ಐದು ವರ್ಷದ ಹಿಂದೆ ಆರ್ಸಿಬಿಯಲ್ಲಿ ಇದ್ದ ಟಾಪ್ ಮೂವರು ಆಟಗಾರ ಮೇಲೆ ಕಣ್ಣಿಟ್ಟ ಆರ್ಸಿಬಿ. ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ತಾವು ಪದಾರ್ಪಣೆ ಮಾಡಿದ ಫ್ರಾಂಚೈಸಿಯಿಂದ ಬೇರೆ ಫ್ರಾಂಚೈಸಿ ಪರ ಆಡಿ, ಪುನಃ ಮೂಲ ಫ್ರಾಂಚೈಸಿ ತಂಡಕ್ಕೆ ಮರಳುವುದು ಐಪಿಎಲ್ ಆಟಗಾರರ ಪಾಲಿಗೆ ವಿಶೇಷವಾದುದು. ಸದ್ಯ ಆರ್ಸಿಬಿ ತಂಡದ ಪರ ಕೆಲ ವರ್ಷಗಳ ಹಿಂದೆ ಆಡಿ, ಬೇರೆ ತಂಡಕ್ಕೆ ಆಡಿ, ಈಗ ಮತ್ತದೇ ಆರ್ಸಿಬಿ ತಂಡಕ್ಕೆ ಕೆಲ ಆಟಗಾರರು ವಾಪಸ್ ಆಗಬಹುದು ಎಂಬ ಮಾತು ಕೇಳಿ ಬರುತ್ತಿವೆ. ಬನ್ನಿ ಆ ಆಟಗಾರರು ಯಾರು ಎಂದು ತಿಳಿದುಕೊಳ್ಳೋಣ.

ಮೊದಲನೆಯದಾಗಿ ಭುವನೇಶ್ವರ್ ಕುಮಾರ್ : ಭುವಿ 2009ರಲ್ಲಿ ಐಪಿಎಲ್ ನಲ್ಲಿ ಆರ್ಸಿಬಿ ಪರ ಪದಾರ್ಪಣೆ ಮಾಡಿದ್ದರು. ಕೇವಲ ಒಂದೇ ಒಂದು ಪಂದ್ಯ ಆಡಿದ್ದ ಭುವಿ ನಂತರದ ದಿನಗಳಲ್ಲಿ ಪುಣೆ ತಂಡದ ಪಾಲಾದರು. ನಂತರ 2014ರಲ್ಲಿ ಎಸ್.ಆರ್.ಎಚ್ ತಂಡಕ್ಕೆ ಸೇರ್ಪಡೆಯಾದರು. ಆದರೇ ಈ ಭಾರಿ ಎಸ್.ಆರ್‌.ಹೆಚ್ ತಂಡ ಅವರನ್ನ ರಿಟೇನ್ ಮಾಡಿಕೊಂಡಿಲ್ಲ. ಭುವಿ ಕೂಡ ಹೇಳಿಕೊಳ್ಳುವಂತಹ ಫಾರ್ಮ್ ನಲ್ಲಿ ಇಲ್ಲ‌. ಸ್ಲಾಗ್ ಓವರ್ ನಲ್ಲಿ ಬೌಲಿಂಗ್ ಮಾಡಲು ಆರ್ಸಿಬಿ ತಂಡ ಭುವಿಯನ್ನು ಖರೀದಿಸುವ ಸಾಧ್ಯತೆಯಿದೆ.

ಎರಡನೆಯದಾಗಿ ಇಯಾನ್ ಮಾರ್ಗನ್ : ಇಂಗ್ಲೆಂಡ್ ತಂಡದ ನಾಯಕ ಮಾರ್ಗನ್ 2010 ರಲ್ಲಿ ಆರ್ಸಿಬಿ ಪರ ಆಡಿ ಐಪಿಎಲ್ ನಲ್ಲಿ ಪದಾರ್ಪಣೆ ಮಾಡಿದ್ದರು. ಕೇವಲ ಎರಡು ಪಂದ್ಯ ಆಡಿದ್ದ ಮಾರ್ಗನ್ ನಂತರದ ದಿನಗಳಲ್ಲಿ ಕೆಕೆಆರ್ ತಂಡದ ಪಾಲಾಗಿದ್ದರು. ಸದ್ಯ ಕೆಕೆಆರ್ ತಂಡ ಅವರನ್ನ ರಿಟೇನ್ ಮಾಡಿಕೊಂಡಿಲ್ಲ. ವಿರಾಟ್ ರಾಜೀನಾಮೆಯಿಂದ ತೆರವಾಗಿರುವ ನಾಯಕನ ಸ್ಥಾನಕ್ಕೆ ಮಾರ್ಗನ್ ಸೂಕ್ತ ಎಂಬ ಅಭಿಪ್ರಾಯ ಆರ್ಸಿಬಿ ತಂಡಕ್ಕಿದೆ. ಹೀಗಾಗಿ ಮಾರ್ಗನ್ ಆರ್ಸಿಬಿ ಕ್ಯಾಂಪ್ ಸೇರಿಕೊಳ್ಳುವ ಸಾಧ್ಯತೆಯಿದೆ. ಮೇಲಾಗಿ ಮಾರ್ಗನ್ ಫಾರ್ಮ್ ಗೆ ಬಂದರೇ ಅವರನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

ಇನ್ನು ಕೊನೆಯದಾಗಿ ದಿನೇಶ್ ಕಾರ್ತಿಕ್ : 2015 ರಲ್ಲಿ ಆರ್ಸಿಬಿ ಪರ ಆಡಿದ್ದ ಡಿಕೆ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಸದ್ಯ ಆರ್ಸಿಬಿಯ ವಿಕೇಟ್ ಕೀಪರ್ ಗಳಾಗಿದ್ದ ಎಬಿಡಿ ನಿವೃತ್ತಿ ಘೋಷಿಸಿದ್ದರೇ, ಕೆ.ಎಸ್.ಭರತ್ ರಿಟೇನ್ ಆಗಿಲ್ಲ‌. ಹೀಗಾಗಿ ವಿಕೇಟ್ ಬ್ಯಾಟ್ಸಮನ್ ಹುಡುಕಾಟದಲ್ಲಿರುವ ಆರ್ಸಿಬಿ ಕಾರ್ತಿಕ್ ಗೆ ಬುಲಾವ್ ನೀಡಬಹುದು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.