ಪಾಂಡ್ಯ, ಧೋನಿ ರಾಹುಲ್ ಅಲ್ಲ, ಈ ಬಾರಿಯ ಐಪಿಎಲ್ ನ ಬೆಸ್ಟ್ ನಾಯಕನನ್ನು ಹೆಸರಿಸಿದ ಇಂಗ್ಲೆಂಡ್ ಮಾಜಿ ನಾಯಕ. ಯಾರಂತೆ ಗೊತ್ತೇ??

ಈ ವರ್ಷದ ಐಪಿಎಲ್ 15ನೇ ಆವೃತ್ತಿ ಈಗಾಗಲೇ ಪ್ಲೇ ಆಫ್ಸ್ ವರೆಗೂ ತಲುಪಿದ್ದು, ಪ್ಲೇ ಆಫ್ಸ್ ಗೆ ಪ್ರವೇಶ ಪಡೆಯಲು ಎಲ್ಲಾ ತಂಡಗಳು ಬಹಳ ಶ್ರಮಪಟ್ಟು ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ ಗುಜರಾತ್ ಟೈಟನ್ಸ್ ತಂಡವು 18 ಪಾಯಿಂಟ್ಸ್ ಗಳಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಲಕ್ನೌ ಸೂಪರ್ ಜೈನ್ಟ್ಸ್ ತಂಡ ಇದೆ. ಈ ಎರಡು ತಂಡಗಳು ಹೊಸದಾಗಿ ಈ ಸಾರಿ ಐಪಿಎಲ್ ಗೆ ಎಂಟ್ರಿ ಕೊಟ್ಟಿದ್ದು, ಮೊದಲ ಸೀಸನ್ ನಲ್ಲೇ ಅದ್ಭುತವಾದ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ನಮ್ಮ ಆರ್.ಸಿ.ಬಿ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಐಪಿಎಲ್ ಪಂದ್ಯಗಳಲ್ಲಿ ಪ್ರಪಂಚದ ಸಾಕಷ್ಟು ಅದ್ಭುತ ಕ್ರಿಕೆಟಿಗರು ಫಾಲೋ ಮಾಡುತ್ತಾರೆ ಎಂದು ನಮಗೆ ಈಗಾಗಲೇ ಗೊತ್ತಿದೆ. ಇದೀಗ ಇಂಗ್ಲೆಂಡ್ ತಂಡದ ಮಾಜಿ ಕ್ಯಾಪ್ಟನ್ ಮೈಕ್ ವಾನ್ ಅವರು ಐಪಿಎಲ್ ಟೀಮ್ ನ ಕ್ಯಾಪ್ಟನ್ ಗಳ ಬಗ್ಗೆ ಮಾತನಾಡಿದ್ದಾರೆ. ಐಪಿಎಲ್ ನ ಎಲ್ಲಾ ತಂಡಗಳಲ್ಲಿ ಅತ್ಯುತ್ತಮವಾದ ಕ್ಯಾಪ್ಟನ್  ಯಾರು ಎನ್ನುವುದನ್ನು ಮೈಕಲ್ ವಾನ್ ಅವರು ತಿಳಿಸಿದ್ದು, ನಮ್ಮ ಆರ್.ಸಿ.ಬಿ ತಂಡದ ಕ್ಯಾಪ್ಟನ್ ಆಗಿರುವ ಫಾಫ್ ಡು ಪ್ಲೆಸಿಸ್ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಇದರಿಂದ ಆರ್.ಸಿ.ಬಿ ಅಭಿಮಾಮಿಗಳಿಗೆ ಸಂತೋಷವಾಗಿದೆ. ಎಸ್.ಆರ್.ಹೆಚ್ ತಂಡದ ವಿರುದ್ಧ ಆರ್.ಸಿ.ಬಿ ತಂಡ ಗೆದ್ದ ನಂತರ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಮೈಕಲ್ ವಾನ್.

“ಆರ್.ಸಿ.ಬಿ ತಂಡಕ್ಕೆ ಕಪ್ ಗೆಲ್ಲುವ ಅವಕಾಶ ಇದೆ. ಫಾಫ್ ಡು ಪ್ಲೆಸಿಸ್ ಅವರು ಸಿ.ಎಸ್.ಕೆ ತಂಡದಲ್ಲಿದ್ದಾಗ, ಸಿ.ಎಸ್.ಕೆ ತಂಡ ಕಪ್ ಗೆಲ್ಲುವ ಹಾಗೆ ಮಾಡಿದ್ದರು. ಅದೇ ರೀತಿ ಕ್ಯಾಪ್ಟನ್ ಆಗಿ ಆರ್.ಸಿ.ಬಿ ತಂಡವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಫಾಫ್ ಅವರು ಅತ್ಯುತ್ತಮವಾದ ನಾಯಕ ಎನ್ನುವುದು ನನ್ನ ಭಾವನೆ, ಅವರು ಅದ್ಭುತವಾದ ಚಿಂತಕ ಸಹ ಹೌದು. ಬ್ಯಾಟರ್ ಗೆ ಮೈದಾನಕ್ಕೆ ಬಂದಾಗ ಮತ್ತು ನಾಯಕನಾಗಿ ಮೈದಾನಕ್ಕೆ ಬಂದಾಗ ಅವರು ಎಂತಹ ಅದ್ಭುತವಾದ ಚಿಂತಕ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ನಾಯಕನಾಗಿ ಅವರು ಇರುವ ರೀತಿ ಮತ್ತು ತಂಡವನ್ನು ಮುನ್ನಡೆಸುತ್ತಿರುವ ರೀತಿ ನನಗೆ ತುಂಬಾ ಇಷ್ಟವಾಗಿದೆ . ಆರ್.ಸಿ.ಬಿ ತಂಡದ ಬಳಿ ಈಗ ಒಳ್ಳೆಯ ಅಸ್ತ್ರಗಳಿವೆ. ಹಾಗಾಗಿ ಸಿ.ಎಸ್.ಕೆ ತಂಡಕ್ಕೆ ಕಪ್ ತಂದುಕೊಟ್ಟ ಹಾಗೆ ಫಾಫ್ ಅವರು ಆರ್.ಸಿ.ಬಿ ತಂಡಕ್ಕೂ ಕಪ್ ಗೆಲ್ಲಿಸಿ ಕೊಡಬೇಕು..”ಎಂದಿದ್ದಾರೆ ಮೈಕ್ ವಾನ್.