ಆರ್ಸಿಬಿ ತಂಡ ಅಂದು ಬಿಟ್ಟು ಹೋಗಿ ತಪ್ಪು ಮಾಡಿದೆ ಎಂದು ಹೇಳಿಕೊಂಡ ಆಸ್ಟ್ರೇಲಿಯಾ ಆಟಗಾರ, ಈಗ ಈತನ ಪರಿಸ್ಥಿತಿ ಏನಾಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಬಾರಿಯ ಐಪಿಎಲ್ ನ ಹರಾಜಿನಲ್ಲಿ ಕೆಲವೊಂದು ಅಂಡರ್ ಡಾಗ್ ಆಟಗಾರರು ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಇನ್ನು ಕೆಲವು ಹೆಸರಾಂತ ಆಟಗಾರರು ಸೇಲ್ ಆಗಿದೆ ಹಾಗೆ ಉಳಿದಿದ್ದಾರೆ. ಈಗಾಗಲೇ ಬಹುತೇಕ ಎಲ್ಲಾ ತಂಡದ ಆಯ್ಕೆಗಾರರು ತಮಗೆ ಬೇಕಾಗಿರುವಂತಹ ಆಟಗಾರರು ಸಿಕ್ಕಿದ್ದಾರೆ ಎಂಬುದಾಗಿ ಖುಷಿಪಟ್ಟಿದ್ದಾರೆ. ಇನ್ನೇನು ಕೆಲವೇ ವಾರಗಳಲ್ಲಿ ಪ್ರಾರಂಭವಾಗುವ ಅಂತಹ ಐಪಿಎಲ್ ಹಬ್ಬದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರಗಳು ಈಗಾಗಲೇ ಪ್ರಾರಂಭವಾಗಿದೆ.

ಯಾಕೆಂದರೆ ಮೆಗಾ ಹರಾಜು ನಡೆದಿರುವುದರಿಂದಾಗಿ ಬಹುತೇಕ ಎಲ್ಲಾ ತಂಡ ಹೊಸದರಂತೆ ಕಾಣಿಸುತ್ತಿದೆ. ಇನ್ನು ನಾವು ಇಂದು ಮಾತನಾಡಲು ಹೊರಟಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕುರಿತಂತೆ. ಹೌದು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಬಾರಿಯ ಹರಾಜಿನಲ್ಲಿ ಹಲವಾರು ಆಟಗಾರರು ಸೇಲ್ ಆಗಿಲ್ಲ. ಉದಾಹರಣೆಗೆ ಸುರೇಶ್ ರೈನ ಆರನ್ ಫಿಂಚ್ ಕೇನ್ ರಿಚರ್ಡ್ಸನ್ ಆಡಮ್ ಜಂಪ ಸ್ಟೀವ್ ಸ್ಮಿತ್ ಹೀಗೆ ಹಲವಾರು ಜನರು. ಇದರಲ್ಲಿ ಕೇನ್ ರಿಚರ್ಡ್ಸನ್ ಹಾಗೂ ಆಡಮ್ ಜಂಪ ಈ ಬಾರಿಯ ಟಿ-20ವಿಶ್ವಕಪ್ ವಿಜೇತ ಆಸ್ಟ್ರೇಲಿಯ ತಂಡದ ಸದಸ್ಯರು. ಆದರೂ ಕೂಡ ಈ ಬಾರಿ ಯಾರು ಅವರನ್ನು ಖರೀದಿಸಿಲ್ಲ. ಇದಕ್ಕೆ ಕಾರಣವನ್ನು ಕೂಡ ಈಗ ಅವರ ನೀಡಿದ್ದಾರೆ.

ಹೌದು ಕಳೆದ ಬಾರಿಯ ಐಪಿಎಲ್ ನ ಮಧ್ಯದಲ್ಲಿ ಆಡಂ ಜಂಪ ಹಾಗೂ ಕೆನ್ ರಿಚರ್ಡ್ಸನ್ ಇಬ್ಬರು ಕೂಡ ತಂಡವನ್ನು ಮಧ್ಯದಲ್ಲೇ ಬಿಟ್ಟು ಆಸ್ಟ್ರೇಲಿಯಾಗೆ ಹೋಗಿದ್ದರು. ಕೇನ್ ರಿಚರ್ಡ್ಸನ್ ಹೇಳುವಂತೆ ಹೀಗೆ ಅರ್ಧಕ್ಕೆ ಹೋಗುತ್ತಾರೆ ಎನ್ನುವ ಹಿನ್ನೆಲೆಯಲ್ಲಿ ಯಾವುದೇ ಫ್ರಾಂಚೈಸಿ ಈ ಬಾರಿ ತನ್ನನ್ನು ಕೊಂಡುಕೊಂಡಿಲ್ಲ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ. ಕಳೆದ ಬಾರಿ ಪರಿಸ್ಥಿತಿ ಹಾಗಿತ್ತು ಅದೇ ಕಾರಣಕ್ಕಾಗಿ ನಾನು ಹೋಗಿದ್ದು ಆದರೆ ಈ ಬಾರಿ ಅದೇ ಕಾರಣಕ್ಕೆ ನನ್ನನ್ನು ಯಾರು ಖರೀದಿಸಿಲ್ಲ ಎಂಬುದಾಗಿ ಬೇಸರ ಪಟ್ಟಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ತಪ್ಪದೆ ಹಂಚಿಕೊಳ್ಳಿ.