ತಾಯಿ ಲಕ್ಷ್ಮಿಯನ್ನು ಮೆಚ್ಚಿಸಿ ಕೃಪೆಗೆ ಪಾತ್ರರಾಗಬೇಕು ಎಂದರೆ ಏನು ಮಾಡಬೇಕು ಗೊತ್ತೇ?? ಕೋಟ್ಯಧಿಪತಿ ಆಗಬೇಕು ಎಂದರೆ ಜಸ್ಟ್ ಹೀಗೆ ಮಾಡಿ ಸಾಕು..

ಯಾರಾದರೂ ಒಬ್ಬ ವ್ಯಕ್ತಿ ಇಡೀ ಪ್ರಪಂಚದ ಮುಂದೆ ತಾನು ದೊಡ್ಡವನು ಎಂದು ತೋರಿಸಲು ಬಯಸಿದರೆ, ಆ ನಿಟ್ಟಿನಲ್ಲಿ ಹಣ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ ಹಣವಿಲ್ಲದೆ ನೀವು ಜೀವನದಲ್ಲಿ ಏನನ್ನಾದರೂ ಮಾಡಲು ಅಥವಾ ಬಯಸಲು ಸಹ ಕಷ್ಟವಾಗುತ್ತದೆ.  ನಿಮ್ಮ ಬಳಿ ಹಣವಿದ್ದರೆ ಇಡೀ ಜಗತ್ತೇ ನಿಮ್ಮನ್ನು ಮುಖೇಶ್ ಅಂಬಾನಿ ಅವರಿಗೆ ನೀಡುವ ಹಾಗೆ ಗೌರವ ನೀಡುತ್ತದೆ.  ಮುಖೇಶ್ ಅಂಬಾನಿ ಇಡೀ ಭಾರತ ಮಾತ್ರವಲ್ಲದೆ ಇಡೀ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ.  ಇಡೀ ಜಗತ್ತು ಅಂಬಾನಿ ಅವರನ್ನು ಗೌರವಿಸುತ್ತದೆ ಏಕೆಂದರೆ ಅವರು ಶ್ರೀಮಂತರು..

ಒಂದು ವೇಳೆ, ಮುಕೇಶ್ ಅಂಬಾನಿ ಅವರಿಗೆ ನಷ್ಟವಾಗಿದೆ ಹಾಗೂ ಅವರ ಆಸ್ತಿಯೆಲ್ಲ ಹಾಳಾಗುತ್ತದೆ ಎಂದು ಭಾವಿಸಿ, ಒಂದು ವೇಳೆ ಅವರು ಹಣವಿಲ್ಲದೆ ಬೀದಿಗೆ ಬಂದರೆ, ಈ ಪ್ರಪಂಚದಲ್ಲಿ ಯಾರೂ ಅಂಬಾನಿಯನ್ನು ಗೌರವಿಸುವುದಿಲ್ಲ, ಏಕೆಂದರೆ ಈ ಕಲಿಯುಗದಲ್ಲಿ ಹಣ ಇದ್ದವನಿಗೆ ಗೌರವ ನೀಡಲಾಗುತ್ತದೆ. ಹಾಗಾಗಿ ಈ ಕಲಿಯುಗದಲ್ಲಿ ಹಣ ಸಂಪಾದನೆ ಮಾಡುವುದು ಬಹಳ ಮುಖ್ಯ ಏಕೆಂದರೆ ಒಬ್ಬ ವ್ಯಕ್ತಿಯ ಮೌಲ್ಯ ಹಣದಿಂದ ಮಾತ್ರವೇ ಹೊರತು ಅವನು ಜನರೊಂದಿಗೆ ಹೇಗೆ ವರ್ತಿಸುತ್ತಾನೆ ಎಂಬುದರ ಮೇಲೆ ಇಲ್ಲಿನ ಜನರು ನಿರ್ಧಾರ ಮಾಡುವುದಿಲ್ಲ.

ನಮ್ಮ ಹಿಂದೂ ಧರ್ಮದಲ್ಲಿ  ಮುಕ್ಕೋಟಿ ದೇವತೆಗಳು ಇದ್ದಾರೆ.  ಮನುಷ್ಯನ ಸೃಷ್ಟಿಕರ್ತ ಬ್ರಹ್ಮ, ಮನುಷ್ಯನನ್ನು ಪೋಷಿಸುವ ವಿಷ್ಣು ಭಗವಾನ್, ಹಾಗೂ ಒಬ್ಬ ವ್ಯಕ್ತಿ ಎಷ್ಟು ದಿನ ಬದುಕುತ್ತಾನೆ ಎನ್ನುವುದನ್ನು ನೋಅಳು ಶಿವ.  ಈ ಎಲ್ಲಾ ದೇವರುಗಳನ್ನು ಬ್ರಹ್ಮ, ವಿಷ್ಣು, ಮಹೇಶ್ವರ ಎಂಬ ಹೆಸರಿನಿಂದ ಸಂಬೋಧಿಸಲಾಗುತ್ತದೆ ಹಾಗೂ ಅವರನ್ನು ಪೂಜಿಸಲಾಗುತ್ತದೆ.  ಅದೇ ರೀತಿ ಹಣದ ದೇವತೆ ಎಂದು ಲಕ್ಷ್ಮಿದೇವಿಯನ್ನು ಕರೆಯಲಾಗುತ್ತದೆ.  ಹಣ ಗಳಿಸಬೇಕಾದರೆ ಲಕ್ಷ್ಮಿ ದೇವಿಯನ್ನು ಪೂಜಿಸಿ ಆಕೆಯನ್ನು ಮೆಚ್ಚಿಸಬೇಕು ಎಂದು ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ತಿಳಿಸಿದ್ದಾರೆ. ಲಕ್ಷ್ಮಿ ದೇವಿಯು ಮನುಷ್ಯರಿಗೆ ಸಂಪತ್ತು ಮತ್ತು ಕೀರ್ತಿಯನ್ನು ನೀಡುವ ದೇವತೆ.

ಲಕ್ಷ್ಮಿದೇವಿಯನ್ನು ಮೆಚ್ಚಿಸಲು ವಿವಿಧ ಮಾರ್ಗಗಳಿವೆ, ಅವುಗಳನ್ನು ಅನುಸರಿಸುವುದರಿಂದ ಲಕ್ಷ್ಮಿದೇವಿಯು ಸಂತೋಷವಾಗಿರುತ್ತಾಳೆ ಹಾಗೂ ಲಕ್ಷ್ಮೀದೇವಿಯು ಖ್ಯಾತಿ ಮತ್ತು ವೈಭವದ ಪ್ರತಿಯನ್ನು ಹೊಂದಿದ್ದಾಳೆ.  ಶುಚಿತ್ವ ಇರುವ ಮನೆಯಲ್ಲಿ ಮಾತ್ರ ಲಕ್ಷ್ಮಿ ದೇವಿ ವಾಸಿಸುತ್ತಾಳೆ ಎಂದು ನಮ್ಮ ಧರ್ಮ ಹೇಳುತ್ತದೆ.  ಏಕೆಂದರೆ ಲಕ್ಷ್ಮೀದೇವಿ ಎಂದಿಗೂ ಕೊಳಕು ಇರುವ ಜಾಗದಲ್ಲಿ ಕಾಲಿಡುವುದಿಲ್ಲ.  ಇದಲ್ಲದೇ, ಯಾವ ಮನೆಯಲ್ಲಿ ಯಾರೂ ಮದ್ಯಪಾನ ಮಾಡುತ್ತಾರೋ, ಮಾಂಸಾಹಾರ ಸೇವಿಸುತ್ತಾರೋ, ಅಂತಹ ಮನೆಯಲ್ಲಿ ಲಕ್ಷ್ಮಿ ವಾಸ ಮಾಡುವುದಿಲ್ಲ ಎಂದು ಹಿರಿಯರು ಹೇಳುತ್ತಾರೆ.  ನೀವು ಸಹ ನಿಮ್ಮ ಮನೆಯಲ್ಲಿ ಲಕ್ಷ್ಮಿದೇವಿ ನೆಲೆಸಲು ಬಯಸಿದರೆ, ಈ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳಬೇಕು.