ಪ್ರೀತಿ ಮಾಡಿದ್ದಾರೆ ಎಂದು ರಿಸ್ಕ್ ತೆಗೆದುಕೊಂಡು ಮದುವೆ ಮಾಡಿಸಿದ, ಆದರೆ ಕೊನೆಗೆ ಆತನನ್ನು ಸ್ನೇಹಿತರು ಏನು ಮಾಡಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಯಾವುದೇ ಸ್ವಾರ್ಥವಿಲ್ಲದ ಸಂಬಂಧ ಎಂದರೆ ಖಂಡಿತವಾಗಿ ಸ್ನೇಹ ಸಂಬಂಧ ಎಂದರೆ ಅತಿಶಯೋಕ್ತಿಯಲ್ಲ. ಏನೇ ಕಷ್ಟ ಬಂದರೂ ಕೂಡ ನಂಬುವುದು ತಮ್ಮ ಸ್ನೇಹಿತರನ್ನು ಹೊರತು ಬೇರೆ ಯಾರನ್ನು ಕೂಡ ಅಲ್ಲ. ಆದರೆ ಇಂದು ನಾವು ಹೇಳಹೊರಟಿರುವ ಸ್ನೇಹದ ವಿಚಾರವನ್ನು ಕೇಳಿದರೆ ಖಂಡಿತವಾಗಿ ನೀವು ಆಶ್ಚರ್ಯ ಪಡುತ್ತೀರಿ.

ಹೌದು ಗೆಳೆಯರೇ ನಾವು ಎಂದು ಮಾತನಾಡಲು ಹೊರಟಿರುವುದು ಮಂಡ್ಯ ಮೂಲದ ರಕ್ಷಿತ್ ಎನ್ನುವವನ ಸ್ನೇಹಿತನ ಪ್ರೇಮ ಪುರಾಣದ ಕುರಿತಂತೆ. ಹೌದು ಗೆಳೆಯರೇ ರಕ್ಷಿತ್ ಎನ್ನುವವನ ಗೆಳೆಯ ಒಬ್ಬ ಹುಡುಗಿಯನ್ನು ಪ್ರೀತಿಸುತ್ತಾನೆ. ಆಕೆಯನ್ನು ಆತ ಮದುವೆಯಾಗುತ್ತಾನೆ ಎಂದು ತನ್ನ ಮನೆಯವರಿಗೆ ಹೇಳಿದಾಗ ಅವರು ಯಾರೂ ಕೂಡ ಒಪ್ಪುವುದಿಲ್ಲ. ಈ ಸಂದರ್ಭದಲ್ಲಿ ರಕ್ಷಿತ್ ತಾನು ಮುಂದೆ ನಿಂತು ಅವರಿಬ್ಬರಿಗೂ ಕೂಡ ಮದುವೆ ಮಾಡಿಸುತ್ತಾನೆ. ಈ ವಿಚಾರವಾಗಿ ರಕ್ಷಿತ್ ಹಾಗೂ ಆತನ ಸ್ನೇಹಿತರ ನಡುವೆ ಹಲವಾರು ಬಾರಿ ಜಗಳಗಳು ಹಾಗೂ ಚರ್ಚೆಗಳು ನಡೆಯುತ್ತವೆ. ಒಮ್ಮೆ ರಕ್ಷಿತ್ ನನ್ನು ಆತನ ಸ್ನೇಹಿತರು ಚರ್ಚೆಗೆ ಕರೆದು ಮಾತುಮಾತಿಗೆ ಬೆಳೆದು ಅವರ ನಡುವೆ ದೊಡ್ಡ ಗಲಾಟೆಯೇ ನಡೆಯುತ್ತದೆ.

ಈ ಸಂದರ್ಭದಲ್ಲಿ ಅವರೆಲ್ಲ ಸೇರಿಕೊಂಡು ರಕ್ಷಿತ್ ಮೇಲೆ ಕೈ ಮಾಡುತ್ತಾರೆ ಆಗ ರಕ್ಷಿತ್ ಅಲ್ಲಿಂದ ಓಡಿ ಮತ್ತೊಂದು ಊರಿನ ಕಾಂಪೌಂಡ್ ಬಳಿ ಅವಿತುಕೊಳ್ಳುತ್ತಾನೆ. ಆದರೆ ಈ ಸಂದರ್ಭದಲ್ಲಿ ರಕ್ಷಿತ್ ಗೆ ಆತನ ಸ್ನೇಹಿತರು ಕೈ ಮಾಡಿರುವ ಕಾರಣ ಹಲವಾರು ಭಾಗಗಳಿಂದ ರ’ಕ್ತ ಸುರಿಯುತ್ತಿರುತ್ತದೆ‌. ಆಗ ಅಲ್ಲಿ ಅವನನ್ನು ನೋಡುತ್ತಿದ್ದ ಊರಿನವರು ಪೊಲೀಸರಿಗೆ ಸುದ್ದಿ ಮುಟ್ಟಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ರಕ್ಷಿತ್ ಪ್ರಾಣವನ್ನು ಚೆಲ್ಲುತ್ತಾನೆ. ಗೆಳೆಯರೇ ರಕ್ಷಿತ್ ತನ್ನ ಗೆಳೆಯನಿಗೆ ಮದುವೆ ಮಾಡಿಸಿದ್ದು ತಪ್ಪಾ. ಇದನ್ನು ಸಹಿಸದ ಆತನ ಗೆಳೆಯರಲ್ಲಿ ಕೆಲವರು ಆತನನ್ನು ಮುಗಿಸಿದ್ದರು. ಗೆಳೆಯ ಅಥವಾ ಗೆಳೆತನ ಎಂಬ ಸಂಬಂಧಕ್ಕೆ ರಕ್ಷಿತ್ ನ ಗೆಳೆಯರು ಕೆಟ್ಟ ಹೆಸರನ್ನು ತಂದಿದ್ದಾರೆ ಎಂದು ಖಡಾಖಂಡಿತವಾಗಿ ಹೇಳಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.