ಗಂಡ ಅಂತೂ ಮೋಸ ಮಾಡಿದ ಮಕ್ಕಳು ಆದ್ರೂ ಇದ್ದಾರೇ ಅಂದು ಕೊಂಡರೆ ಮಕ್ಕಳು ಕೂಡ ಈ ಖ್ಯಾತ ನಾಟಿಗೆ ಮೋಸ ಮೋಸ ಮಾಡಿದ್ದಾರೆ, ಪಾಪ ಅನಿಸುತ್ತದೆ.

ನಮಸ್ಕಾರ ಸ್ನೇಹಿತರೇ ಇಂದು ನಾವು ಮಾತನಾಡಲು ಹೊರಟಿರುವುದು ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರಾಗಿರುವಂತಹ ಕಮಲಹಾಸನ್ ಅವರ ಮಾಜಿ ಪತ್ನಿ ಸಾರಿಕಾ ರವರ ಕುರಿತಂತೆ. ಅಂದಿನ ಕಾಲದಲ್ಲಿ ಎಲ್ಲರೂ ಮೆಚ್ಚಿ ದಂತಹ ನಟಿಯರಲ್ಲಿ ಸಾರಿಕಾ ರವರು ಕೂಡ ಒಬ್ಬರಾಗಿದ್ದರು. ಆ ಕಾಲದಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿರುವ ಕಪಿಲ್ ದೇವ್ ರವರ ಜೊತೆಗೆ ಸಾರಿಕಾ ರವರು ಸಾಕಷ್ಟು ಬಾರಿ ಕಾಣಿಸಿಕೊಂಡು ಅವರಿಬ್ಬರ ನಡುವೆ ಏನೋ ಇದೆ ಎಂದು ಎಲ್ಲರೂ ಗುಸುಗುಸು ಮಾತನಾಡಿಕೊಳ್ಳುವಂತೆ ಆಗಿತ್ತು.

ಆಗ ಅವರಿಬ್ಬರು ಮದುವೆಯಾಗುತ್ತಾರೆ ಎಂಬ ಸುದ್ದಿಗಳು ಕೂಡ ಹರಿದಾಡಿತ್ತು ಆದರೆ ಇಬ್ಬರು ಅದಾದನಂತರ ಜೊತೆಗೆ ಕಾಣಿಸಿಕೊಳ್ಳಲಿಲ್ಲ. ಇನ್ನು ಇದಾದನಂತರ ಸಾರಿಕಾ ರವರು ತಮಿಳು ಚಿತ್ರರಂಗದ ಖ್ಯಾತ ನಟನಾಗಿರುವ ಕಮಲಹಾಸನ್ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಇನ್ನು ಇವರಿಗೆ ಶ್ರುತಿ ಹಾಸನ್ ಹಾಗೂ ಅಕ್ಷರ ಹಾಸನ್ ಎಂಬ ಇಬ್ಬರು ಮಕ್ಕಳು ಜನಿಸುತ್ತಾರೆ. ಹದಿನೈದು ವರ್ಷಗಳ ತುಂಬು ದಾಂಪತ್ಯದ ನಂತರ ಸಾರಿಕ ಹಾಗೂ ಕಮಲ್ ಹಾಸನ್ ರವರು ಇಬ್ಬರು ಬೇರೆಯಾಗುತ್ತಾರೆ. ಶ್ರುತಿ ಹಾಸನ್ ಹಾಗೂ ಅಕ್ಷರ ಹಾಸನ್ ರವರನ್ನು ಸಾರಿಕಾ ರವರು ತಾವೇ ಸಾಕುತ್ತಾರೆ.

ಆದರೂ ಕೂಡ ನಂತರ ಶ್ರುತಿ ಹಾಸನ್ ಹಾಗೂ ಅಕ್ಷರ ಹಾಸನ್ ರವರ ತಂದೆ ಕಮಲಹಾಸನ್ ರವರ ಬಳಿಗೆ ಹೋಗುತ್ತಾರೆ. ಇನ್ನು ಈಗ ಇಬ್ಬರು ಕೂಡ ಭಾರತೀಯ ಚಿತ್ರರಂಗದಲ್ಲಿ ಯಾತ ನಟಿಯರಾಗಿ ಹೆಸರು ಮಾಡುತ್ತಿರುವುದನ್ನು ನೀವು ನೋಡಿರಬಹುದು. ಇಂದಿಗೂ ಕೂಡ ನಟಿ ಸಾರಿಕಾ ರವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಾರೆ ಅವರ ಬಳಿ ಹೇಳಿಕೊಳ್ಳುವಷ್ಟು ದೊಡ್ಡ ಮಟ್ಟದ ಆರ್ಥಿಕ ಸಬಲತೆ ಇಲ್ಲ. ಇನ್ನು ಸಾರಿಕಾ ರವರು ತಮ್ಮ ತಾಯಿಯ ಕೋಟ್ಯಂತರ ರೂಪಾಯಿ ಆಸ್ತಿ ತನ್ನ ಹೆಸರಿಗೆ ಬರೆಯಬಹುದೇ ಎಂಬುದಾಗಿ ಅಂದುಕೊಂಡಿದ್ದರು. ಆದರೆ ಸಾರಿಕಾ ರವರ ತಾಯಿ ಅನಾರೋಗ್ಯದಿಂದ ಇಹಲೋಕವನ್ನು ತ್ಯಜಿಸಿದ ನಂತರ ತಮ್ಮ ಆಸ್ತಿಯನ್ನು ತಮ್ಮನ್ನು ನೋಡಿಕೊಂಡ ವೈದ್ಯರಿಗೆ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಈಗ ಸಾರಿಕಾ ರವರು ತನಗೆ ಮೋಸವಾಗಿದೆ ಎಂದು ವೈದ್ಯರ ಮೇಲೆ ನ್ಯಾಯಾಲಯದಲ್ಲಿ ದೂರನ್ನು ನೀಡಿದ್ದಾರೆ.