ರಾಜೀನಾಮೆ ಪಡೆದುಕೊಳ್ಳುವ ಮುನ್ನ ಅಮಿತ್ ಶಾ ರವರ ಪುತ್ರನಿಗೆ ಕರೆಮಾಡಿ ವಿರಾಟ್ ಕೊಹ್ಲಿ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಭಾರತೀಯ ಕ್ರಿಕೆಟ್ ಕ್ಷೇತ್ರದಲ್ಲಿ ಎಲ್ಲಾ ಕ್ರಿಕೆಟ್ ಪ್ರೇಮಿಗಳು ಊಹಿಸಲು ಕೂಡ ಸಾಧ್ಯವಾಗದಂತಹ ವಿದ್ಯಮಾನಗಳು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿವೆ ಎಂಬುದು ನಿಮಗೆ ಈಗಾಗಲೇ ಸುದ್ದಿಗಳ ಮೂಲಕ ತಿಳಿದು ಬಂದಿದೆ. ನಾಯಕ ವಿರಾಟ್ ಕೊಹ್ಲಿ ರವರು ಟಿ20 ವರ್ಲ್ಡ್ ಕಪ್ ಸಂದರ್ಭದಲ್ಲಿ ಈ ಟೂರ್ನಿಮೆಂಟ್ ಮುಗಿದ ಕೂಡಲೇ ನಾನು ಟಿ20 ತಂಡದ ನಾಯಕನ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ ಎಂಬುದಾಗಿ ಹೇಳಿದ್ದರು. ಆ ಸಂದರ್ಭದಲ್ಲಿ ಭಾರತ ಮೊದಲ ಬಾರಿಗೆ ನಾಕೌಟ್ ಹಂತ ಕೂಡ ತೇರ್ಗಡೆಯಾಗದ ಹೀನಾಯವಾಗಿ ಸೋತಿತ್ತು.

ಇದಾದ ಕೂಡಲೇ ವಿರಾಟ್ ಕೊಹ್ಲಿ ಅವರು ತಮ್ಮ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಬಿಸಿಸಿಐ ಆಯ್ಕೆ ಸಮಿತಿ ವಿರಾಟ್ ಕೊಹ್ಲಿ ಅವರಿಗೆ ಯಾವುದೇ ಸೂಚನೆಯನ್ನು ನೀಡದೆ ಅವರನ್ನು ಏಕದಿನ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಸಿತ್ತು. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯನ್ನು ಕೂಡ ಮಾಡಿತ್ತು. ಈಗ ಎರಡು ಫಾರ್ಮೆಟ್ ನ ನಾಯಕನ ಸ್ಥಾನದಿಂದ ಕೆಳಗಿಳಿದ ಮೇಲೆ ವಿರಾಟ್ ಕೊಹ್ಲಿ ರವರು ಸೌತ್ ಆಫ್ರಿಕಾ ಸರಣಿಯನ್ನು ಸೋತ ನಂತರ ಟೆಸ್ಟ್ ತಂಡದ ನಾಯಕನ ಸ್ಥಾನಕ್ಕೆ ರಾಜಿನಾಮೆ ನೀಡಿ ಕ್ರಿಕೆಟ್ ಪ್ರೇಮಿಗಳಿಗೆ ಆಶ್ಚರ್ಯವನ್ನು ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಗ್ರಹ ಸಚಿವರಾಗಿರುವ ಅಮಿತ್ ಶಾ ರವರ ಪುತ್ರ ಜಯ್ ಶಾ ರವರಿಗೆ ಕರೆಮಾಡಿ ಏನು ಹೇಳಿದ್ದರು ಗೊತ್ತಾ ಬನ್ನಿ ನಾವು ನಿಮಗೆ ಆದರೆ ಕುರಿತಂತೆ ಹೇಳುತ್ತೇವೆ. ಹೌದು ಗೆಳೆಯರೇ ವಿರಾಟ್ ಕೊಹ್ಲಿ ರವರು ಬಿಸಿಸಿಐನ ಕಾರ್ಯದರ್ಶಿಯಾಗಿರುವ ಜಯ್ ಶಾ ರವರಿಗೆ ಕರೆ ಮಾಡುವ ಮೂಲಕ ತನ್ನ ರಾಜೀನಾಮೆ ನಿರ್ಧಾರವನ್ನು ತಿಳಿಸಿದ್ದಾರೆ, ನನ್ನ ರಾಜಿನಾಮೆಯನ್ನು ಅಂಗೀಕಾರ ಮಾಡುವಂತೆ ಮನವಿ ಮಾಡಿದ್ದಾರೆ, ಮೊದಲು ಇದಕ್ಕೆ ಒಪ್ಪದ ಜಯ್ ಶಾ ರವರ ಕೊನೆಗೆ ಕೊಹ್ಲಿ ರವರ ಮನವಿ ಮೇರೆಗೆ ಒಪ್ಪಿಕೊಂಡಿದ್ದಾರೆ. ಇನ್ನು ಮೊದಲಿಗೆ ವಿರಾಟ್ ಕೊಹ್ಲಿ ಇರುವವರು ನಾಯಕನ ಸ್ಥಾನದಿಂದ ಕೆಳಗಿಳಿಯುವ ಬಗ್ಗೆ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರಿಗೆ ಸುದ್ದಿಯನ್ನು ಮುಟ್ಟಿಸಿದ್ದರು. ವಿರಾಟ್ ಕೊಹ್ಲಿ ರವರ ನಿರ್ಧಾರವನ್ನು ಬಿಸಿಸಿಐ ಕೂಡ ಸ್ವಾಗತಿಸಿದ್ದು ಮುಂದಿನ ದಿನಗಳಲ್ಲಿ ಯಾರು ಕಪ್ತಾನ ರಾಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.