ಕೊನೆ ಕ್ಷಣದಲ್ಲಿ ಕೊಹ್ಲಿ ಹೇಳಿಕೆಯಿಂದ ರೊಚ್ಚಿಗೆದ್ದ ಬಿಸಿಸಿಐ, ಕಿಂಗ್ ಕೊಹ್ಲಿ ಗೆ ಮತ್ತೊಂದು ಶಾಕ್ ನೀಡಲು ಆರಂಭ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಾಯಕತ್ವ ಬದಲಾವಣೆ ಸದ್ಯ ಮುಗಿದ ಅಧ್ಯಾಯ. ಉಂಟಾಗಿದ್ದ ಗೊಂದಲಗಳೆಲ್ಲವೂ ಒಂದು ಲೆಕ್ಕಕ್ಕೆ ಬಗೆಹರಿದಂತೆ ಆಗಿದೆ. ರೋಹಿತ್ ಶರ್ಮಾ ಗಾಯಾಳುವಾಗಿ ಟೆಸ್ಟ್ ಸರಣಿಯಿಂದ ಹೊರ ಬಿದ್ದಿದ್ದಾರೆ. ಮುನಿಸು ತೊರೆದಿರುವ ವಿರಾಟ್ ಕೊಹ್ಲಿ ಈಗ ತಂಡ ಸೇರಿಕೊಂಡು, ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾರೆ. ಅದಲ್ಲದೇ ತಮ್ಮ ಹಾಗೂ ರೋಹಿತ್ ಶರ್ಮಾ ಮಧ್ಯೆ ಯಾವುದೇ ಮುನಿಸಿಲ್ಲ, ಬದಲಾಗಿ ನಾವುಗಳು ಅತ್ಯುತ್ತಮ ಸ್ನೇಹಿತರು, ಇದನ್ನ ಸಾವಿರ ಭಾರಿಯಾದರೂ ಹೇಳುತ್ತೇನೆ ಎಂದು ವಿವಾದ ಕೊನೆಗಾಣಿಸಲು ಯತ್ನಿಸಿದ್ದಾರೆ. ಆದರೇ ಈ ಮಧ್ಯೆ ವಿರಾಟ್ ಹೇಳಿದ ಮಾತೊಂದು ಸದ್ಯಕ್ಕೆ ವಿವಾದಕ್ಕೆ ಕಾರಣವಾಗಿದೆ.

ನನಗೆ ನಾಯಕತ್ವ ತ್ಯಜಿಸಲು ತಂಡವನ್ನ ಆಯ್ಕೆ ಮಾಡುವ ಮುಂಚಿತವಾಗಿ ಅಂದರೇ ಒಂದುವರೆ ಘಂಟೆ ಮೊದಲು ತಿಳಿಸಲಾಗಿತ್ತು ಹಾಗೂ ಟಿ 20 ನಾಯಕತ್ವವನ್ನ ಯಾವುದೇ ಕಾರಣಕ್ಕೂ ತ್ಯಜಿಸಬೇಡಿ ಎಂದು ಯಾರೂ ಸಹ ಹೇಳಿರಲಿಲ್ಲ ಎಂದು ಹೇಳಿದ್ದರು. ಆದರೇ ಕೆಲವು ದಿನಗಳ ಮುಂಚೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ವಿರಾಟ್ ಗೆ ನಾಯಕತ್ವ ತ್ಯಜಿಸಬೇಕಾಗುತ್ತದೆ ಎಂದು ಮೊದಲೇ ತಿಳಿಸಲಾಗಿತ್ತು ಎಂದು ಹೇಳಿದ್ದರು. ಆದರೇ ವಿರಾಟ್ ಹೇಳಿಕೆ ನಂತರ, ಸೌರವ್ ಗಂಗೂಲಿ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಷ್ಟೇ ಹೇಳಿ ಸುಮ್ಮನಾಗಿದ್ದರು.

ಆದರೇ ಬಿಸಿಸಿಐ ಆಂತರಿಕ ಮೂಲಗಳ ಪ್ರಕಾರ, ಬಿಸಿಸಿಐ ನ ಉನ್ನತ ಸ್ತರದಲ್ಲಿರುವ ಅಧಿಕಾರಿಗಳು ಹಾಗೂ ಸಂಸ್ಥೆಯ ವಿರುದ್ದ ಟೀಕೆ ಮಾಡುವುದು, ಆಟಗಾರರ ಗುತ್ತಿಗೆ ನಿಯಮದ ಪ್ರಕಾರ ತಪ್ಪು. ಟೀಕಿಸಿದರೇ ಅದು ನಿಯಮ .ಶಿಸ್ತು ಕ್ರಮ ಕೂಡ ಎದುರಿಸಬೇಕಾಗುತ್ತದೆ. ಹಾಗಾಗಿ ಸದ್ಯ ವಿರಾಟ್ ಟೀಕೆ ಮಾಡಿರುವುದು ಬಿಸಿಸಿಐ ಅಧ್ಯಕ್ಷರನ್ನು. ಹಾಗಾಗಿ ವಿರಾಟ್ ಗೆ ಶೋಕಾಸ್ ನೋಟಿಸ್ ನೀಡಲು ಬಿಸಿಸಿಐ ಚಿಂತಿಸುತ್ತಿದೆ. ಆದರೇ ತಂಡದ ಆಂತರಿಕ ವಾತಾವರಣ ಹಾಳಾಗುವುದನ್ನು ಗಮನಿಸಿ, ದಕ್ಷಿಣ ಆಫ್ರಿಕಾ ಸರಣಿ ಮುಗಿಯುವ ತನಕ ಯಾವುದೇ ನಿರ್ಧಾರವನ್ನು ಕೈಗೊಳ್ಳುವುದು ಕಷ್ಟ. ದಕ್ಷಿಣ ಆಫ್ರಿಕಾ ಸರಣಿ ಮುಗಿದ ನಂತರ ಬಿಸಿಸಿಐ ವಿರಾಟ್ ವಿರುದ್ದ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.