ಆರ್ಸಿಬಿ ಅದೊಂದು ಮಹಾ ತಪ್ಪು ಮಾಡದೆ ಇದ್ದಿದ್ದರೆ ಚೆನ್ನೈ ವಿರುದ್ಧ ಸೋಲುತ್ತಿರಲಿಲ್ಲ ಎಂದ ಬ್ರಾಡ್ ಹಾಗ್. ಆರ್ಸಿಬಿ ಮಾಡಿದ ತಪ್ಪೇನಂತೆ ಗೊತ್ತೇ?

ಐಪಿಎಲ್ ಪಂದ್ಯಗಳು ರೋಚಕವಾಗಿ ಸಾಗುತ್ತಿದೆ. ಐಪಿಎಲ್ 15ನೇ ಆವೃತ್ತಿ ಶುರುವಾಗಿ 15 ದಿನಗಳು ಕಳೆದಿದ್ದು, ಈ ಬಾರಿ ನಮ್ಮ ಆರ್.ಸಿ.ಬಿ ತಂಡ ಸತತ ಮೂರು ಗೆಲುವು ನೋಡಿ ಮುಂದಕ್ಕೆ ಸಾಗುತ್ತಿತ್ತು, ಆದರೆ ಮೊನ್ನೆ ನಡೆದ ಆರ್.ಸಿ.ಬಿ ವರ್ಸಸ್ ಸಿ.ಎಸ್.ಕೆ ಮ್ಯಾಚ್ ನಲ್ಲಿ, ಆರ್.ಸಿ.ಬಿ ಎರಡನೇ ಸೋಲು ಕಂಡಿದೆ. ಮೊದಲಿಗೆ ಪಂಜಾಬ್ ತಂಡದ ವಿರುದ್ಧ ಸೋಲು ಕಂಡಿತ್ತು ಆರ್.ಸಿ.ಬಿ, ಈಗ ಎರಡನೇ ಬಾರಿ ಸಿ.ಎಸ್.ಕೆ ತಂಡದ ವಿರುದ್ಧ ಸೋತಿದೆ. ಆರ್.ಸಿ.ಬಿ ಈ ಬಾರಿ ಸೋಲಲು ಕಾರಣ ಏನು ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಅವರು ತಿಳಿಸಿದ್ದಾರೆ.

ಚೆನ್ನೈ ತಂಡ ಸತತ ಮೂರು ಮ್ಯಾಚ್ ಗಳನ್ನು ಸೋತಿತ್ತು, ಆರ್.ಸಿ.ಬಿ ತಂಡದ ವಿರುದ್ಧದ ಪಂದ್ಯದಲ್ಲಿ ಗೆದ್ದು ಮೊದಲ 2 ಅಂಕ ಪಡೆದು, ಪಾಯಿಂಟ್ಸ್ ಪಟ್ಟಿಯಲ್ಲಿ ಖಾತೆ ತೆರೆದಿದೆ ಸಿ.ಎಸ್.ಕೆ. ಆರ್.ಸಿ.ಬಿ ಯ ಗೆಲುವಿನ ಸಂತೋಷಕ್ಕೆ ಈ ಸೋಲು ಬ್ರೇಕ್ ನೀಡಿದ್ದು, ಸಿ.ಎಸ್.ಕೆ ತಂಡಕ್ಕೆ ಮೊದಲ ಗೆಲುವಿನ ಸಂತೋಷ ನೀಡಿದೆ. ಆರ್.ಸಿ.ಬಿ ತಂಡದ ಈ ಸೋಲಿಗೆ ಕಾರಣ ಏನಿರಬಹುದು ಎಂದು ವಿಮರ್ಶೆಗಳು ನಡೆಯುತ್ತಿವೆ. ಆರ್.ಸಿ.ಬಿ ತಂಡ ಸೋಲಲು ಮುಖ್ಯ ಕಾರಣ, ಆರ್.ಸಿ.ಬಿ ತಂಡ ಮಾಡಿದ ಅದೊಂದು ಪ್ರಮಾಡ ಎಂದು ಬ್ರಾಡ್ ಹಾಗ್ ಅವರು ಹೇಳಿದ್ದಾರೆ.. ಬ್ರಾಡ್ ಅವರು ಮಾತನಾಡಿ, ರಣತಂತ್ರ ಮಾಡುವಲ್ಲಿ ಸಿ.ಎಸ್.ಕೆ ತಂಡ ಆರ್.ಸಿ.ಬಿ ಗಿಂತ ಮುಂದಿತ್ತು, ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು ಸಹ ಆರ್.ಸಿ.ಬಿ ತಂಡ ಗೆಲ್ಲಲಿಲ್ಲ. ಯಾಕಂದ್ರೆ ಆರ್.ಸಿ.ಬಿ ತಂಡ ಆರಂಭದ ಓವರ್ ಗಳಲ್ಲಿ ಸ್ಪಿನ್ನರ್ ಗಳನ್ನು ಬಳಸಲಿಲ್ಲ.

ಹರಸಂಗ ಬಂದಿದ್ದು, 11 ಓವರ್ ಗಳ ನಂತರ, ಹರಸಂಗ ಮೊದಲೇ ಬಂದಿದ್ದರೆ ಚೆನ್ನಾಗಿರುತ್ತಿತ್ತು, ನಾಲ್ಕು ಓವರ್ ಗಳನ್ನು ಕಂಪ್ಲೀಟ್ ಮಾಡುತ್ತಿದ್ದರು. ಸಿ.ಎಸ್.ಕೆ ತಂಡ ಬೌಲರ್ ಗಳ ಆಯ್ಕೆಯನ್ನು ಚೆನ್ನಾಗಿ ಮಾಡಿತ್ತು. ಮೊದಲ ಏಳು ಓವರ್ ಪೂರ್ತಿ ಸ್ಪಿನ್ನರ್ ಗಳನ್ನು ಬಳಸಿತ್ತು. ಆದರೆ ಆರ್.ಸಿ.ಬಿ ತಂಡ ಮೂರು ಓವರ್ ಗಳನ್ನು ಮಾತ್ರ ಸ್ಪಿನ್ನರ್ ಗಳಿಂದ ಮಾಡಿಸಿತ್ತು. 11ನೇ ಓವರ್ ವರೆಗೂ ಹರಸಂಗ ಬೌಲಿಂಗ್ ಮಾಡದೆ ಇರುವುದು ದೊಡ್ಡ ಪ್ರಮಾದವಾಗಿದೆ. ತಮ್ಮಲ್ಲಿದ್ದ ರಹಸ್ಯ ಅಸ್ತ್ರವನ್ನು ಆರ್.ಸಿ.ಬಿ ತಂಡ ಮೊದಲೇ ಬಳಸಬೇಕಿತ್ತು ಎಂದಿದ್ದಾರೆ ಬ್ರಾಡ್ ಹಾಗ್. ಸಿ.ಎಸ್.ಕೆ ತಂಡ 20 ಓವರ್ ಗಳಲ್ಲಿ 216 ರನ್ ಗಳನ್ನು ಗಳಿಸಿತ್ತು, ಆದರೆ ಆರ್.ಸಿ.ಬಿ ಗೆಲ್ಲಲು ಸಾಧ್ಯವಾಗಲಿಲ್ಲ. ಮುಂದಿನ ಆರ್.ಸಿ.ಬಿ ಪಂದ್ಯ 16ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಇದ್ದು, ಈ ಪಂದ್ಯವನ್ನು ಆರ್.ಸಿ.ಬಿ ಗೆಲ್ಲುತ್ತಾ ಎಂದು ಕಾದು ನೋಡಬೇಕಿದೆ.