ಪದೇ ಪದೇ ಬ್ಯಾಟಿಂಗ್ ನಲ್ಲಿ ವಿಫಲವಾಗಿ ಬೌಲಿಂಗ್ ಮಾಡದೆ ಪರದಾಡುತ್ತಿರುವ ಹಾರ್ಧಿಕ್ ಪಾಂಡ್ಯ ರವರ ಸ್ಥಾನಕ್ಕೆ ಸಿಕ್ಕ ಪರ್ಫೆಕ್ಟ್ ಆಟಗಾರ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ದಕ್ಷಿಣ ಆಫ್ರಿಕಾದ ವಿರುದ್ದ ಸರಣಿಯ ಟೆಸ್ಟ್ ಕ್ರಿಕೆಟ್ ಸರಣಿ ಮುಗಿದ ನಂತರ , ಮೂರು ಏಕದಿನ ಪಂದ್ಯಗಳ ಸರಣಿ ಆರಂಭವಾಗಲಿದೆ. ಈಗಾಗಲೇ ಭಾರತ ತಂಡ ಈ ಮಹತ್ವದ ಸರಣಿಗೆ ಘೋಷಣೆಯಾಗಿದ್ದು, ರೋಹಿತ್ ಶರ್ಮಾ ಗಾಯದ ಕಾರಣ ಹೊರಗುಳಿದಿದ್ದಾರೆ. ಈ ಕಾರಣಕ್ಕಾಗಿ ಕನ್ನಡಿಗ ಕೆ.ಎಲ್.ರಾಹುಲ್ ನಾಯಕತ್ವವನ್ನ ವಹಿಸುತ್ತಿದ್ದಾರೆ. ಆರಂಭಿಕರಾಗಿ ಶಿಖರ್ ಧವನ್ ಹಾಗೂ ರುತುರಾಜ್ ಗಾಯಕ್ವಾಡ್ ಸ್ಥಾನ ಪಡೆದಿದ್ದಾರೆ. ಇದರ ಜೊತೆ ಐಪಿಎಲ್ ಹೀರೋ, ಕೆಕೆಆರ್ ತಂಡದ ಆರಂಭಿಕ ಬ್ಯಾಟ್ಸಮನ್ ಆಗಿದ್ದ , ಆಲ್ ರೌಂಡರ್ ವೆಂಕಟೇಶ್ ಅಯ್ಯರ್ ರವರಿಗೂ ಸಹ ಸ್ಥಾನ ದೊರಕಿದೆ.

ಈಗ ವೆಂಕಟೇಶ್ ಅಯ್ಯರ್ ಯಾರ ಜವಾಬ್ದಾರಿ ಹೊರುತ್ತಾರೋ ಎಂಬ ಗೊಂದಲ ಇದೆ. ಐಪಿಎಲ್ ನಲ್ಲಿ ಆರಂಭಿಕರಾಗಿದ್ದ ಕಾರಣ ಭಾರತ ತಂಡದಲ್ಲಿ ಆರಂಭಿಕರಾಗಿ ಸಹ ಆಡಬಹುದು. ಕೆ.ಎಲ್.ರಾಹುಲ್ ಜೊತೆ ಇನ್ನಿಂಗ್ಸ್ ಆರಂಭಿಸಬಹುದಾದ ಅವಕಾಶ ಇದೆ. ಆದರೇ ಭಾರತ ತಂಡದ ಮ್ಯಾನೇಜ್ ಮೆಂಟ್ ಅಯ್ಯರ್ ಗಾಗಿ ಬೇರೆಯದ್ದೇ ಪ್ಲಾನ್ ರೂಪಿಸಿದೆ. ಭಾರತ ತಂಡದ ಅನುಭವಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸದ್ಯ ತಂಡದಿಂದ ಹೊರಬಿದ್ದಿದ್ದಾರೆ.

ಉತ್ತಮ ಬ್ಯಾಟಿಂಗ್ ಹಾಗೂ ಹತ್ತು ಓವರ್ ಬೌಲಿಂಗ್ ಮಾಡುವ ಸಾಮರ್ಥ್ಯ ಇರುವ ಕಾರಣ ವೆಂಕಟೇಶ್ ಅಯ್ಯರ್ ಗೆ ಹಾರ್ದಿಕ್ ಪಾಂಡ್ಯ ನಿರ್ವಹಿಸುತ್ತಿದ್ದ ಜವಾಬ್ದಾರಿಯನ್ನು ನೀಡುವ ಸಾಧ್ಯತೆ ಇದೆ. ಏಳನೇ ಕ್ರಮಾಂಕದ ಬ್ಯಾಟ್ಸಮನ್ ಹಾಗೂ ತಂಡಕ್ಕಾಗಿ ಹತ್ತು ಓವರ್ ಗಳ ಬೌಲಿಂಗ್ ಮಾಡುವುದು ವೆಂಕಟೇಶ್ ಅಯ್ಯರ್ ಗೆ ನಿರ್ವಹಿಸಿದ ಜವಾಬ್ದಾರಿಯಾಗಿದೆ. ಇನ್ನು ಇತ್ತಿಚೆಗೆ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ಮಧ್ಯಪ್ರದೇಶದ ಪರ ಆಡಿದ್ದ ವೆಂಕಟೇಶ್ ಅಯ್ಯರ್ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ಅದಲ್ಲದೇ ಹತ್ತು ಓವರ್ ಬೌಲಿಂಗ್ ಮಾಡಿ ಉತ್ತಮವಾಗಿ ವಿಕೇಟ್ ಗಳಿಸಿದ್ದರು. ಹಾಗಾಗಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನಿರ್ವಹಿಸಿದ್ದ ಜವಾಬ್ದಾರಿ ಅಯ್ಯರ್ ಹೆಗಲ ಮೇಲೆರಲಿದೆ. ಯಶಸ್ವಿಯಾದರೇ ಖಂಡಿತವಾಗಿಯೂ ಹಾರ್ದಿಕ್ ಪಾಂಡ್ಯಗೆ ಭಾರತ ತಂಡದಲ್ಲಿ ಬಾಗಿಲು ಮುಚ್ಚಿದಂತಾಗುತ್ತದೆ. ವೆಂಕಟೇಶ್ ಅಯ್ಯರ್ ಈ ಸರಣಿಯಲ್ಲಿ ಯಶಸ್ವಿಯಾಗಲಿ ಎಂಬುದು ಅಭಿಮಾನಿಗಳ ಆಸೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.