ರೈನಾ ರವರನ್ನು ಕೈ ಬಿಟ್ಟಿದಕ್ಕೆ ಅಲ್ಲವೇ ಅಲ್ಲ, ಮತ್ತೊಂದು ಕಾರಣಕ್ಕೆ ಚೆನ್ನೈ ವಿರುದ್ಧ ಗರಂ ಆದ ಅಭಿಮಾನಿಗಳು, ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕೊನೆಗೂ ಬಹು ನಿರೀಕ್ಷಿತ ಟಾಟಾ ಐಪಿಎಲ್ 2020ರ ಹರಾಜು ಯಶಸ್ವಿಯಾಗಿ ಪೂರ್ಣಗೊಂಡಿದೆ. ಕೆಲವೊಂದು ಆಟಗಾರರ ಹರಾಜು ಮತ್ತು ಎಲ್ಲರನ್ನೂ ಕೂಡ ಬೆರಗುಗೊಳಿಸಿದೆ. ಅದರಲ್ಲೂ ಇಂದು ನಾವು ಮಾತನಾಡಲು ಹೊರಟಿರುವುದು ನಾಲ್ಕು ಬಾರಿ ಚಾಂಪಿಯನ್ ಆಗಿರುವ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕುರಿತಂತೆ. ಮಹೇಂದ್ರ ಸಿಂಗ್ ಧೋನಿ ರವರ ನಾಯಕತ್ವದಲ್ಲಿ ಅನುಭವಿ ತಂಡವಾಗಿರುವ ಚೆನ್ನೈ ಸೂಪರ್ ಕಿಂಗ್ ಈಗಾಗಲೇ ಐಪಿಎಲ್ ನ ಇತಿಹಾಸದಲ್ಲಿ ನಾಲ್ಕು ಬಾರಿ ಕಪ್ ಗೆದ್ದಿರುವ ಸಾಧನೆಯನ್ನು ಮಾಡಿದೆ.

ಹೀಗಿದ್ದರೂ ಕೂಡ ಈ ಬಾರಿಯ ಹರಾಜು ಎನ್ನುವುದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳಿಗೆ ನಿರಾಶೆಯನ್ನು ಮೂಡಿಸಿತ್ತು. ಯಾಕೆಂದರೆ ಮಿಸ್ಟರ್ ಐಪಿಎಲ್ ಎಂದೇ ಖ್ಯಾತರಾಗಿರುವ ಸುರೇಶ್ ರೈನಾ ರವರನ್ನು ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಖರೀದಿಸಲಿಲ್ಲ. ಇದಕ್ಕೆ ಮ್ಯಾನೇಜ್ಮೆಂಟ್ ಅವರ ಫಾರ್ಮ್ ಕುರಿತಂತೆ ವಿವರಣೆ ನೀಡಿತ್ತು. ಇದಾದನಂತರ ಚೆನ್ನೈ ತಂಡದ ಮ್ಯಾಚ್ ವಿನ್ನರ್ ಆಗಿರುವ ಡುಪ್ಲೆಸಿಸ್ ಅವರನ್ನು ಕೂಡ ಖರೀದಿಸುವಲ್ಲಿ ವಿಫಲವಾಗಿತ್ತು. ಈ ಎರಡು ಕಾರಣಗಳು ಚೆನ್ನೈ ಅಭಿಮಾನಿಗಳನ್ನು ಕಾಡುತ್ತಿರುವ ಬೆನ್ನಲ್ಲೇ ಇನ್ನೊಂದು ವಿಚಾರ ಈಗ ಚೆನ್ನೈ ಅಭಿಮಾನಿಗಳಲ್ಲಿ ತಂಡದ ವಿರುದ್ಧ ಬಾಯ್ಕಾಟ್ ಚೆನ್ನೈ ಎಂಬ ಟ್ರೆಂಡ್ ಮಾಡುವಂತೆ ಮಾಡಿದೆ. ಅಷ್ಟಕ್ಕೂ ಚೆನ್ನೈ ತಂಡದ ಅಭಿಮಾನಿಗಳು ಚೆನ್ನೈ ತಂಡವನ್ನು ಹೀಗೆ ವಿರೋಧಿಸಲು ಕಾರಣವೇನೆಂಬುದನ್ನು ತಿಳಿಯೋಣ ಬನ್ನಿ.

ಹೌದು ಹೀಗೆ ಆಗುತ್ತಿರುವುದು ಇದೇ ಮೊದಲಲ್ಲ. ಶ್ರೀಲಂಕಾ ಮೂಲದ ಆಟಗಾರ ಮಹೇಶ್ ತೀಕ್ಷಣ ರವರನ್ನು ಖರೀದಿಸಿ ರುವುದಕ್ಕೆ ಚೆನ್ನೈ ಅಭಿಮಾನಿಗಳು ಕೋಪ ಗೊಂಡಿರುವುದು. ಮೊದಲಿನಿಂದಲೂ ಕೂಡ ತಮಿಳುನಾಡು ಹಾಗೂ ಶ್ರೀಲಂಕಾ ನಡುವಿನ ಬಿಕ್ಕಟ್ಟು ನಿಮಗೆಲ್ಲಾ ಗೊತ್ತೇ ಇರುತ್ತದೆ. ಇದೇ ಕಾರಣಕ್ಕಾಗಿ ತಂಡದಲ್ಲಿ ಶ್ರೀಲಂಕಾ ಮೂರು ಆಟಗಾರರು ಇರಬಾರದು ಎಂಬುದಾಗಿ ಚೆನ್ನಾಗಿ ಮಾನಿಗಳು ತಂಡದ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಕೂಡ ಚೆನ್ನೈ ತಂಡದಲ್ಲಿ ಕುಶಾಲ್ ಪೆರೇರಾ ಮುತ್ತಯ್ಯ ಮುರಳೀಧರನ್ ನುವಾನ್ ಕುಲಶೇಖರ ಹೀಗೆ ಹಲವಾರು ಆಟಗಾರರು ಆಡ್ ಇದ್ದಾಗಲೂ ಕೂಡ ಇದೇ ರೀತಿಯ ಪ್ರತಿರೋಧ ವ್ಯಕ್ತವಾದಾಗ ಅವರು ತಂಡದಿಂದ ಹೊರ ನಡೆದಿದ್ದರು. ಈ ವಿಚಾರ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ನೋಡಬೇಕಾಗಿದೆ. ಇದನ್ನೂ ಓದಿ: ಮ್ಯಾಕ್ಸ್ ವೆಲ್ ಅಲ್ಲ, ಡುಪ್ಲೆಸಿಸ್ ಅಲ್ಲ, ಕಾರ್ತಿಕ್ ಕೂಡ ಅಲ್ಲ, ನಾಯಕನಾಗಿ ಕೇಳಿ ಬರುತ್ತಿರುವ ಹೆಸರು ಯಾರದು ಗೊತ್ತೇ?? ಇವರು ಆಯ್ಕೆಯಾದರೆ ಈ ಸಲ ಕಪ್ ನಮ್ದೇ ಫಿಕ್ಸ್. ಯಾರು ಗೊತ್ತೇ??