ಕೈ ಕೊಟ್ಟ ಮ್ಯಾಕ್ಸ್ ವೆಲ್, ಬೇರೆ ಆಯ್ಕೆ ಇಲ್ಲದೇ ಈತನಿಗೆ ನಾಯಕನ ಸ್ಥಾನ ಫಿಕ್ಸ್, ಯಾರು ಗೊತ್ತೇ ಆ ಅದೃಷ್ಟದ ಆಟಗಾರ??

ನಮಸ್ಕಾರ ಸ್ನೇಹಿತರೇ ಈಗಾಗಲೇ ಈ ಬಾರಿಯ ಐಪಿಎಲ್ ಗು ಮುನ್ನ ಮೆಗಾ ಹರಾಜು ಪ್ರಕ್ರಿಯೆ ಮುಗಿದಿದ್ದು ಎಲ್ಲಾ ತಂಡಗಳು ಕೂಡ ನವನವೀನವಾಗಿ ಕಾಣಿಸುತ್ತಿವೆ. ಯಾರು ಗೆಲ್ಲುತ್ತಾರೆ ಎಂದು ಹೇಳಲು ಕೂಡ ಕಷ್ಟವಾಗುತ್ತಿದೆ. ಇನ್ನು ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಮಾತನಾಡುವುದಾದರೆ ನಮ್ಮ ತಂಡದಲ್ಲಿ ಕೂಡ ದೊಡ್ಡ ದೊಡ್ಡ ಹೆಸರನ್ನು ಹೊಂದಿರುವ ಕಿಲಾಡಿಗಳು ತಂಡವನ್ನು ಸೇರಿಕೊಂಡಿದ್ದಾರೆ.

ಈ ಬಾರಿಯ ತಂಡವನ್ನು ನೋಡಿದರೆ ಪಕ್ಕಾ ಈಸಲ ಕಪ್ ನಮ್ಮದೇ ಎಂದು ಹೇಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕಾಡುತ್ತಿರುವ ಒಂದೇ ಒಂದು ಸಮಸ್ಯೆಯೆಂದರೆ ಅದು ತಂಡದ ಕಪ್ತಾನ ಯಾರು ಎನ್ನುವುದು. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕಳೆದ ಸೀಸನ್ ನ ಐಪಿಎಲ್ ಮುಗಿಯುವುದಕ್ಕೆ ಮುನ್ನವೇ ವಿರಾಟ್ ಕೊಹ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಹೀಗಾಗಿ ಈ ಬಾರಿ ಅವರು ತಂಡದಲ್ಲಿ ಬ್ಯಾಟ್ಸಮನ್ ಆಗಿ ಮಾತ್ರ ಕಾರ್ಯನಿರ್ವಹಿಸಲಿದ್ದಾರೆ. ಹೀಗಾಗಿ ಈ ಬಾರಿ ಯಾರು ನಾಯಕರಾಗಲಿದ್ದಾರೆ ಎಂಬುದರ ಕುರಿತಂತೆ ಹಲವಾರು ಹೆಸರುಗಳು ಮುಂದೆ ಬಂದಿದ್ದವು. ಕೊನೆಗೂ ಈಗ ಅದಕ್ಕೆ ಉತ್ತರ ಸಿಕ್ಕಿದೆ.

ಹೌದು ಸೌತ್ ಆಫ್ರಿಕಾ ಮೂಲದ ಡುಪ್ಲೆಸಿಸ್ ಈಬಾರಿಯ ನಾಯಕನ ಸ್ಥಾನಕ್ಕೆ ಪ್ರಬಲ ಅಭ್ಯರ್ಥಿ ಎಂಬುದಾಗಿ ಹಲವಾರು ಕ್ರಿಕೆಟ್ ವೆಬ್ಸೈಟ್ಗಳಲ್ಲಿ ಕೇಳಿಬರುತ್ತಿದೆ. ಈಗಾಗಲೇ ಸೌತ್ ಆಫ್ರಿಕಾ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿರುವ ಅನುಭವವನ್ನು ಹೊಂದಿದ್ದಾರೆ. ಚೆನ್ನೈ ಸೂಪರ್ ಕಿಂಗ್ ತಂಡದಲ್ಲಿ ಮ್ಯಾಚ್ ವಿನ್ನರ್ ಪರ್ಫಾರ್ಮೆನ್ಸ್ ಕೂಡ ನೀಡುತ್ತಿದ್ದರು. ಇಷ್ಟು ಮಾತ್ರವಲ್ಲದೆ ಈ ಬಾರಿ ಗ್ಲೆನ್ ಮ್ಯಾಕ್ಸ್ವೆಲ್ ತಮ್ಮ ಮದುವೆಯಿಂದಾಗಿ ಮೊದಲ ಕೆಲವು ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.

ಹೀಗಾಗಿ ಡುಪ್ಲೆಸಿಸ್ ಅವರನ್ನು ಹೊರತುಪಡಿಸಿದರೆ ಈ ಸ್ಥಾನಕ್ಕೆ ಯಾರು ಕೂಡ ಪರ್ಫೆಕ್ಟ್ ಅಲ್ಲ ಎಂಬುದು ಸ್ಪಷ್ಟವಾಗಿದೆ. ಈ ಬಾರಿ ಡುಪ್ಲೆಸಿಸ್ ರವರನ್ನು ಏಳು ಕೋಟಿ ರೂಪಾಯಿ ಕೊಟ್ಟು ಖರೀದಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡುಪ್ಲೆಸಿಸ್ ರವರ ಮೇಲೆ ಹಲವಾರು ನಿರೀಕ್ಷೆಗಳನ್ನು ಹೊಂದಿದೆ. ಕೇವಲ ಟೀಮ್ ಮ್ಯಾನೇಜ್ಮೆಂಟ್ ಮಾತ್ರವಲ್ಲದೆ ಅಭಿಮಾನಿಗಳು ಕೂಡ ಈ ಬಾರಿ ತಂಡದಿಂದ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರ ಐಪಿಎಲ್ ಪಂದ್ಯಾವಳಿಗಳು ಪ್ರಾರಂಭವಾದ ಮೇಲೆ ಸಿಗಲಿದೆ.