ಮತ್ತೊಮ್ಮೆ ಭುಗಿಲೆದ್ದ ಕೊಹ್ಲಿ ಹಾಗೂ ಗಂಗೂಲಿ ವಿವಾದ, ಈ ಕುರಿತು ಷಾಕಿಂಗ್ ಹೇಳಿಕೆ ನೀಡುವ ಮೂಲಕ ಕಿಚ್ಚು ಹಬ್ಬಿಸಿದ ರವಿಶಾಸ್ತ್ರಿ, ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ತಂಡ ದಕ್ಷಿಣ ಆಫ್ರಿಕಾ ಸರಣಿಯನ್ನು ಎದುರು ನೋಡುತ್ತಿರುವಾಗಲೇ, ನಾಯಕ ವಿರಾಟ್ ಕೊಹ್ಲಿ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಡುವಿನ ಮನಸ್ತಾಪದ ಬಗ್ಗೆ ವಿವಾದವೊಂದು ಶುರುವಾಯಿತು.ಏಕಾಏಕಿ ವಿರಾಟ್ ಕೊಹ್ಲಿಯವರನ್ನ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಲಾಯಿತು. ಇನ್ನು ಈ ಬಗ್ಗೆ ಮಾತನಾಡಿದ್ದ ವಿರಾಟ್ ಕೊಹ್ಲಿ ನನಗೆ ಯಾವುದೇ ಮಾಹಿತಿಯನ್ನ ನೀಡಿರಲಿಲ್ಲ ಎಂದು ಹೇಳಿದ್ದರು.

ಆದರೇ ಇದಕ್ಕಿಂತ ಮುಂಚೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ನಾವು ಮುಂಚೆಯೇ ವಿರಾಟ್ ಕೊಹ್ಲಿಗೆ ಈ ಬಗ್ಗೆ ತಿಳಿಸಿದ್ದೆವು. ಆದರೇ ಅವರು ನಮಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎಂದಿದ್ದರು. ಆದರೇ ಇದು ತೀವ್ರ ಸ್ವರೂಪದ ವಿವಾದಕ್ಕೆ ಕಾರಣವಾಯಿತು. ಆದರೇ ಆ ಬಳಿಕ ಸೌರವ್ ಗಂಗೂಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಈ ವಿಷಯದ ಬಗ್ಗೆ ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಮಾತನಾಡಿ, ವಿರಾಟ್ ತಮ್ಮ ಭಾಗದ ಸಂಪೂರ್ಣ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಆದರೇ ಸೌರವ್ ಕೇವಲ ಒಂದು ಭಾಗವನ್ನು ಮಾತ್ರ ಹೇಳಿದ್ದಾರೆ. ಉಳಿದರ್ಧ ಭಾಗವನ್ನು ಅವರು ಹೇಳಿದರೇ ಮಾತ್ರ ಸಂಪೂರ್ಣ ಮಾಹಿತಿ ಎಲ್ಲರಿಗೂ ದೊರೆಯುತ್ತದೆ ಎಂದು ಹೇಳಿ ಆಶ್ಚರ್ಯ ಮೂಡಿಸಿದ್ದಾರೆ. ಕೋಚ್ ಹುದ್ದೆ ನಂತರ, ತಮ್ಮ ನೆಚ್ಚಿನ ವೀಕ್ಷಕ ವಿವರಣೆ ವೃತ್ತಿಗೆ ಮರಳಲಿರುವ ಇವರು, ಐಪಿಎಲ್ ನಲ್ಲಿ ಯಾವುದಾದರೂ ಒಂದು ತಂಡಕ್ಕೆ ಮೆಂಟರ್ ಸಹ ಆಗಬಹುದು. ಇನ್ನು ಭಾರತ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಸಾಕಷ್ಟು ಧನಾತ್ಮಕ ಅಂಶಗಳನ್ನು ಹೊಂದಿದೆ. ವಿರಾಟ್ ಒಬ್ಬ ಉತ್ತಮ ಕ್ರಿಕೇಟಿಗನಾಗಿದ್ದು, ಆತನ ಜೊತೆ ಉತ್ತಮ ತಂಡವಿದೆ. ಈ ಭಾರಿ ಭಾರತ ತಂಡ ದಕ್ಷಿಣ ಆಫ್ರಿಕಾದ ನೆಲದಲ್ಲಿಯೂ ಸರಣಿ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.