ನಾಳೆ ನಡೆಯಲಿರುವ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟಾರ್ಗೇಟ್ ಮಾಡಲಿರುವ ಆಟಗಾರರು ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಐಪಿಎಲ್ ನ ಮೆಗಾ ಹರಾಜು ನಡೆಯಲು ಇನ್ನು ಕೆಲವೇ ಘಂಟೆಗಳು ಬಾಕಿ ಇದೆ. ಈ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟಾರ್ಗೇಟ್ ಮಾಡಲಿರುವ ಆಟಗಾರರ ಪಟ್ಟಿ ಬಿಡುಗಡೆಯಾಗಿದೆ. ಈಗಾಗಲೇ ಚೆನ್ನೈ ತಂಡ ರವೀಂದ್ರ ಜಡೇಜಾ, ಮೊಯಿನ್ ಅಲಿ, ರುತುರಾಜ್ ಗಾಯಕ್ವಾಡ್, ಹಾಗೂ ಮಹೇಂದ್ರ ಸಿಂಗ್ ಧೋನಿಯವರನ್ನ ರಿಟೇನ್ ಮಾಡಿಕೊಂಡಿದೆ. ಈಗ ಹರಾಜಿನಲ್ಲಿ ಚೆನ್ನೈ ತಂಡ ಟಾರ್ಗೇಟ್ ಮಾಡಲಿರುವ ಆಟಗಾರರು ಯಾರು ಎಂದು ತಿಳಿಯೋಣ ಬನ್ನಿ‌.

1.ದೇವದತ್ ಪಡಿಕ್ಕಲ್ : ಕಳೆದ ಭಾರಿ ಆರ್ಸಿಬಿ ಪಾಳಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ದೇವದತ್ ಈ ಭಾರಿ ಹರಾಜಿಗೆ ಲಭ್ಯವಾಗಿದ್ದಾರೆ. ಚೈನ್ನೈ ತಂಡ ಇವರನ್ನು ಖರೀದಿಸಿ, ರುತುರಾಜ್ ಗಾಯಕ್ವಾಡ್ ರವರೊಂದಿಗೆ ಇನ್ನಿಂಗ್ಸ್ ಆರಂಭಿಸುವ ಪ್ರಯತ್ನದಲ್ಲಿದೆ. ಪಡಿಕ್ಕಲ್ 2 ಕೋಟಿಯ ಮೂಲಬೆಲೆ ಹೊಂದಿದ್ದಾರೆ.

2.ಮಹಮದ್ ಶಮಿ : ಕಳೆದ ಭಾರಿ ಚೈನ್ನೈ ತಂಡದಲ್ಲಿದ್ದ ವೇಗಿಗಳನ್ನ ಈ ಭಾರಿ ಆ ತಂಡ ರಿಟೇನ್ ಮಾಡಿಕೊಂಡಿಲ್ಲ. ಆ ಕಾರಣಕ್ಕೆ ಭಾರತ ತಂಡದ ವೇಗಿ ಮಹಮದ್ ಶಮಿ ಮೇಲೆ ಕಣ್ಣಿಟ್ಟಿದೆ. ಮಹಮದ್ ಶಮಿ ಕೂಡ ಎರಡು ಕೋಟಿ ರೂ ಮೂಲ ಬೆಲೆ ಹೊಂದಿದ್ದಾರೆ.

3.ಟ್ರೆಂಟ್ ಬೌಲ್ಟ್ – ಟಿ 20 ಕ್ರಿಕೇಟ್ ನ ಏಡಗೈ ಬೌಲರ್ ಆಗಿರುವ ಟ್ರೆಂಟ್ ಬೌಲ್ಟ್ ಗೆ ಬೇಡಿಕೆ ಹೆಚ್ಚಿದೆ. ಪವರ್ ಪ್ಲೇ ಹಾಗೂ ಸ್ಲಾಗ್ ಓವರ್ ಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡುವ ಬೌಲ್ಟ್ ರನ್ನು ಖರೀದಿಸಿ, ಸ್ಟ್ರೈಕ್ ಬೌಲರ್ ಆಗಿ ನೇಮಿಸಿಕೊಳ್ಳಲು ಚೆನ್ನೈ ತಂಡ ಚಿಂತಿಸಿದೆ. ಇವರು 2 ಕೋಟಿ ರೂ ಮೂಲಬೆಲೆ ಹೊಂದಿದ್ದಾರೆ.

4.ಜೇಸನ್ ಹೋಲ್ಡರ್ : 1.5 ಕೋಟಿ ರೂ ಮೂಲಬೆಲೆ ಹೊಂದಿರುವ ಹೋಲ್ಡರ್ ಉತ್ತಮ ಆಲ್ ರೌಂಡರ್. ಕಳೆದ ಭಾರಿ ಇಂಗ್ಲೆಂಡ್ ನ ಆಲ್ ರೌಂಡರ್ ಸ್ಯಾಮ್ ಕರನ್ ಸ್ಥಾನದಲ್ಲಿ ಇವರನ್ನು ಆಡಿಸಲು ಮ್ಯಾನೇಜ್ ಮೆಂಟ್ ಚಿಂತಿಸುತ್ತಿದೆ.

5.ಡೇವಿಡ್ ವಾರ್ನರ್ : ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸಮನ್ ಕಳೆದ ಭಾರಿ ಹೈದರಾಬಾದ್ ತಂಡದಲ್ಲಿದ್ದರು. ಈ ಭಾರಿ ಅವರು ಹರಾಜಿಗೆ ಲಭ್ಯವಾಗಿದ್ದಾರೆ. 2 ಕೋಟಿ ಮೂಲಬೆಲೆ ಹೊಂದಿರುವ ಇವರನ್ನು ಖರೀದಿಸಿ, ಫ್ಲಾಪ್ ಡ್ಯು ಪ್ಲೇಸಿಸ್ ಸ್ಥಾನ ಭರಿಸಲು ಚಿಂತನೆ ನಡೆಸುತ್ತಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.