೇ, ಆರನೇ ಕ್ರಮಾಂಕ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯರವರಿಗೆ ಮೀಸಲಾಗಿದೆ.

ಇನ್ನು ಏಳನೇ ಕ್ರಮಾಂಕದಲ್ಲಿ ಪರ್ಪಲ್ ಕ್ಯಾಪ್ ಹೋಲ್ಡರ್ ಹರ್ಷಲ್ ಪಟೇಲ್ ಆಡಿದರೇ, ಎಂಟನೇ ಕ್ರಮಾಂಕ ಸ್ಪಿನ್ನರ್ ರಶೀದ್ ಖಾನ್ ರವರದ್ದು. ಒಂಬತ್ತನೇ ಕ್ರಮಾಂಕದಲ್ಲಿ ವೇಗಿ ಭುವನೇಶ್ವರ್ ಕುಮಾರ್ ಆಡಿದರೇ, ಹತ್ತನೇ ಕ್ರಮಾಂಕದಲ್ಲಿ ವೇಗಿ ಟ್ರೆಂಟ್ ಬೌಲ್ಟ್ ಆಡಲಿದ್ದು, ಹನ್ನೊಂದನೇ ಆಟಗಾರಾಗಿ ಲೆಗ್ ಸ್ಪಿನ್ನರ್ ಯುಜವೇಂದ್ರ ಚಾಹಲ್ ಆಡಲಿದ್ದಾರೆ.

ಒಂದು ವೇಳೆ ಇದೇ ತಂಡವನ್ನ ಹರಾಜಿನಲ್ಲಿ ಖರೀದಿಸಲು ಸಾಧ್ಯವಾದರೇ, ಲಕ್ನೋ ತಂಡ ಬಲಿಷ್ಠ ತಂಡವಾಗುವ ಸಾಧ್ಯತೆಯಿದೆ. ಟಿ 20 ಕ್ರಿಕೇಟ್ ಗೆ ಹೇಳಿ ಮಾಡಿಸಿದಂತಹ ಆಟಗಾರರು ಈ ತಂಡದಲ್ಲಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ. ತಂಡ ಇಂತಿದೆ : ಕೆ.ಎಲ್.ರಾಹುಲ್ (ನಾಯಕ), ಡೇವಿಡ್ ವಾರ್ನರ್, ಪ್ಲಾಫ್ ಡು ಪ್ಲೇಸಿಸ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರಶೀದ್ ಖಾನ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜವೇಂದ್ರ ಚಾಹಲ್, ಟ್ರೆಂಟ್ ಬೌಲ್ಟ್.