ಆರ್ಸಿಬಿಯಿಂದ ಹೊರಬಿದ್ದಿದ್ದ ಯುಜವೇಂದ್ರ ಚಾಹಲ್ ಐಪಿಎಲ್ ನ ಹೊಸ ತಂಡಕ್ಕೆ ಸೇರ್ಪಡೆ ಖಚಿತ, ಯಾವುದಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ ನ ಮೆಗಾ ಹರಾಜಿನ ದಿನಾಂಕ ಇನ್ನಷ್ಟೇ ತಿಳಿಯಬೇಕಿದೆ. ಹೊಸದಾಗಿ ಎರಡು ತಂಡಗಳು ಈ ಭಾರಿ ಹರಾಜಿನಲ್ಲಿ ಪಾಲ್ಗೊಳ್ಳುವುದರಿಂದ ಸಹಜವಾಗಿಯೇ ಈ ಭಾರಿ ಹರಾಜು ಹೆಚ್ಚು ಕುತೂಹಲವನ್ನ ಉಳಿಸಿಕೊಂಡಿರುತ್ತದೆ. ಈ ನಡುವೆ ಎಲ್ಲಾ ಫ್ರಾಂಚೈಸಿಗಳು ತಮ್ಮ ರಿಟೇನ್ ಆಟಗಾರರ ಪಟ್ಟಿ ಬಿಡುಗಡೆ ಮಾಡಿದ್ದು, ಹಲವಾರು ಪ್ರಮುಖ ಆಟಗಾರರು ಈ ಭಾರಿ ಹರಾಜಿಗೆ ಲಭ್ಯವಿದ್ದಾರೆ.

ಆರ್ಸಿಬಿ ಸಹ ಪ್ರಮುಖ ಮೂವರು ಆಟಗಾರರನ್ನು ರಿಟೇನ್ ಮಾಡಿದ್ದು, ಕೆಲವು ಆಟಗಾರರನ್ನು ಹರಾಜಿನಲ್ಲಿ ಭಾಗವಹಿಸಲು ಅವಕಾಶ ನೀಡಿದೆ. ಆರ್ಸಿಬಿ ತಂಡ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸವೆಲ್ ಹಾಗೂ ಮಹಮದ್ ಸಿರಾಜ್ ರನ್ನ ರಿಟೇನ್ ಮಾಡಿದೆ. ಆದರೇ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದ ಯುಜವೇಂದ್ರ ಚಾಹಲ್ ರನ್ನ ರಿಟೇನ್ ಮಾಡಿಕೊಂಡಿಲ್ಲ.

ಆದರೇ ಹರಾಜಿನಲ್ಲಿ ಆರ್ಸಿಬಿ ತಂಡ ಚಾಹಲ್ ರನ್ನ ಖರೀದಿಸುತ್ತದೆ ಎಂದು ಹೇಳಲಾಗಿತ್ತು. ಆದರೇ ಮಾಜಿ ಕ್ರಿಕೇಟಿಗ ಹಾಗೂ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾರವರ ಪ್ರಕಾರ ಚಾಹಲ್ ರನ್ನ ಆರ್ಸಿಬಿ ತಂಡ ಖರೀದಿಸಲು ಆಗುವುದಿಲ್ಲ. ಚಾಹಲ್ ಮೇಲೆ ಎಲ್ಲಾ ಫ್ರಾಂಚೈಸಿಗಳು ಕಣ್ಣಿಟ್ಟಿದ್ದಾರೆ. ಅವರು ಹರಾಜಿಗೆ ಬಂದ ತಕ್ಷಣ ಎಲ್ಲರೂ ಅವರನ್ನ ಖರೀದಿಸಲು ಮುಂದಾಗುತ್ತಾರೆ. ಸಹಜವಾಗಿಯೇ ಅವರ ಬೆಲೆ ಕೂಡ ಜಾಸ್ತಿಯಾಗುತ್ತದೆ. ಆಗ ಆರ್ಸಿಬಿಗೆ ಹಣದ ಕೊರತೆ ಉಂಟಾಗುತ್ತದೆ. ಹಾಗಾಗಿ ಚಾಹಲ್ ರ ಮೇಲೆ ಲಕ್ನೋ ತಂಡ ಕಣ್ಣಿಟ್ಟಿದೆ. ಕೆ.ಎಲ್ ರಾಹುಲ್ ಮತ್ತು ಯುಜವೇಂದ್ರ ಚಾಹಲ್ ರನ್ನ ಲಕ್ನೋ ತಂಡ ಹರಾಜಿಗಿಂತ ಮುಂಚಿತವೇ ಅವರನ್ನ ಖರೀದಿಸುತ್ತದೆ, ಆ ಅವಕಾಶ ಹೊಸ ತಂಡವಾದ ಲಕ್ನೋಗೆ ಇದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.