ಕಿಂಗ್ ಕೊಹ್ಲಿಯ ವ್ಯಕ್ತಿತ್ವ ಮತ್ತೊಮ್ಮೆ ಬಯಲು, ಎಲ್ಲಾ ಆಟಗಾರರಿಗೂ ಹಾಗೂ ಕೊಹ್ಲಿಗೆ ಇರುವ ವ್ಯತ್ಯಾಸ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಟೀ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಅದೆಷ್ಟೇ ಅಗ್ರೇಸ್ಸಿವ್ ಆಟಗಾರನಾದರೂ, ಮೈದಾನದ ಹೊರಗೆ ಆತ ಮಾನವೀಯತೆಯ ಗುಣವುಳ್ಳ ಸಾಕಾರ ಮೂರ್ತಿ. ಹಲವಾರು ಭಾರಿ ವಿರಾಟ್ ತನ್ನ ಮಾನವೀಯ ಗುಣ, ಸಹಾಯ ಪರ ಮನೋಧರ್ಮ, ಸ್ವಲ್ಪವೂ ಅಹಂ ಇಲ್ಲದೇ ಜನರೊಂದಿಗೆ ಬೆರೆಯುವಿಕೆ, ಹೀಗೆ ಈ ಎಲ್ಲಾ ಗುಣಗಳಿಂದ ವಿರಾಟ್ ಮೈದಾನದ ಹೊರಗಡೆ ಕೋಟ್ಯಂತರ ಅಭಿಮಾನಿಗಳ ಪಾಲಿಗೆ ಇಷ್ಟದ ಆಟಗಾರರಾಗಿದ್ದಾರೆ.

ಇತ್ತಿಚೆಗಷ್ಟೇ ಮುಕ್ತಾಯವಾದ ನ್ಯೂಜಿಲೆಂಡ್ ವಿರುದ್ದದ ಏರಡನೇ ಟೆಸ್ಟ್ ನಲ್ಲಿಯೂ ಸಹ ಮುಂಬೈನ ವಾಂಖೆಡೆ ಕ್ರೀಡಾಂಗಣದ ಸಮೀಪ ಇಂತಹದೇ ಒಂದು ಘಟನೆ ನಡೆಯಿತು. ಕ್ರೀಡಾಂಗಣಕ್ಕೆ ತೆರಳಲು ಸಿದ್ದವಾಗಿ ವಿರಾಟ್ ಕೊಹ್ಲಿ ಹೊರಗಡೆ ಬರುತ್ತಿರುವಾಗಲೇ, ಅಭಿಮಾನಿಯೊಬ್ಬ ಆಲ್ ದ ಬೆಸ್ಟ್ ವಿರಾಟ್ ಎಂದು ಕೂಗುತ್ತಾನೆ. ಅದಕ್ಕೆ ಪ್ರತಿಕ್ರಿಯಿಸಿದ ವಿರಾಟ್, ಧನ್ಯವಾದಗಳು ಎಂದು ಮರು ಉತ್ತರ ನೀಡುತ್ತಾರೆ. ಇನ್ನು ಮುಂದುವರೆದು ವಿರಾಟ್ ಈ ದಿನ ನನ್ನ ಬರ್ತ್ ಡೇ ಎಂದು ಪ್ಲೇ ಕಾರ್ಡ್ ಹಿಡಿದುಕೊಂಡು ಹೇಳುತ್ತಾರೆ.

ಅದಕ್ಕೆ ಮರು ಉತ್ತರ ಕೊಟ್ಟ ವಿರಾಟ್, ಹ್ಯಾಪಿ ಬರ್ತಡೆ ಟು ಯು ಎಂದು ಮರು ಉತ್ತರ ನೀಡುತ್ತಾರೆ. ವಿರಾಟ್ ರ ಈ ಸಿಂಪ್ಲಿಸಿಟಿ ವ್ಯಕ್ತವಾಗಿರುವ ಚಿಕ್ಕ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಫುಲ್ ವೈರಲ್ ಆಗಿದೆ. ಜನ ವಿರಾಟ್ ಕೊಹ್ಲಿಯವರನ್ನ ಹಾಡಿ ಹೊಗಳುತ್ತಿದ್ದಾರೆ. ಈ ಮಧ್ಯೆ ಆಯ್ಕೆ ಸಮಿತಿಯ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ವಿರಾಟ್ ಒಬ್ಬ ಉತ್ತಮ ಕ್ರಿಕೇಟಿಗ, ಆತನಲ್ಲಿ ಇನ್ನು ಐದು ವರ್ಷಗಳ ಕಾಲ ಟೆಸ್ಟ್ ಕ್ರಿಕೇಟ್ ಆಡುವ ದೈಹಿಕ ಕ್ಷಮತೆ ಇದೆ ಎಂದು ಹೇಳಿದ್ದಾರೆ. ಈ ಮೂಲಕ ವಿರಾಟ್ ಕೇವಲ 2023ರಲ್ಲಿ ಮಾತ್ರವಲ್ಲದೇ 2027 ರ ವಿಶ್ವಕಪ್ ಸಹ ಆಡುತ್ತಾರೆ ಎಂಬ ವಿಷಯವನ್ನು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.