ಕೆ.ಎಲ್.ರಾಹುಲ್ ನಂತರ ಮತ್ತೊಬ್ಬ ಕನ್ನಡಿಗರನ್ನು ಟಾರ್ಗೆಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ, ಅನಿಲ್ ಕುಂಬ್ಳೆಗೆ ಎಚ್ಚರಿಕೆಯ ಸಂದೇಶ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ ನಲ್ಲಿ ಹೆಚ್ಚು ಕನ್ನಡಿಗರಿದ್ದ ತಂಡ. ಆಟಗಾರರು ಮಾತ್ರವಲ್ಲದೇ ಕೋಚ್ ಸಹ ಆಗಿದ್ದವರು ಕನ್ನಡಿಗ ಅನಿಲ್ ಕುಂಬ್ಳೆ. ಕೆಲವು ತಿಂಗಳುಗಳ ಹಿಂದೆ ನಾಯಕರಾಗಿದ್ದ ಕನ್ನಡಿಗ ಕೆ.ಎಲ್.ರಾಹುಲ್ ವಿರುದ್ದ ಬಹಿರಂಗವಾಗಿಯೇ ಮಾಲೀಕ ನೆಸ್ ವಾಡಿಯಾ ಅಸಮಾಧಾನ ವ್ಯಕ್ತಪಡಿಸಿದರು. ಆದರೇ ನಂತರ ಹರಾಜು ಪ್ರಕ್ರಿಯೆ ಮುಗಿದ ನಂತರ ತಂಡದಲ್ಲಿ ರಿಟೇನ್ ಆಗಿದ್ದ ಮತ್ತೊಬ್ಬ ಕನ್ನಡಿಗ ಮಾಯಾಂಕ್ ಅಗರವಾಲ್ ಗೆ ನಾಯಕನ ಪಟ್ಟ ನೀಡಿದೆ. ಆದರೇ ಈಗ ಕೋಚ್ ಅನಿಲ್ ಕುಂಬ್ಳೆ ಗೆ ಎಚ್ಚರಿಕೆಯ ಸಂದೇಶವನ್ನು ಸಹ ನೀಡಿದೆ.

ಹೌದು ಈ ಬಗ್ಗೆ ಹೇಳಿರುವ ಮಾಲೀಕ ನೆಸ್ ವಾಡಿಯಾ, ಉತ್ತಮ ತಂಡವನ್ನು ಹರಾಜಿನಲ್ಲಿ ಖರೀದಿಸುವುದಷ್ಟೇ ನಮ್ಮ ಕೆಲಸ. ಇನ್ನುಳಿದಿದ್ದು ತಂಡದ ಆಟಗಾರರು ಹಾಗೂ ಕೋಚ್ ನ ಕೆಲಸ. ಕಳೆದ ನಾಲ್ಕೈದು ಆವೃತ್ತಿಗಳಲ್ಲಿ ನಾವು ಸಾಕಷ್ಟು ನಿರಾಸೆ ಅನುಭವಿಸಿದ್ದೇವೆ. ಆದರೇ ಈ ಭಾರಿ ಆ ನಿರಾಸೆ ಪುನರಾವರ್ತನೆ ಆಗಲು ನಮಗೆ ಇಷ್ಟವಿಲ್ಲ. ಹಾಗಾಗಿ ನಾವು ಈ ಭಾರಿ ಉತ್ತಮ ಸೀಸನ್ ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ಮೂಲಕ ತಂಡದ ಕೋಚ್ ಹಾಗೂ ಆಟಗಾರರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.

ಪಂಜಾಬ್ ಕಿಂಗ್ಸ್ ತಂಡ ೨೦೧೪ ರಲ್ಲಿ ರನ್ನರ್ ಅಪ್ ಆಗಿದ್ದು ಬಿಟ್ಟರೇ ಆ ನಂತರ ಯಾವ ಸರಣಿಯಲ್ಲಿಯೂ ಪ್ಲೆ ಆಫ್ಸ್ ತಲುಪಿಲ್ಲ. ಕಳೆದ ಮೂರು ವರ್ಷದಿಂದ ಈ ತಂಡಕ್ಕೆ ಅನಿಲ್ ಕುಂಬ್ಳೆ ಕೋಚ್ ಆಗಿದ್ದಾರೆ. ಆದರೇ ಪ್ಲೇ ಆಫ್ ಗೆ ಅರ್ಹತೆ ಪಡೆಯಲು ವಿಫಲವಾಗಿದೆ. ಈ ಭಾರಿ ಉತ್ತಮ ಆಟಗಾರರನ್ನು ಖರೀದಿಸಿರುವ ಪಂಜಾಬ್ ಕಿಂಗ್ಸ್ ತಂಡ ಹೇಗೆ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ದೇಶಿ ಹಾಗೂ ವಿದೇಶಿ ಆಟಗಾರರ ಉತ್ತಮ ಸಂಯೋಜನೆ ಇರುವ ಈ ತಂಡಕ್ಕೆ ಕನ್ನಡಿಗ ಅನಿಲ್ ಕುಂಬ್ಳೆ ಹಾಗೂ ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್ ಕೋಚ್ ಆಗಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.