ಕೋಟಿ ಕೋಟಿ ಬಾಚುತ್ತಿದ್ದರು ಕೂಡ ಕೃತಜ್ಞತೆ ಮರೆಯಿತೇ ಕೆಜಿಎಫ್ ಚಿತ್ರ ತಂಡ, ಎಲ್ಲವೂ ಸರಿ ಇದ್ದಾಗ ಹೀಗ್ಯಾಕೆ ಮಾಡಿದ್ದೀರಾ ಎಂದ ನೆಟ್ಟಿಗರು. ಯಾಕೆ ಗೊತ್ತೇ??

ಕೆಜಿಎಫ್ ಚಾಪ್ಟರ್2 ಸಿನಿಮಾ ಏಪ್ರಿಲ್ 14ರಂದು ಪ್ರಪಂಚಾದ್ಯಂತ 10 ಸಾವಿರಕ್ಕಿಂತ ಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆ ಆಗಿದೆ. ಸಿನಿಮಾ ನೋಡಿದ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ. ಕೆಜಿಎಫ್2 ಸಿನಿಮಾ ವಿಶ್ವಮಟ್ಟದಲ್ಲಿ ಜನರಿಗೆ ಇಷ್ಟವಾಗಿ, ರಾಕಿ ಭಾಯ್ ಹವಾ ನೋಡಿದ ಪ್ರೇಕ್ಷಕ ಫಿದಾ ಆಗಿದ್ದಾನೆ. ಮೊದಲ ದಿನವೇ ಕೆಜಿಎಫ್2 ಸಿನಿಮಾ 145 ಕೋಟಿ ಗಳಿಕೆ ಮಾಡಿದೆ ಎಂದು ಮಾಹಿತಿ ಸಿಕ್ಕಿಸೆ. ವಿಶ್ವದ ಎಲ್ಲೆಡೆ ಸಿನಿಮಾ ಬಿಡುಗಡೆಯಾಗಿ, ದೇಶದ ಗಡಿಗಳನ್ನು ದಾಟಿ ಕೆಜಿಎಫ್2 ಸಿನಿಮಾ ಸದ್ದು ಮಾಡುತ್ತಿದೆ, ಆದರೆ ಕೆಜಿಎಫ್2 ಚಿತ್ರತಂಡ ಮಾಡಿದ ಅದೊಂದು ಕೆಲಸದಿಂದ ಅಭಿಮಾನಿಗಳಿಗೆ ಬೇಸರವಾಗಿದೆ. ಪ್ರಪಂಚದ ಎಲ್ಲೆಡೆ ಬಿಡುಗಡೆ ಆಗಿರುವ ಕೆಜಿಎಫ್2, ಅದೊಂದು ಪ್ರದೇಶದಲ್ಲಿ ಮಾತ್ರ ಬಿಡುಗಡೆ ಆಗಿಲ್ಲ.

ಕೆಜಿಎಫ್ ಎಂದು ಹೆಸರಿಟ್ಟುಕೊಂಡಿರುವ ಚಿತ್ರತಂಡ, ಕೆಜಿಎಫ್ ನಗರದಲ್ಲೇ ಸಿನಿಮಾ ಬಿಡುಗಡೆ ಮಾಡಿಲ್ಲ ಎನ್ನುವುದು ವಿಪರ್ಯಾಸ. ಕೆಜಿಎಫ್ ಸಿನಿಮಾದ ಸಾಕಷ್ಟು ಭಾಗ ಅಲ್ಲಿಯೇ ಚಿತ್ರೀಕರಣವಾಗಿದೆ. ಸಿನಿಮಾ ಹೆಸರೇ ಕೆಜಿಎಫ್, ಆದರೆ ಕೆಜಿಎಫ್ ಪ್ರದೇಶದಲ್ಲಿ ಸಿಜಿಮಾ ಬಿಡುಗಡೆ ಆಗಿಲ್ಲ. ಸಿನಿಮಾ ವಿತರಕರು ಕೇಳಿದಷ್ಟು ಹಣವನ್ನು ಥಿಯೇಟರ್ ಮಾಲೀಕರು ಕೊಡಲು ಸಾಧ್ಯವಾಗದೆ ಇದ್ದ ಕಾರಣ, ಸಿನಿಮಾ ಬಿಡುಗಡೆ ಮಾಡಿಲ್ಲ ಎನ್ನಲಾಗಿದೆ. ಕೆಜಿಎಫ್ ಭಾಗದ ಯಶ್ ಅವರ ಅಭಿಮಾನಿಗಳಿಗೆ ಇದು ಬಹಳ ಬೇಸರ ತಂದಿದೆ. ಇನ್ನಿತರ ಅಭಿಮಾನಿಗಳು ಸಹ ಚಿತ್ರತಂಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಜಿಎಫ್ ನಲ್ಲಿರುವ ಜನರು ತುಂಬಾ ಬಡವರು, ನೂರಾರು ರೂಪಾಯಿ ಹಣ ಕೊಟ್ಟು ಸಿನಿಮಾ ನೋಡಲು ಅವರಿಂದ ಆಗುವುದಿಲ್ಲ ಎನ್ನುವ ಕಾರಣಕ್ಕೆ ಕೆಜಿಎಫ್2 ಸಿನಿಮಾವನ್ನು ಕಡಿಮೆ ಹಣಕ್ಕೆ ಕೊಡಿ ಎಂದು ಅಲ್ಲಿನ ಒಲಂಪಿಯಾ, ಲಕ್ಷ್ಮಿ ಥಿಯೇಟರ್ ಮಾಲೀಕರು ವಿತರಕ ಜಯಣ್ಣ ಅವರ ಬಳಿ ಹಲವು ಬಾರಿ ಅಲೆದಾಡಿದ್ದರು ಸಹ, ಕಡಿಮೆ ಹಣ ಎನ್ನುವ ಕಾರಣಕ್ಕೆ ಕೆಜಿಎಫ್2 ಸಿನಿಮಾವನ್ನು ಅಲ್ಲಿ ಬಿಡುಗಡೆ ಮಾಡಿಲ್ಲ ಎನ್ನಲಾಗಿದೆ. ಹಲವು ದೇಶಗಳಲ್ಲಿ ಸಿನಿಮಾ ಬಿಡುಗಡೆ ಆಗಿದ್ದು, ಕೆಜಿಎಫ್ ಎಂದು ಹೆಸರಿಟ್ಟು ಅಲ್ಲೇ ಸಿನಿಮಾ ಬಿಡುಗಡೆ ಮಾಡದಿರುವುದು ನಿರಾಶೆಗೆ ಕಾರಣವಾಗಿದೆ. ಹಾಗಾಗಿ ಚಿತ್ರತಂಡ ಇನ್ನುಮುಂದೆ ಎಚ್ಚೆತ್ತುಕೊಳ್ಳಬೇಕು ಎನ್ನುತ್ತಿದ್ದಾರೆ ಅಭಿಮಾನಿಗಳು.