ನಟಿ ಚೇತನ ರವರ ಕುರಿತು ಮಾತನಾಡಿ ಚಿತ್ರರಂಗದ ಮತ್ತೊಂದು ಮುಖ ತೆರೆದಿಟ್ಟ ರಮ್ಯಾ, ಸ್ವತಃ ರಮ್ಯಾ ಎದುರಿಸಿದ್ದು ಏನು ಗೊತ್ತೇ??

ಕಿರುತೆರೆ ನಟಿ ಚೇತನಾ ರಾಜ್ ಅವರು ಇನ್ನಿಲ್ಲವಾದ ಸುದ್ದಿ ನಿಜಕ್ಕೂ ಕನ್ನಡ ಸಿನಿಲೋಕ ಮತ್ತು ಕಿರುತೆರೆ ಪ್ರಪಂಚ ಎರಡಕ್ಕೂ ದೊಡ್ಡ ಶಾಕ್ ನೀಡಿತು. ಈ ಬಣ್ಣದ ಲೋಕದಲ್ಲಿ ಹುಡುಗಿಯರು ಹೀಗೆ ಇರಬೇಕು, ಹಾಗೆ ಇರಬೇಕು, ಸಣ್ಣಗೆ ಇರಬೇಕು ಎನ್ನುವ ನಿರ್ಬಂಧನೆ ಹಾಕಿ, ಅದರಿಂದ ನಾಯಕಿಯರನ್ನು ಅಳೆಯಲಾಗುತ್ತಿದೆ. ಚಿತ್ರರಂಗದಲ್ಲಿ ಬಹಳ ದಿನಗಳ ಕಾಲ ಉಳಿಯಬೇಕು, ಸಾಧಿಸಬೇಕು ಎಂದುಕೊಂಡಿದ್ದರು. ಆದರೆ ಸಣ್ಣ ಆಗಬೇಕು ಎನ್ನುವ ಆಸೆಯಿಂದ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳುವ ಭರದಲ್ಲಿ ಈ ಯುವನಟಿ ಪ್ರಾಣವನ್ನೇ ಕಳೆದುಕೊಳ್ಳುವ ಹಾಗೆ ಆಯಿತು. ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಈ ಘಟನೆ ಬಗ್ಗೆ ಮಾತನಾಡಿ, ಚಿತ್ರರಂಗದಲ್ಲಿ ಹೆಣ್ಣಿಗೆ ಆಗುವ ಕಷ್ಟವನ್ನು ಬಿಚ್ಚಿಟ್ಟಿದ್ದಾರೆ..

ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ನಟಿ ರಮ್ಯಾ ಅವರು ಚೇತನಾ ರಾಜ್ ಅವರ ಅಗಲಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವಾಗ ಯುವನಟಿ ಪ್ರಾಣ ಕಳೆದುಕೊಂಡ ವಿಷಯ ಕೇಳಿ ಮನಸ್ಸಿಗೆ ತುಂಬಾ ಬೇಸರ ಆಯಿತು. ಈ ಇಂಡಸ್ಟ್ರಿಯಲ್ಲಿ ಹೆಣ್ಣು ಮಕ್ಕಳು ಹೀಗೆ ಇರಬೇಕು ಒಂದು ಸ್ಟ್ಯಾಂಡರ್ಡ್ ಹಾಕಿದ್ದಾರೆ. ಇದೇ ರೀತಿ ಕಾಣಿಸಬೇಕು ಎಂದು ನಾಯಕಿಯ ಮೇಲೆ ಪ್ರೆಶರ್ ಹಾಕುತ್ತಾರೆ. ಕಾಲಿನ ಟ್ಯೂಮರ್ ತೆಗೆಸಿದ ಮೇಲೆ ನನ್ನ ದೇಹದ ತೂಕ ಸಹ ಹೆಚ್ಚಾಯಿತು. ಈಗ ನಾನು ಕೂಡ ವೇಟ್ ಲಾಸ್ ಜರ್ನಿಯಲ್ಲಿದ್ದೇನೆ. ಪ್ರಾಣ ಕಳೆದುಕೊಂಡ ಹುಡುಗಿಯ ಬಗ್ಗೆ ನನಗೂ ದುಃಖ ಇದೆ. ಆದರೆ ಹಣ್ಣು ಯಾವತ್ತಿಗೂ ಈ ಪ್ರಪಂಚ ತನ್ನನ್ನು ಡಿಕ್ಟೇಟ್ ಮಾಡುವ ಹಾಗೆ ಮಾಡಿಕೊಳ್ಳಬಾರದು.

ಚಿತ್ರರಂಗ ಕೂಡ ಹೆಣ್ಣಿಗೆ ಒಳ್ಳೆಯ ರೋಲ್ ಗಳನ್ನು ಕೊಡಬೇಕು. ರೂಲ್ಸ್ ಗಳನ್ನು ಬದಲಾವಣೆ ಮಾಡುವ ಸಮಯ ಇದು. ಒಬ್ಬ ನಾಯಕನ ತಲೆಯಲ್ಲಿರುವ ಎಲ್ಲಾ ಕೂದಲುಗಳು ಉದುರಿಹೋಗಿ, ಆತನ ಒಂದೊಂದು ಕೆನ್ನೆ 5ಕೆಜಿ ಇದ್ದರೂ, 65 ವರ್ಷವಾಗಿದ್ದರೂ ಆತ ಹೀರೋ ಹೀರೋ ಆಗಿ ನಟಿಸುತ್ತಾನೆ. ನಾಯಕಿಯರ ವಿಚಾರದಲ್ಲಿ ಹೀಗಿಲ್ಲ. ಅದೇ ಒಬ್ಬ ನಾಯಕಿಯ ದೇಹದ ತೂಕ ಹೆಚ್ಚಾದರೆ, ಆಕೆಯನ್ನು ಆಂಟಿ, ಬುಡ್ಡಿ, ಅಜ್ಜಿ ಎಂದೆಲ್ಲಾ ಕರೆಯುತ್ತಾರೆ. ಎಲ್ಲಾ ಹೆಣ್ಣು ಜೊತೆಯಾಗಿ ಇದರ ಬಗ್ಗೆ ಹೋರಾಡಬೇಕು. ನಿಜವಾದ ಹೀರೋ ಅಂದ್ರೆ, ಹೆಣ್ಣಿನ ಜೊತೆ ನಿಂತು ಈ ತಾರತಮ್ಯದ ವಿರುದ್ಧ ಹೋರಾಡುವವನು..” ಎಂದು ಹೇಳುವ ಮೂಲಕ, ಚಿತ್ರರಂಗದ ಕರಾಳ ಸತ್ಯವನ್ನು ಬಚ್ಚಿಟ್ಟಿದ್ದಾರೆ ನಟಿ ರಮ್ಯಾ.