ಮುಂಬೈ ತಂಡ ಸೋಲಿನ ಮೇಲೆ ಸೋಲು ನೋಡುತ್ತಿರುವಾದ ಪಂದ್ಯ ಮುಗಿದ ಬಳಿಕ ರೋಹಿತ್ ಶರ್ಮ ವರ್ತನೆ ಮಾಡಿದ್ದು ಹೇಗೆ ಗೊತ್ತೇ??

ಐಪಿಎಲ್ ಟೂರ್ನಿ ಶುರುವಾಯಿತು ಅಂದ್ರೆ ಭಾರತಾದ್ಯಂತ ಸಲ್ಲಾ ಕ್ರಿಕೆಟ್ ಅಭಿಮಾನಿಗಳು ಪ್ರತಿದಿನ ಸಂಜೆ ಪಂದ್ಯಗಳನ್ನು ನೋಡಲು ಟಿವಿ ಮುಂದೆ ಕಾದು ಕುಳಿತಿರುತ್ತಾರೆ. ಈ ಬಾರಿ ಐಪಿಎಲ್ ನಲ್ಲಿ ಬಹುತೇಕ ಎಲ್ಲಾ ತಂಡಗಳು ಬಲಿಷ್ಠ ತಂಡಗಳೇ ಆಗಿದ್ದು, ಯಾವ ತಂಡ ಗೆಲ್ಲುತ್ತದೆ ಎಂದು ಊಹೆ ಮಾಡುವುದು ಕಷ್ಟವಾಗಿದೆ. ಈಗಾಗಲೇ ಕೊಲ್ಕತ್ತಾ ನೈಟ್ ರೈಡರ್ಸ್, ಪಂಜಾಬ್, ಆರ್.ಸಿ.ಬಿ ಹಾಗೂ ಇನ್ನು ಕೆಲವು ತಂಡಗಳು ಪಾಯಿಂಟ್ಸ್ ಟೇಬಲ್ ನಲ್ಲಿ ಸ್ಥಾನ ಪಡೆದುಕೊಂಡಿದೆ.

ಆದರೆ 5 ಬಾರಿ ಚಾಂಪಿಯನ್ಸ್ ಎನ್ನಿಸಿಕೊಂಡಿರುವ ಮುಂಬೈ ತಂಡ ಈ ಬಾರಿ ಸತತ ಸೋಲು ನೋಡಿ, ತತ್ತರಿಸಿದೆ. ಮುಂಬೈ ಟೀಮ್ ಕಳೆದ ಮ್ಯಾಚ್ ನಲ್ಲಿ ಸೋತ ಕಾರಣ ಕ್ಯಾಪ್ಟನ್ ರೋಹಿತ್ ಶರ್ಮಾ ಕೋಪಗೊಂಡಿದ್ದು, ಅವರ ರಿಯಾಕ್ಷನ್ ನೋಡಿ ಅದು ಅರ್ಥವಾಗಿದೆ. ಕೆಕೆಆರ್ ತಂಡದ ವಿರುದ್ಧ ನಡೆದ ಈ ಮ್ಯಾಚ್ ನಲ್ಲಿ, ಮುಂಬೈ ತಂಡ ಮೊದಲು ಬ್ಯಾಟಿಂಗ್ ಮಾಡಿ, 4 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತ್ತು, ಆದರೆ ಕೆಕೆಆರ್ ತಂಡ 16 ಓವರ್ ಗಳಲ್ಲಿ ಮ್ಯಾಚ್ ಮುಗಿಸಿ ಬಿಟ್ಟಿತ್ತು. ಕೆಕೆಆರ್ ತಂಡ ಬಲಿಷ್ಠ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಇಂದ ಮುಂಬೈ ತಂಡ ಸೋತು ಸುಣ್ಣವಾಯಿತು.

ಈ ಬಾರಿ ಕ್ಯಾಪ್ಟನ್ ಆಗಿರುವ ರೋಹಿತ್ ಶರ್ಮಾ ಅವರೇ ಫಾರ್ಮ್ ನಲ್ಲಿಲ್ಲ, ಪಂದ್ಯ ಮುಗಿದ ಬಳಿಕ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಅವರು ಸಿಟ್ಟಾಗಿದ್ದರು, ‘ಕಾಮೆಂಟೇಟರ್ ಗಳು ಕೇಳುತ್ತಿರುವ ಪ್ರಶ್ನೆಗಳು ಕೇಳಿಸುತ್ತಿಲ್ಲ, ವಾಲ್ಯೂಮ್ ಜಾಸ್ತಿ ಮಾಡಿ..’ ಎಂದು ಹೇಳುವ ಮೂಲಕ ತಮ್ಮಲ್ಲಿ ಎಷ್ಟು ಸಿಟ್ಟಿದೆ ಎಂದು ತೋರಿಸಿಕೊಟ್ಟರು. ಬಳಿಕ ಮಾತನಾಡಿದ ರೋಹಿತ್ ಶರ್ಮ ಅವರು, “ಮೊದಲ ಪಂದ್ಯದಲ್ಲೇ ಪ್ಯಾಟ್ ಕಮಿನ್ಸ್ ಅವರು ಈ ರೀತಿ ಆಡುತ್ತಾರೆ ಎಂದು ಊಹೆ ಮಾಡಿರಲಿಲ್ಲ. ಅವರಿಗೆ ಕ್ರೆಡಿಟ್ ಹೋಗುತ್ತದೆ. ಪಿಚ್ ಚೆನ್ನಾಗಿತ್ತು, ಬ್ಯಾಟಿರ್ ಗಳಿಗೆ ಅದು ಸಹಾಯವಾಯಿತು.

ಮೊದಲ ಕೆಲವು ಓವರ್ ಗಳಲ್ಲಿ ನಾವು ಎಡವಿದೆವು, ಕೊನೆಯ 4-5 ಓವರ್ ಗಳಲ್ಲಿ 70 ರನ್ ಗಳಿಸಿದ್ದು, ಉಪಯೋಗವಾಯಿತು. ಆ ಕ್ರೆಡಿಟ್ ಬ್ಯಾಟರ್ ಗಳಿಗೆ ಸೇರುತ್ತದೆ. ನಾವು ಅಂದುಕೊಂಡ ಹಾಗೆ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. 15 ಓವರ್ ಗಳ ವರೆಗೂ ಪಂದ್ಯ ನಮ್ಮ ಕಡೆಗೆ ಇತ್ತು, ಆದರೆ ಪ್ಯಾಟ್ ಕಮಿನ್ಸ್ ಬಂದ ನಂತರ ಪಂದ್ಯ ಕೆಕೆಆರ್ ತಂಡದ ಕಡೆಗೆ ತಿರುಗಿತು. ಕೊನೆಯ ಐದು ಓವರ್ ಗಳಲ್ಲಿ ಎಲ್ಲವೂ ಉಲ್ಟಾ ಹೊಡೆಯಿತು. ಇದನ್ನು ಅರಗಿಸಿಕೊಳ್ಳುವುದು ಕಷ್ಟ. ಮುಂದಿನ ಪಂದ್ಯದಲ್ಲಿ ಚೆನ್ನಾಗಿ ಅಡುತ್ತೇವೆ..” ಎಂದು ಸಿಟ್ಟು ಮತ್ತು ಬೇಸರದಿಂದ ಹೇಳಿದ್ದಾರೆ ರೋಹಿತ್ ಶರ್ಮಾ.