ನಾನು ಈ ಬಾರಿಯ ಐಪಿಎಲ್ ನಲ್ಲಿ ಇದೆ ತಂಡಕ್ಕೆ ಆಯ್ಕೆಯಾಗಬೇಕು ಎಂದು ಹೇಳಿಕೆ ನೀಡಿದ ಹರ್ಷಲ್, ನೆಚ್ಚಿನ ತಂಡ ಯಾವುದಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ಗೊತ್ತೇ ಇರುವಂತೆ ಐಪಿಎಲ್ ನ ಹೊಸ ಸೀಸನ್ ಅತಿ ಶೀಘ್ರದಲ್ಲೇ ಆರಂಭವಾಗಲಿದೆ. ಇಡೀ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ 2022 ಆವೃತ್ತಿಯನ್ನು ನೋಡಲು ಕ್ರಿಕೆಟ್ ಪ್ರೇಮಿಗಳು ವಿಶ್ವಾದ್ಯಂತ ಕಾತರರಾಗಿದ್ದಾರೆ. ಈಗಾಗಲೇ ಮೆಗಾ ಆಕ್ಷನ್ ಗೂ ಮುನ್ನವೇ ಐಪಿಎಲ್ ನಲ್ಲಿರುವ ಹಳೆಯ ಎಂಟು ತಂಡಗಳು ತಮಗೆ ಬೇಕಾಗಿರುವ ಆಟಗಾರರನ್ನು ರಿಟೈನ್ ಮಾಡಿಕೊಂಡಿದ್ದಾರೆ. ಒಟ್ಟಾರೆಯಾಗಿ 8 ತಂಡಗಳು 27 ಆಟಗಾರರನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ.

ಹೊಸದಾಗಿ ಸೇರ್ಪಡೆಯಾಗಿರುವ ಅಹಮದಾಬಾದ್ ಹಾಗೂ ಲಕ್ನೋ ತಂಡಗಳಿಗೆ ಆಟಗಾರರನ್ನು ಆಯ್ಕೆ ಮಾಡಲು ಈಗಾಗಲೇ ಅವಕಾಶವನ್ನು ಕೂಡ ನೀಡಲಾಗಿದೆ. ಮೆಗಾ ಆಕ್ಷನ್ ಇನ್ನೇನು ಇದೇ ಫೆಬ್ರವರಿ 12 ಹಾಗೂ 13ರಂದು ಶನಿವಾರ ಮತ್ತು ಭಾನುವಾರ ಬೆಂಗಳೂರಿನ ನಲ್ಲಿ ನಡೆಯಲಿರುವುದು ಕನ್ಫರ್ಮ್ ಆಗಿದೆ. ಇನ್ನು ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೇಳುವುದಾದರೆ ಈಗಾಗಲೇ ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್ ರವರನ್ನು ಮೊದಲ ಆಯ್ಕೆಯಾಗಿ ರಿಟೈನ್ ಮಾಡಿಕೊಂಡಿದ್ದಾರೆ. ಕಳೆದ ಐಪಿಎಲ್ ನಲ್ಲಿ ಇಡೀ ಸರಣಿಯಲ್ಲಿ ದಾಖಲೆಯ ವಿಕೆಟ್ ಗಳನ್ನು ಪಡೆದು ಪರ್ಪಲ್ ಹೊಂದಿದ್ದವರು ಹರ್ಷಲ್ ಪಟೇಲ್ ರವರು. ಈ ಬಾರಿ ಬೆಂಗಳೂರು ತಂಡ ಹರ್ಷಲ್ ಪಟೇಲ ರವರನ್ನು ರಿಟೈನ್ ಮಾಡಿಕೊಳ್ಳಲಿದೆ ಎಂಬುದಾಗಿ ಊಹಿಸಲಾಗಿತ್ತು.

ಆದರೆ ಅದು ಸಾಧ್ಯವಾಗಲಿಲ್ಲ. ಇತ್ತೀಚಿಗಷ್ಟೇ ಹರ್ಷಲ್ ಪಟೇಲ್ ರವರು ಯಾವ ಐಪಿಎಲ್ ತಂಡದಲ್ಲಿ ಆಡಲು ಬಯಸಿದ್ದಾರೆ ಎಂಬುದಾಗಿ ಕುರಿತಂತೆ ತಮ್ಮ ಹೇಳಿಕೆ ನೀಡಿದ್ದಾರೆ. ಹೌದು ಹರ್ಷಲ್ ಪಟೇಲ್ ಅವರು ಮತ್ತೆ ಪುನಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಟವಾಡುವ ಉಮೇದುವಾರಿಕೆಯನ್ನು ವ್ಯಕ್ತಪಡಿಸಿದ್ದಾರೆ. ರಿಟೈನ್ ನಲ್ಲಿ ನನ್ನನ್ನು ಖರೀದಿಸದೆ ಇರಬಹುದು ಆದರೆ ಆಕ್ಷನ್ ನಲ್ಲಿ ಖಂಡಿತವಾಗಿ ತಂಡ ನನ್ನನ್ನು ಖರೀದಿಸುತ್ತದೆ ಎಂಬ ನಂಬಿಕೆಯನ್ನು ಹೊಂದಿದ್ದೇನೆ ಎಂಬುದಾಗಿ ಹೇಳಿದ್ದಾರೆ. ನಿಮಗೆ ಏನು ಅನಿಸುತ್ತದೆ ಸ್ನೇಹಿತರೆ ಹರ್ಷಲ್ ಪಟೇಲ್ ಅವರನ್ನು ಮತ್ತೆ ಪುನಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸುತ್ತದೆಯೇ ಎಂಬುದನ್ನು ಕಾಮೆಂಟ್ ಮಾಡೋದರ ಮೂಲಕ ತಿಳಿಸಿ.