ಕಂಪ್ಲೇಂಟ್ ಕೊಡಲು ಬಂದ ರೈತನಿಗೆ ಸೈನ್ ಮಾಡೋಕೆ ಬರುತ್ತಾ ಅಂತ ಕೇಳಿದಕ್ಕೆ ಆತ ಮಾಡಿದ ಕೇಳಿಸಕ್ಕೆ ಇಡೀ ದೇಶವೇ ಬೆರಗಾಗಿತ್ತು. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಕತೆ ನಡೆದಿರುವುದು ಉತ್ತರಪ್ರದೇಶದಲ್ಲಿ. ಉತ್ತರಪ್ರದೇಶದ ಉಸ್ರಾಹರ್ ನ ಪೊಲೀಸ್ ಠಾಣೆಯ ಮುಂದೆ ಒಬ್ಬ ರೈತನ ಮಾಸಿದ ಬಟ್ಟೆಯೊಂದಿಗೆ ನಿಂತಿದ್ದ. ಪೊಲೀಸ್ ಅಧಿಕಾರಿ ಯಾಕೆ ಇಲ್ಲಿ ನಿಂತಿದ್ದೀಯಾ ಎಂದು ಕೇಳಿದಾಗ ನನ್ನ ಎಮ್ಮೆಗಳು ಕಳೆದುಹೋಗಿವೆ ಎಂಬುದಾಗಿ ಹೇಳುತ್ತಾ ಒಳಗೆ ಬರುತ್ತಾನೆ.

ಒಳಗೆ ಬಂದಾಕ್ಷಣ ರೈತ ಹೇಳುತ್ತಾನೆ ನನ್ನ ಎಮ್ಮೆಗಳು ಕಳೆದುಹೋಗಿವೆ ದಯವಿಟ್ಟು ನನ್ನ ದೂರನ್ನು ಬರೆದುಕೊಳ್ಳಿ ಎಂಬುದಾಗಿ ಹೇಳುತ್ತಾನೆ. ಆಗ ಅಲ್ಲಿ ಇದ್ದಂತಹ ಪೊಲೀಸಧಿಕಾರಿಗಳು ನಿನ್ನ ಎಮ್ಮೆ ಕಳೆದು ಹೋದ ತಕ್ಷಣವೇ ಇಲ್ಲಿಗೆ ಬಂದು ದೂರು ನೀಡುತ್ತೀಯ ಅದೇನು ಕಳೆದುಹೋಗಿವೆ ಎಂದು ಅಷ್ಟೊಂದು ಕರಾರುವಕ್ಕಾಗಿ ಹೇಳುತ್ತೀಯಾ ಎಂಬುದಾಗಿ ಗೇಲಿ ಮಾಡಲು ಮಾತನಾಡುತ್ತಾನೆ. ಆಗ ಆ ರೈತ ಹೊರಹೋಗಲು ಪ್ರಾರಂಭಿಸುತ್ತಾನೆ.

ಆಗ ಏನಾದರೂ ಹಣ ಕೊಟ್ಟರೆ ನಾವು ನಿನ್ನ ದೂರನ್ನು ದಾಖಲಿಸಿ ಕೊಳ್ಳುತ್ತೇವೆ ಎಂಬುದಾಗಿ ಅಲ್ಲಿದ್ದವರು ಹೇಳುತ್ತಾರೆ. ಆಗ ತನ್ನ ಬಳಿ ಇರೋದೇ ಇದು ಎಂಬುದಾಗಿ ಹೇಳಿ 35 ರೂಪಾಯಿಗಳನ್ನು ನೀಡುತ್ತಾನೆ. ಆಗ ಆತನನ್ನು ಉಚಿತವಾಗಿ ದೂರನ್ನು ಬರೆಯಲು ಬಾರದವರಿಗೆ ದೂರನ್ನು ಬರೆಯಲು ಕೊಟ್ಟಿರುವಂತಹ ಮುಂಶಿಯ ಬಳಿ ಕಳುಹಿಸಿಕೊಡಲಾಗುತ್ತದೆ. ಅಲ್ಲಿ ಆತನಿಂದ ದೂರನ್ನು ಪಡೆದು ನಂತರ ನೀನು ಸಹಿ ಹಾಕುತ್ತೀಯ ಇಲ್ಲ ಎಲ್ಲರ ಹಾಗೆ ಹೆಬ್ಬೆಟ್ಟು ಗಿರಾಕಿನಾ ಎಂಬುದಾಗಿ ಗೇಲಿ ಮಾಡುತ್ತಾ ಹೇಳುತ್ತಾರೆ.

ಹಾಗಾದರೆ ಹೆಬ್ಬೆಟ್ಟು ಯಾಕೆ ನನಗೆ ಸಹಿ ಮಾಡಲು ಬರುತ್ತದೆ ಎಂಬುದಾಗಿ ಹೇಳಿ ಚರಣ್ ಸಿಂಗ್ ಚೌಧರಿ ಎಂದು ಇಂಗ್ಲಿಷ್ನಲ್ಲಿ ತನ್ನ ಹೆಸರನ್ನು ಬರೆದು ಪ್ರಧಾನಮಂತ್ರಿಗಳ ಠಸ್ಸೆಯನ್ನು ಒತ್ತುತ್ತಾನೆ. ಆಗ ಅಲ್ಲಿದ್ದ ಎಲ್ಲಾ ಪೊಲೀಸ್ ಅಧಿಕಾರಿಗಳ ನಗು ಒಂದು ಕ್ಷಣ ನಿಂತು ಹೋಯಿತು. ಹೌದು ಗೆಳೆಯರೇ ಅಲ್ಲಿದ್ದಿದ್ದು ಇನ್ಯಾರೂ ಅಲ್ಲ ಭಾರತ ದೇಶದ ಪ್ರಧಾನ ಮಂತ್ರಿಗಳಾಗಿದ್ದ ಚರಣ್ ಸಿಂಗ್ ಚೌಧರಿಯವರು. ಇದು ನಿಜವಾಗಲು ಕೂಡ ನಡೆದಂತಹ ನೈಜ ಘಟನೆಯಾಗಿದೆ. 1979 ರಲ್ಲಿ ಭಾರತ ದೇಶದ ಪ್ರಧಾನ ಮಂತ್ರಿಯಾಗಿದ್ದ ಚರಣ್ ಸಿಂಗ್ ಚೌಧರಿಯವರು ಈ ಪೊಲೀಸ್ ಠಾಣೆಗೆ ಕಾರ್ಯದಕ್ಷತೆಯನ್ನು ಪರಿಶೀಲಿಸಲು ರೈತನ ವೇಷದಲ್ಲಿ ಹೋಗಿದ್ದರು.

ರೈತರ ಜೊತೆಗೆ ಹಾಗೂ ಜನಸಾಮಾನ್ಯರ ಜೊತೆಗೆ ಪೊಲೀಸರು ಯಾವ ರೀತಿ ವ್ಯವಹರಿಸುತ್ತಾರೆ ಎಂಬುದನ್ನು ತಾವು ಖುದ್ದು ಪರಿಶೀಲಿಸಲು ರೈತನ ವೇಷದಲ್ಲಿ ಬಂದಿದ್ದರು. ರೈತರ ಬಳಿ ಲಂಚವನ್ನು ಪಡೆಯುತ್ತಿದ್ದಂತೆ ಎಲ್ಲ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದರು. ಈ ಸುದ್ದಿ ದೇಶದಾದ್ಯಂತ ಹರಡಿದ ಮಟ್ಟದಲ್ಲಿ ಸಂಚಲನವನ್ನು ಸೃಷ್ಟಿಸಿತ್ತು. ಹಿಂದಿನ ಕಾಲದಲ್ಲಿ ರಾಜರು ಕೂಡ ಮಾರುವೇಷದಲ್ಲಿ ಬಂದು ತಮ್ಮ ಪ್ರಜೆಗಳ ಕಷ್ಟ ಸುಖವನ್ನು ತಿಳಿದು ಅದರಂತೆ ರಾಜ್ಯಭಾರ ಮಾಡುತ್ತಿದ್ದರು.

ಅದರಂತೆ ಚರಣ್ ಸಿಂಗ್ ರವರು ಕೂಡ ತಾವೇ ಖುದ್ದಾಗಿ ಬಂದು ಎಲ್ಲವನ್ನು ಪರಿಶೀಲಿಸಿದ್ದರು. ಕೆಲವು ವರ್ಷಗಳ ಹಿಂದಷ್ಟೇ ಇದೇ ರೀತಿ ಇತ್ತೀಚಿಗೆ ನಡೆದಿತ್ತು. ಇದು ನಡೆದಿದ್ದು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ. ಸಿದ್ದಾರ್ಥ್ ಕೌಶಲ್ ಎನ್ನುವ ದಕ್ಷ ಅಧಿಕಾರಿಯೊಬ್ಬರು ತಮ್ಮ ವ್ಯಾಪ್ತಿಗೆ ಬರುವಂತಹ ಪೊಲೀಸ್ ಠಾಣೆಗಳಲ್ಲಿ ಪೊಲೀಸ್ ಅಧಿಕಾರಿಗಳು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ನೋಡಲು ಇದೇ ರೀತಿಯ ಉಪಾಯವನ್ನು ಹೂಡಿದ್ದರು. ಇದೇ ಹಿನ್ನೆಲೆಯಲ್ಲಿ ಸಿದ್ದಾರ್ಥ್ ಕೌಶಲ ರವರು ಉಂಗೋಲಿ ಎನ್ನುವ ಪೊಲೀಸ್ ಠಾಣೆಗೆ ಜಗದೀಶ್ ಎನ್ನುವವರನ್ನು ಮಾರುವೇಶದಲ್ಲಿ ಕಳುಹಿಸಿಕೊಡುತ್ತಾರೆ.

ಜಗದೀಶ್ ಪೊಲೀಸ್ ಠಾಣೆಗೆ ಹೋಗಿ ನನ್ನ ಮೊಬೈಲ್ ಕಳೆದು ಹೋಗಿದೆ ಎಂಬುದಾಗಿ ದೂರನ್ನು ಕೊಡಲು ಬರುತ್ತಾರೆ. ಆಗ ಅಲ್ಲಿದ್ದ ಪೊಲೀಸ್ ಸಿಬ್ಬಂದಿಗಳು ಅವರ ಬಳಿ ನಿರ್ಲಕ್ಷದಿಂದ ನಡೆದುಕೊಳ್ಳುತ್ತಾರೆ. ಕೊನೆಗೂ ಬೇಕು ಬೇಡ ಎನ್ನುವಂತೆ ದೂರನ್ನು ಬರೆದುಕೊಳ್ಳುತ್ತಾರೆ. ಕೊನೆಪಕ್ಷ ರಸೀದಿಯನ್ನು ಆದರೂ ಕೊಡಿ ಎಂದು ಜಗದೀಶ್ ಕೇಳಿದಾಗ ಅದು ನಿನ್ನದೇ ಎನ್ನುವುದಕ್ಕೆ ದಾಖಲೆಗಳನ್ನು ತೆಗೆದುಕೊಂಡು ಬಾ ಎಂಬುದಾಗಿ ತಿರಸ್ಕಾರ ಭಾವನೆಯಿಂದ ಮಾತನಾಡುತ್ತಾರೆ.

ಇದಾದ ನಂತರ ಇಬ್ಬರ ನಡುವೆ ಕೂಡ ಸಾಕಷ್ಟು ವಾಗ್ವಾದಗಳು ನಡೆಯುತ್ತಿವೆ ಆದರೆ ಜಗದೀಶ ಅವರು ಅಲ್ಲಿ ಏನು ಹೇಳದೆ ಸುದ್ದಿಯನ್ನು ಎಸ್ಪಿ ಸಿದ್ದಾರ್ಥ್ ಕೌಶಲ್ ಅವರಿಗೆ ಒಪ್ಪಿಸುತ್ತಾರೆ. ಆಗ ಸಿದ್ದಾರ್ಥ್ ಕೌಶಲ್ ರವರು ಠಾಣೆಯಲ್ಲಿ ಇದ್ದ ಎಲ್ಲರ ಮೇಲೂ ಕೂಡ ಬೇಜವಾಬ್ದಾರಿ ನಡವಳಿಕೆಯ ಕಾರಣದಿಂದಾಗಿ ಸಸ್ಪೆಂಶನ್ ಆರ್ಡರ್ ಮಾಡುತ್ತಾರೆ. ಸಿಟಿಯಲ್ಲಿರುವ ಪೊಲೀಸ್ ಠಾಣೆಯಲ್ಲಿ ಹೀಗೆ ಆದರೆ ಗ್ರಾಮೀಣ ಭಾಗದಲ್ಲಿ ಇರುವ ಪೊಲೀಸ್ ಠಾಣೆಯಲ್ಲಿ ಹೇಗೆ ಎಂಬ ಮಾತು ಕೂಡ ಅವರ ಮನಸ್ಸಿನಲ್ಲಿ ಹೊಕ್ಕಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ವೈರಲ್ ಕೂಡ ಆಗಿತ್ತು. ಸ್ವಾತಂತ್ರ್ಯ ಸಿಕ್ಕಿ ಇಷ್ಟು ವರ್ಷವಾದರೂ ಕೂಡ ಒಬ್ಬ ಸಾಮಾನ್ಯ ನಾಗರಿಕ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲು ಇಷ್ಟೆಲ್ಲ ಓಡಾಡಬೇಕಾಗಿದೆ ಒದ್ದಾಡ ಬೇಕಾಗಿದೆ ನೋಡಿ. ಈ ಕಾನೂನು-ಸುವ್ಯವಸ್ಥೆ ಬದಲಾದರೆ ಮಾತ್ರ ನಮ್ಮ ದೇಶ ರಾಮರಾಜ್ಯ ವಾಗಲು ಸಾಧ್ಯ.