ಕಿರುತೆರೆಯ ಟಾಪ್ ನಟಿಯರಲ್ಲಿ ಒಬ್ಬರಾಗಿರುವ ಎಡವಟ್ಟು ಲೀಲಾ ರವರಿಗೆ ಯಾರ ಜೊತೆ ಸಿನಿಮಾ ಆಸೆ ಗೊತ್ತೇ??

ಕನ್ನಡ ಕಿರುತೆರೆ ವೀಕ್ಷಕರಿಗೆ ಎಡವಟ್ಟು ಲೀಲಾ ಅಂದ್ರೆ ಗೊತ್ತಿಲ್ಲದೇ ಇರಲು ಸಾಧ್ಯವೇ ಇಲ್ಲ. ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಎಡವಟ್ಟು ಲೀಲಾ ಮಾತನಾಡುವ ಮುದ್ದು ಮಾತುಗಳು, ತುಂಟತನ ಎಡವಟ್ಟುಗಳು ಇದೆಲ್ಲವನ್ನು ಕಿರುತೆರೆ ವೀಕ್ಷಕರು ಎಂಜಾಯ್ ಮಾಡುತ್ತಾರೆ. ಎಜೆ ಮತ್ತು ಲೀಲಾ ಮದುವೆ ಏನೋ ಆಗಿದೆ, ಆದರೆ ಇವರಿಬ್ಬರ ನಡುವೆ ಇನ್ನು ಪ್ರೀತಿ ಶುರುವಾಗಿಲ್ಲ. ಆಗಾಗ ಕಣ್ಣು ಸನ್ನೆಗಳು ನಡೆದರು ಸಹ, ಇಬ್ಬರು ಪ್ರೀತಿಯನ್ನು ಎಕ್ಸ್ಪ್ರೆಸ್ ಮಾಡಿಲ್ಲ. ಇವರಿಬ್ಬರ ನಡುವೆ ಪ್ರೀತಿ ಯಾವಾಗ ಮೂಡುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಇದು ಧಾರಾವಾಹಿ ಬಗ್ಗೆ ಯಾದರೆ, ನಿಜ ಜೀವನದಲ್ಲಿ ಮಲೈಕಾ ಹೇಗೆ? ಸ್ಯಾಂಡಲ್ ವುಡ್ ನ ಈ ಒಬ್ಬ ನಟನ ಜೊತೆ ಅಭಿನಯಿಸುವ ಕನಸಿದೆ ಗೊತ್ತಾ?

ನಟಿ ಮಲೈಕಾ ಮೂಲತಃ ದಾವಣಗೆರೆಯವರು, ಚಿಕ್ಕ ವಯಸ್ಸಿನಿಂದಲೂ ನಟನೆಯಲ್ಲಿ ಇವರಿಗೆ ಆಸಕ್ತಿ ಇತ್ತು. ಸಾಕಷ್ಟು ಆಡಿಶನ್ ಗಳನ್ನು ಕೊಟ್ಟಿದ್ದ ಮಲೈಕಾ, ಸೆಲೆಕ್ಟ್ ಆಗಿದ್ದು ಮಾತ್ರ ಹಿಟ್ಲರ್ ಕಲ್ಯಾಣ ಧಾರಾವಾಹಿಗೆ. ಹಿಟ್ಲರ್ ಕಲ್ಯಾಣ ಇವರ ಮೊದಲ ಧಾರಾವಾಹಿ ಎಂದು ಅನ್ನಿಸುವುದಿಲ್ಲ, ಅಷ್ಟರ ಮಟ್ಟಿಗೆ ಅಭಿನಯ ಮಾಡುತ್ತಿದ್ದಾರೆ ಮಲೈಕಾ. ಮೊದಲ ಧಾರವಾಹಿಯಲ್ಲೇ ಎಲ್ಲಾ ವೀಕ್ಷಕರ ಫೇವರೆಟ್ ಆಗಿದ್ದಾರೆ. ಮಲೈಕಾ ಅವರ ಜನಪ್ರಿಯತೆ ಹೇಗಿದೆ ಎಂದು ಇನ್ಸ್ಟಾಗ್ರಾಮ್ ನಲ್ಲಿ ಅವರ ಹೆಸರಿನಲ್ಲಿ ಇರುವ ಫ್ಯಾನ್ ಪೇಜ್ ಗಳನ್ನು ನೋಡಿದರೆ ಗೊತ್ತಾಗುತ್ತದೆ. ಅಭಿಮಾನಿಗಳ ಪ್ರೀತಿಯಿಂದ ಮಲೈಕಾ ಅವರಿಗೆ ಬಹಳ ಸಂತೋಷವಾಗತ್ತದೆಯಂತೆ. ಜೀವನದಲ್ಲಿ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡಿದ್ದಾರೆ ಮಲೈಕಾ.

ಇಂದು ಕಿರುತೆರೆಯಲ್ಲಿ ಫೇಮಸ್ ಆಗಿರುವ ಮಲೈಕಾ ಅವರಿಗೆ ಮುಂದಿನ ದಿನಗಳಲ್ಲಿ ಬೆಳ್ಳಿತೆರೆಗೆ ಎಂಟ್ರಿ ಕೊಡುವ ಆಸೆ. ತಮ್ಮ ಆಸೆ ಬಗ್ಗೆ, ಇನ್ಸ್ಟಾಗ್ರಾಮ್ ನಲ್ಲಿ ಲೈವ್ ಬಂದಿದ್ದಾಗ, ಅಭಿಮಾನಿಗಳಿಗೆ ತಿಳಿಸಿದ್ದಾರೆ ಮಲೈಕಾ. ಸಿನಿಮಾ ನಟಿಯಾಗಬೇಕು ಎನ್ನುವ ಆಸೆ ಇಟ್ಟುಕೊಂಡಿರುವ ಮಲೈಕಾ ಅವರು, ರಾಕಿಂಗ್ ಸ್ಟಾರ್ ಯಶ್ ಅವರ ದೊಡ್ಡ ಫ್ಯಾನ್, “ನನಗೆ ಯಶ್ ಅವರು ಅಂದ್ರೆ ತುಂಬಾ ಇಷ್ಟ. ಈಗಿನಿಂದ ಅಲ್ಲ, ಮೊದಲಿಂದಲೂ ಯಶ್ ಅವರು ಅಂದ್ರೆ ತುಂಬಾ ಇಷ್ಟ. ಅವರ ಜೊತೆ ಸಿನಿಮಾದಲ್ಲಿ ನಟಿಸಬೇಕು ಅಂತ ಆಸೆ ಇದೆ. ಸಿನಿಮಾದಲ್ಲಿ ನಟಿಸುವ ಆಸೆ ಇದೆ, ಆದರೆ ಯಶ್ ಅವರ ಜೊತೆ ನಟಿಸುವ ಆಸೆ ಹೆಚ್ಚಾಗಿದೆ..” ಎಂದು ಬೆಳ್ಳಿತೆರೆಗೆ ಎಂಟ್ರಿ ಕೊಡುವ ಆಸೆ ಬಗ್ಗೆ ತಿಳಿಸಿದ್ದಾರೆ ಮಲೈಕಾ..