ಕೇವಲ ಚಿನ್ನ ಮಾತ್ರ ಅಲ್ಲ, ಅಕ್ಷಯ ತೃತೀಯದಂದು ಇವುಗಳನ್ನು ಖರೀದಿ ಮಾಡಿ, ತಾಯಿ ಲಕ್ಷ್ಮಿಯ ಕೃಪೆಗೆ ಪಾತ್ರರಾಗಿ. ಯಾವ್ಯಾವು ಗೊತ್ತೇ??

ಹಿಂದೂ ಧರ್ಮದ ಪ್ರಕಾರ ಅಕ್ಷಯ ತೃತೀಯ ದಿನವನ್ನು ಅತ್ಯಂತ ಮಂಗಳಕರವಾದ ದಿನ ಎಂದು ಪರಿಗಣಿಸಲಾಗುತ್ತದೆ. ಈ ದಿನದಂದು ಚಿನ್ನ ಖರೀದಿ ಮಾಡುವುದು ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತದೆ. ೨೦೨೨ರ ಈ ದಿನ ಅಕ್ಷಯ ತೃತೀಯ ದಿನವೂ ಮೇ ೩ರೆಂದು ಇದೆ. ಈ ದಿನದಂದು ನೀವು ಚಿನ್ನ ಖರೀದಿಸುವುದು ಉತ್ತಮ. ಈ ದಿನ ಖರೀದಿ ಮಾಡಿದ ವಸ್ತುಗಳು ಬಹುದಿನಗಳ ಕಾಲ ನೆಲೆಸಿರುತ್ತದೆ. ಒಳ್ಳೆಯದನ್ನು ಮಾಡುತ್ತದೆ ಎಂದು ನಂಬಲಾಗಿದೆ. ಅಕ್ಷಯ ತೃತೀಯ ದಿನ ಖರೀದಿ ಮಾಡುವ ವಸ್ತುಗಳು ಲಕ್ಷ್ಮಿ ದೇವಿಯ ಕೃಪೆಗೆ ಮತ್ತು ಸಂಪತ್ತಿನ ದೇವರಾಗಿರುವ ಕುಬೇರನ ಕೃಪೆಗೆ ಪಾತ್ರವಾಗುತ್ತದೆ ಎನ್ನುವ ನಂಬಿಕೆ ಇದೆ. ಕೆಲವೊಂದು ಕಾರಣಗಳಿಂದ ನೀವು ಚಿನ್ನ ಖರೀದಿ ಮಾಡಲು ಸಾಧ್ಯವವಾಗದೆ ಇರಬಹುದು. ಹಾಗಿದ್ದಾಗ ಚಿನ್ನದ ಬದಲಾಗಿ ಅಕ್ಷಯ ತೃತೀಯ ದಿನದಂದು ಏನೆಲ್ಲಾ ಖರೀದಿಸಬಹುದು ಗೊತ್ತಾ? ಅದರ ಬಗ್ಗೆ ಇಂದು ನಿಮಗೆ ತಿಳಿಸಿಕೊಡುತ್ತೇವೆ..

ಬಾರ್ಲಿ :- ಒಂದು ವೇಳೆ ಚಿನ್ನ ಖರೀದಿ ಮಾಡಲು ಸಾಧ್ಯವಾಗದೆ ಹೋದರೆ ನೀವು ಬಾರ್ಲಿ ಖರೀದಿ ಮಾಡಬಹುದು. ಇದು ಚಿನ್ನ ಖರೀದಿ ಮಾಡಿದಷ್ಟೇ ಶುಭಫಲ ತರುತ್ತದೆ ಎನ್ನುವ ನಂಬಿಕೆ ಇದೆ. ಅಕ್ಷಯ ತೃತೀಯ ದಿನದಂದು ಖರೀದಿ ಮಾಡಿದ ಬಾರ್ಲಿಯನ್ನು ಭಗವಾನ್ ವಿಷ್ಣುವಿನ ಪಾದಕ್ಕೆ ಅರ್ಪಿಸಿ, ನಂತರ ಅದನ್ನು ಒಂದು ಕೆಂಪು ಬಟ್ಟೆಯಲ್ಲಿ ಕಟ್ಟಿ, ನಿಮ್ಮ ಹತ್ತಿರವೇ ಇಟ್ಟುಕೊಳ್ಳಿ. ಇದರಿಂದಾಗಿ ನಿಮ್ಮ ಮನೆಯಲ್ಲಿ ಐಶ್ವರ್ಯ ಹೆಚ್ಚಾಗುತ್ತದೆ.

ಶ್ರೀಯಂತ್ರ :- ಅಕ್ಷಯ ತೃತೀಯದ ದಿನ ಚಿನ್ನ ಖರೀದಿ ಮಾಡಲು ಸಾಧ್ಯವಾಗದೆ ಹೋದರೆ, ಶ್ರೀಯಂತ್ರವನ್ನು ಮನೆಗೆ ತನ್ನಿ. ಇದು ಮಂಗಲಕಾರವಾದದ್ದು ಎಂದು ಪರಿಗಣಿಸಲಾಗಿದೆ. ಶ್ರೀಯಂತ್ರವನ್ನು ಮನೆಗೆ ತರಲು ಅಕ್ಷಯ ತೃತೀಯ ಶುಭದಿನ ಎನ್ನಲಾಗುತ್ತದೆ. ಎಲ್ಲಾ ವಿಧಿ ವಿಧಾನಗಳನ್ನು ಪಾಲಿಸಿ, ಶ್ರೀಯಂತ್ರವನ್ನು ಮನೆಯಲ್ಲಿ ಸ್ಥಾಪಿಸಿ.

ದಕ್ಷಿಣಾವರ್ತಿ ಶಂಖ :- ಅಕ್ಷಯ ತೃತೀಯ ದಿನದಂದು ಚಿನ್ನದ ಬದಲಾಗಿ ದಕ್ಷಿಣಾವರ್ತಿ ಶಂಖವನ್ನು ಸಹ ಖರೀದಿ ಮಾಡಬಹುದು. ದಕ್ಷಿಣಕ್ಕೆ ಮುಖ ಮಾಡಿರುವ ಶಂಖ ಲಕ್ಷ್ಮೀದೇವಿಗೆ ಬಹಳ ಪ್ರಿಯವಾದದು ಎಂದು ಹೇಳಲಾಗುತ್ತದೆ. ಹಾಗಾಗಿ ಅಕ್ಷಯ ತೃತೀಯ ದಿನದಂದು ಈ ಶಂಖವನ್ನು ಮನೆಗೆ ತರುವುದರಿಂದ ಮನೆಯಲ್ಲಿ ಶಾಂತಿ ಸಮೃದ್ಧಿ ನೆಲೆಸಿರುತ್ತದೆ ಎನ್ನಲಾಗಿದೆ.

ಕವಡೆ:- ಅಕ್ಷಯ ತೃತೀಯದ ದಿನ ಚಿನ್ನದ ಬದಲು ಕವಡೆಯನ್ನು ಸಹ ಖರೀದಿ ಮಾಡಬಹುದು. ಪುರಾಣಗಳ ಪ್ರಕಾರ ಲಕ್ಷ್ಮೀದೇವಿಗೆ ಕವಡೆಯ ಮೇಲೆ ಬಹಳ ಪ್ರೀತಿ, ಹಾಗಾಗಿ ಕವಡೆ ಖರೀದಿ ಮಾಡಿ ಲಕ್ಷ್ಮೀದೇವಿಯ ಪಾದದ ಬಳಿ ಇಟ್ಟು ಪೂಜೆ ಮಾಡಿ, ಮರುದಿನ ಕವಡೆಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ನಿಮ್ಮ ಮನೆಯಲ್ಲಿ ಇಡಿ.

ಮಣ್ಣಿನ ನೀರಿನ ಮಡಿಕೆ :- ಮೇಲೆ ತಿಳಿಸಿದ ವಸ್ತುಗಳ ಜೊತೆಗೆ ಅಕ್ಷಯ ತೃತೀಯ ದಿನದಂದು ಮಣ್ಣಿನ ನೀರಿನ ಮಡಿಕೆ ಖರೀದಿ ಮಾಡುವುದು ಸಹ ಒಳ್ಳೆಯದು ಎಂದು ಹೇಳಲಾಗುತ್ತದೆ. ನೀರಿನ ಮಡಿಕೆ ಖರೀದಿ ಮಾಡುವುದು, ಮನೆಯಲ್ಲಿ ಇಟ್ಟುಕೊಳ್ಳುವುದು ಮತ್ತು ದಾನ ಮಾಡುವು ಎಲ್ಲವು ಮಂಗಳಕರ ಎಂದು ನಂಬಿಕೆ ಇದೆ.