ಭವಿಷ್ಯದ ಆಟಗಾರ ಶುಭಮಾನ್ ಗಿಲ್ ನನ್ನು ಕೈ ಬಿಟ್ಟ ಕೆಕೆಆರ್, ನೀವು ಯಾರ ಪರ ಆಡುತ್ತೀರಿ ಎಂದಿದ್ದಕ್ಕೆ ಆಯ್ಕೆ ಮಾಡಿದ ತಂಡ ಯಾವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ಶುಭಮಾನ್ ಗಿಲ್ ಭಾರತ ಅಂಡರ್ 19 ತಂಡದ ನಾಯಕನಾಗಿ ಗುರುತಿಸಲ್ಪಟ್ಟವರು. ಅಂಡರ್ 19 ತಂಡದಲ್ಲಿ ನೀಡಿದ ಅದ್ಭುತ ಪ್ರದರ್ಶನದಿಂದ ಭಾರತ ತಂಡವನ್ನು ಸಹ ಪ್ರತಿನಿಧಿಸಿದ್ದರು. ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಸಹ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ, ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಐಪಿಎಲ್ ನಲ್ಲಿಯೂ ಸಹ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆರಂಭಿಕ ಆಟಗಾರನಾಗಿ ಹಲವಾರು ಪಂದ್ಯಗಳಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು.

ಆದರೇ ಈ ಭಾರಿ ಕೆಕೆಆರ್ ತಂಡ ಶುಭಮಾನ್ ಗಿಲ್ ರವರನ್ನ ರಿಟೇನ್ ಮಾಡಿಕೊಂಡಿಲ್ಲ. ಕೆಕೆಆರ್ ತಂಡದಿಂದ ವರುಣ್ ಚಕ್ರವರ್ತಿ, ಸುನೀಲ್ ನರೈನ್, ವೆಂಕಟೇಶ್ ಅಯ್ಯರ್ ಹಾಗೂ ಆಂಡ್ರೆ ರಸೆಲ್ ರವರನ್ನು ರಿಟೇನ್ ಮಾಡಿಕೊಂಡಿದೆ. ಆದರೇ ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದ ಶುಭಮಾನ್, ನೀತಿಶ್ ರಾಣಾ, ರಾಹುಲ್ ತ್ರಿಪಾಠಿ ಹಾಗೂ ಪ್ರಸಿದ್ಧ್ ಕೃಷ್ಣರವರನ್ನ ರಿಟೇನ್ ಮಾಡಿಕೊಂಡಿಲ್ಲ.

ಸದ್ಯದ ಐಪಿಎಲ್ ನಲ್ಲಿ ಹನ್ನೇರೆಡು ತಂಡಗಳು ಭಾಗವಹಿಸಿರುವ ಕಾರಣ ಆರಂಭಿಕ ಬ್ಯಾಟರ್ ಗಳಿಗೆ ಹೆಚ್ಚು ಬೇಡಿಕೆ ಬರಲಿದೆ. ಹೀಗಾಗಿ ಶುಭಮಾನ್ ಗಿಲ್ ಹೆಚ್ಚಿನ ಮೊತ್ತಕ್ಕೆ ಹರಾಜಾಗುವ ಸಾಧ್ಯತೆಯಿದೆ. ಇನ್ನು ಯಾವ ಐಪಿಎಲ್ ತಂಡದ ಪರ ಆಡುತ್ತಿರಿ ಎಂದು ಶುಭಮಾನ್ ಗಿಲ್ ಗೆ ಕೇಳಿದಾಗ ಅವರು ನಾನು ಕೋಲ್ಕತ್ತಾ ತಂಡದ ಪರವೇ ಆಡಲು ಇಷ್ಟಪಡುತ್ತೇನೆ ಹೇಳಿದರು. ನನಗೆ ಕೋಲ್ಕತ್ತಾ ತಂಡದಲ್ಲಿ ಆಡಲು ಹೆಚ್ಚು ಮಾನಸಿಕವಾಗಿ ಇಷ್ಟವಾಗುತ್ತದೆ ಇಲ್ಲದಿದ್ದಲ್ಲಿ ಆರ್ಸಿಬಿ ತಂಡದ ಪರ ಆಡಬೇಕು ಎಂಬ ಆಸೆ ಇದೆ ಎಂಬ ಅಭಿಪ್ರಾಯ ಪಟ್ಟಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.