ಸಾಕ್ಷಿ ಸಮೇತ ವಿರಾಟ್ ವಿವಾದದ ಕುರಿತು ವಿರಾಟ್ ಬೆಂಬಲಕ್ಕೆ ನಿಂತ ಆರ್ಸಿಬಿ ತಂಡದ ಮ್ಯಾನೇಜ್ಮೆಂಟ್. ನಡೆದ್ದದೇನು ಗೊತ್ತೇ??

ಕಳೆದ ಶನಿವಾರ ನಡೆದ ಆರ್.ಸಿ.ಬಿ ವರ್ಸಸ್ ಮುಂಬೈ ಪಂದ್ಯದಲ್ಲಿ, ಆರ್.ಸಿ.ಬಿ ತಂಡ ಭರ್ಜರಿಯಾದ  ಗೆಲುವು ಸಾಧಿಸಿತು. ಆದರೆ ಅಂದಿನ ಪಂದ್ಯದಲ್ಲಿ ಮುಂಬೈ 152 ರನ್ ಗಳನ್ನು ಗಳಿಸಿತ್ತು, ಆ ಸ್ಕೋರ್ ಅನ್ನು ಆರ್.ಸಿ.ಬಿ ಚೇಸ್ ಮಾಡಬೇಕಿತ್ತು. ಮೊದಲ ಇಬ್ಬರು ಬ್ಯಾಟ್ಸ್ಮನ್ ಗಳಾದ, ಫಾಫ್ ಡು ಪ್ಲೆಸಿಸ್ ಮತ್ತು ಅನುಜ್ ರಾವತ್ ಬ್ಯಾಟಿಂಗ್ ಚೆನ್ನಾಗಿದ್ದ ಸಮಯದಲ್ಲೇ, ನಾಯಕ ಫಾಫ್ ವಿಕೆಟ್ ಅನ್ನು ಆರ್.ಸಿ.ಬಿ ಕಳೆದುಕೊಂಡಿತು. ಮೂರನೆಯ ಕ್ರಮಾಂಕದಲ್ಲಿ ವಿರಾಟ್ ಕೋಹ್ಲಿ ಅವರು ಬಂದು, ಉತ್ತಮವಾದ ಬ್ಯಾಟಿಂಗ್ ಶುರು ಮಾಡಿದರು. 48 ರನ್ ಗಳನ್ನು ಗಳಿಸಿದ್ದ ವಿರಾಟ್ ಕೋಹ್ಲಿ ಅವರು ಇನ್ಮೇನು ಅರ್ಧ ಶತಕ ಭಾರಿಸಬೇಕು ಎನ್ನುವಷ್ಟರಲ್ಲಿ, ಡೇವಿನ್ ಬ್ರೆವಿಸ್ ಅವರ ಎಸೆತವನ್ನು ವಿರಾಟ್ ಅವರಿಗೆ ಸರಿಯಾಗಿ ಗ್ರಹಿಸಲು ಸಾಧ್ಯವಾಗಲಿಲ್ಲ.

ಆ ಬಾಲ್ ಕಾಲಿಗೆ ಬಡಿದ್ದದ್ದನ್ನು ನೋಡಿದ ಅಂಪೈರ್, ಎಲ್.ಬಿ.ಡಬಲ್ಯೂ ಎಂದು ಡಿಸಿಷನ್ ನೀಡಿದರು. ಈ ನಿರ್ಣಯಕ್ಕೆ ವಿರಾಟ್ ಕೋಹ್ಲಿ ಅವರು, ಡಿ.ಆರ್.ಎಸ್ ನಿರ್ಣಯದ ಮೊರೆ ಹೋದರು. ಥರ್ಡ್ ಅಂಪೈರ್ ಅವರು, ಇದನ್ನು ಗಮನಿಸಿದರು, ಚೆಂಡು ವಿರಾಟ್ ಅವರ ಬ್ಯಾಟ್ ಮತ್ತು ಪ್ಯಾಡ್ ಅನ್ನು ಒಂದೇ ಕ್ಷಣದಲ್ಲಿ ತಗುಲಿದೆ ಎಂದು ಹೇಳಿ ಔಟ್ ಎಂದು ಡಿಸಿಷನ್ ನೀಡಿದರು. ಇದರಿಂದ ಅಸಮಾಧಾನಗೊಂಡೆ ಡಗೌಟ್ ಕಡೆಗೆ ಬಂದರು ಕೋಹ್ಲಿ. ತಮ್ಮ ಅಸಮಾಧಾನ ವನ್ನು ಗ್ರೌಂಡ್ ಗೆ ಬ್ಯಾಟ್ ಇಂದ ಹೊಡೆಯುವ ಮೂಲಕ ತಿಳಿಸಿದರು. ಅಂಪೈರ್ ಕೊಟ್ಟ ಈ ನಿರ್ಧಾರ ತಂಡದ ಗೆಲುವಿನ ಮೇಲೆ ಪರಿಣಾಮ ಬೀರಲಿಲ್ಲ, ನಂತರ ದಿನೇಶ್ ಕಾರ್ತಿಕ್ ಮತ್ತು ಮ್ಯಾಕ್ಸ್ವೆಲ್ ಬಂದು ಪಂದ್ಯವನ್ನು ಗೆಲ್ಲಿಸಿದರು.

ಆದರೆ ಅಂಪೈರ್ ಕೊಟ್ಟ ಈ ನಿರ್ಣಯಕ್ಕೆ ವಿರಾಟ್ ಅವರ ಅಭಿಮಾನಿಗಳಿಂದ ಮತ್ತು ಮತ್ತು ಆರ್.ಸಿ.ಬಿ ತಂಡದಿಂದ ಆಕ್ರೋಶ ವ್ಯಕ್ತವಾಗಿದೆ. ಅಂಪೈರ್ ಆದವರು ರೂಲ್ಸ್ ಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು ಎನ್ನಲಾಗುತ್ತಿದೆ. ಕ್ರಿಕೆಟ್ ಗೆ ರೂಲ್ಸ್ ಮಾಡಿವ ಎಂಸಿಸಿಯ ರೂಲ್ಸ್ ಗಳನ್ನು ಅಂಪೈರ್ ಆದವರು, ಸರಿಯಾಗಿ ತಿಳಿದುಕೊಳ್ಳಬೇಕು ಎಂದು ಆರ್.ಸಿ.ಬಿ ತಂಡ, ಎಂಎಸಿಸಿ ರೂಲ್ಸ್ ಅನ್ನು ಉಲ್ಲೇಖಿಸಿದೆ, “ಚೆಂಡು ಸ್ಟ್ರೈಕ್ ನಲ್ಲಿರುವ ವ್ಯಕ್ತಿಯನ್ನು ಮತ್ತು ಬ್ಯಾಟ್ ಅನ್ನು ಒಂದೇ ಸಾರಿ ಸ್ಪರ್ಶಿಸಿದರೆ, ಬ್ಯಾಟ್ ಅನ್ನು ಸ್ಪರ್ಶಿಸಲಾಗಿದೆ ಎಂದು ನಿರ್ಧಾರ ಮಾಡಲಾಗುತ್ತದೆ..” ಎಂದು ಆರ್.ಸಿ.ಬಿ ಸಹ ಉಲ್ಲೇಖಿಸಿದೆ. ಅಂಪೈರ್ ನಿರ್ಣಯಕ್ಕೆ ಎಲ್ಲೆಡೆ ಅಸಮಾಧಾನ ಹೆಚ್ಚಾಗಿದೆ.