ಇಡೀ ದೇಶದಲ್ಲಿ ಸದ್ದು ಮಾಡುತ್ತಿರುವ RRR ಹಾಗೂ ಕೆಜಿಎಫ್ 2 ಚಿತ್ರಗಳಲ್ಲಿ ಶಿಲ್ಪ ಶೆಟ್ಟಿ ಕುಟುಂಬದ ಜೊತೆ ನೋಡಿದ ಸಿನಿಮಾ ಯಾವುದು ಗೊತ್ತೇ??

ಕನ್ನಡದ ಹೆಮ್ಮೆಯ ಕೆಜಿಎಫ್2 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಕರ್ನಾಟಕ ಮಾತ್ರವಲ್ಲದೆ, ಅಕ್ಕಪಕ್ಕದ ರಾಜ್ಯಗಳು, ಉತ್ತರ ಭಾರತದ ರಾಜ್ಯಗಳಲ್ಲಿ ಸಹ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ ಕೆಜಿಎಫ್2. ಹಿಂದಿ ಭಾಷೆ ಒಂದರಲ್ಲೇ 300 ಕೋಟಿಗಿಂತ ಹೆಚ್ಚು ಗಳಿಕೆ ಮಾಡಿದೆ. ಇನ್ನು ಎಲ್ಲಾ ಭಾಷೆಗಳನ್ನು ಸೇರಿಸಿ, 1000 ಕೋಟಿ ಹಣಗಳಿಕೆಯತ್ತ ಹೆಜ್ಜೆ ಹಾಕಿದೆ ಕೇಹಿಎಫ್2. ಸ್ಯಾಂಡಲ್ ವುಡ್ ಇಂದ ಬಾಲಿವುಡ್ ಸೆಲೆಬ್ರಿಟಿಗಳ ವರೆಗೂ ಎಲ್ಲರೂ ಕೆಜಿಎಫ್2 ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾದ ನೋಡಿದ ಎಲ್ಲರೂ ವಾವ್ ಎನ್ನುತ್ತಿದ್ದಾರೆ. ಇದೀಗ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರು ಸಹ ಕೆಜಿಎಫ್2 ಸಿನಿಮಾ ವೀಕ್ಷಿಸಿದ್ದಾರೆ..

ಕೆಜಿಎಫ್2 ಸಿನಿಮಾ ನೋಡಿದ ಶಿಲ್ಪಾ ಶೆಟ್ಟಿ, ಡೈಲಾಗ್ ಹೇಳಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಶಿಲ್ಪಾ ಶೆಟ್ಟಿ ಅವರು ಹೆಮ್ಮೆಯ ಕನ್ನಡತಿ, ತಮ್ಮ ಅದ್ಭುತ ಅಭಿನಯದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇದೀಗ ಶಿಲ್ಪಾ ಶೆಟ್ಟಿ ಅವರು, ಮುಂಬೈನಲ್ಲಿ ತಾಯಿ ಸುನಂದಾ ಶೆಟ್ಟಿ ಅವರೊಡನೆ ಸಿನಿಮಾ ನೋಡಿದ್ದಾರೆ. ಸಿನಿಮಾ ನೋಡಿ ಹೊರಬರುತ್ತಿದ್ದ ಶಿಲ್ಪಾ ಶೆಟ್ಟಿ ಅವರನ್ನು ಪಾಪಾರಾಜಿಗಳ ಸುತ್ತುವರೆದಿದ್ದಾರೆ. “ಆರ್.ಆರ್.ಆರ್ ಸಿನಿಮಾ ನೋಡಿದ್ರಾ..” ಎಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರ ಕೊಟ್ಟಿರುವ ಶಿಲ್ಪಾ ಶೆಟ್ಟಿ ಅವರು, “ಇಲ್ಲಾ ರೀ, ನಾನು ಕೆಜಿಎಫ್2 ನೋಡಿದೆ..” ಎಂದು ಉತ್ತರ ಕೊಟ್ಟಿದ್ದಾರೆ.

ಅಷ್ಟೇ ಅಲ್ಲದೇ, ಸಿನಿಮಾದಲ್ಲಿ ಏನಿಷ್ಟ ಆಯಿತು ಎಂದು ಪ್ರಶ್ನೆ ಕೇಳಿದ್ದು, ಆಗ ಶಿಲ್ಪಾ ಶೆಟ್ಟಿ ಅವರು, ಕೆಜಿಎಫ್2 ಸಿನಿಮಾದ ವೈಲೆನ್ಸ್ ವೈಲೆನ್ಸ್ ವೈಲೆನ್ಸ್ ಡೈಲಾಗ್ ಹೊಡೆದಿದ್ದಾರೆ. ಶಿಲ್ಪಾ ಶೆಟ್ಟಿ ಅವರು ಕನ್ನಡ ಸಿನಿಮಾ ನೋಡಿರುವುದು ನಿಜಕ್ಕೂ ಸಂತೋಷದ ವಿಚಾರ, ಶಿಲ್ಪಾ ಶೆಟ್ಟಿ ಅವರಿಗೆ ಮೊದಲಿನಿಂದಲೂ ಕನ್ನಡದ ಮೇಲೆ, ಕರ್ನಾಟಕದ ಮೇಲೆ ಅಭಿಮಾನ, ಪ್ರೀತಿ, ಗೌರವ ಹೆಚ್ಚು. ಅನೇಕ ವೇದಿಕೆಗಳಲ್ಲಿ ತಾನು ಕರ್ನಾಟಕದವಳು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಶಿಲ್ಪಾ. ಇದೀಗ ಕೆಜಿಎಫ್2 ನೋಡುವ ಮೂಲಕ ಮತ್ತೊಮ್ಮೆ ಕನ್ನಡಾಭಿಮಾನ ತೋರಿಸಿದ್ದಾರೆ. ಪ್ರಸ್ತುತ ಶಿಲ್ಪಾ ಶೆಟ್ಟಿ ಅವರು ಕೆಜಿಎಫ್2 ನೋಡಿರುವ ಫೋಟೋ ಮತ್ತು ವಿಡಿಯೋಗಳು ಭಾರಿ ವೈರಲ್ ಆಗಿದೆ.