ದಕ್ಷಿಣ ಆಫ್ರಿಕಾ ಸರಣಿಗೆ ದ್ರಾವಿಡ್ ರವರಿಂದ ನಡೆಯುತ್ತಿದೆ ಮಾಸ್ಟರ್ ಪ್ಲಾನ್, ವಿರಾಟ್, ರೋಹಿತ್ ರಾಹುಲ್ ಹೊರಗಿಟ್ಟು ರಚಿಸಲಿರುವ ತಂಡ ಹೇಗಿರಲಿದೆ ಗೊತ್ತೇ??

ಐಪಿಎಲ್ ಪಂದ್ಯಗಳು ಇನ್ನೇನು ಮುಗಿಯಲಿವೆ. ಈ ಬಾರಿ ಐಪಿಎಲ್ ನಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾಗಿರುವ ವಿರಾಟ್ ಕೋಹ್ಲಿ, ರೋಹಿತ್ ಶರ್ಮಾ ಹಾಗೂ ಇನ್ನು ಕೆಲವು ಆಟಗಾರರು ಫಾರ್ಮ್ ಕಳೆದುಕೊಂಡು ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ಐಪಿಎಲ್ ಮುಗಿದ ಕೂಡಲೇ ಭಾರತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಪಂದ್ಯಗಳು ನಡೆಯಲಿದ್ದು, ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಫಾರ್ಮ್ ಕಳೆದುಕೊಂಡಿರುವ ಕಾರಣ. ಅವರಿಗೆ ವಿಶ್ರಾಂತಿ ನೀಡಿ, ಹೊಸ ತಂಡ ರಚಿಸಲಿದೆ ಬಿಸಿಸಿಐ. ಬಿಸಿಸಿಐ ನ ಟೀಮ್ ನ ಈ ನಿರ್ಧಾರ ಕೆಲವು ಸ್ಟಾರ್ ಕ್ರಿಕೆಟರ್ ಗಳ ಅಭಿಮಾನಿಗಳಿಗೆ ಬೇಸರ ತರುವುದು ಖಂಡಿತ..

ಈ ಬಾರಿ ಬಿಸಿಸಿಐ ನವರು ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಕ್ರಿಕೆಟ್ ಕಿಂಗ್ ಎಂದೇ ಹೆಸರಾಗಿರುವ ವಿರಾಟ್ ಕೋಹ್ಲಿ ಅವರಿಗೆ ಟಿ20 ಪಂದ್ಯಗಳಿಂದ ವಿಶ್ರಾಂತಿ ನೀಡಲು ನಿರ್ಧರಿಸಿದೆ. ಇವರಿಬ್ಬರೇ ಅಲ್ಲದೆ, ಜಸ್ಪ್ರೀತ್ ಬುಮ್ರ, ಕೆ.ಎಲ್.ರಾಹುಲ್ ಅವರಿಗೂ ಸಹ ವಿಶ್ರಾಂತಿ ನೀಡಲಿದೆ ಬಿಸಿಸಿಐ. ಈ ಸ್ಟಾರ್ ಆಟಗಾರರು ಟೀಮ್ ನಲ್ಲಿಲ್ಲದೆ ಪಂದ್ಯ ನಡೆಯುವುದು ನಿಜಕ್ಕೂ ಅವರ ಅಭಿಮಾನಿಗಳಿಗೆ ಬೇಸರ ತರುವುದು ಖಂಡಿತ. ಇನ್ನು ರೋಹಿತ್ ಶರ್ಮಾ ಅವರಿಲ್ಲದೆ ತಂಡವನ್ನು ಮುನ್ನಡೆಸುವವರು ಯಾರು ಎನ್ನುವ ಪ್ರಶ್ನೆ ಸಹ ಈಗ ಎದುರಾಗಿದೆ. ಇದಕ್ಕೂ ಉತ್ತರ ಸಿಕ್ಕಿದ್ದು, ಈ ವರ್ಷದ ಐಪಿಎಲ್ ನಲ್ಲಿ ಟಾಪ್ ಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ತಂಡವನ್ನು ಕ್ಯಾಪ್ಟನ್ ಆಗಿ ಮುನ್ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ ಅವರು ಈ ವಿಶ್ವಕಪ್ ಸರಣಿಯ ಕ್ಯಾಪ್ಟನ್ ಆಗಬಹುದು ಎನ್ನಲಾಗುತ್ತಿದೆ.

ಇಲ್ಲದೆ ಹೋದರೆ, ಹಿರಿಯ ಆಟಗಾರ ಶಿಖರ್ ಧವನ್ ಅವರಿಗೆ ಕ್ಯಾಪ್ಟನ್ಸಿ ಸಿಗಬಹುದು ಎನ್ನಲಾಗುತ್ತಿದೆ. ಆದರೆ ಬಿಸಿಸಿಐ ಕಡೆಯಿಂದ ಕ್ಯಾಪ್ಟನ್ ಆಗುವುದು ಯಾರು ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಇನ್ನು ಈ ಬಾರಿ ತಂಡದಲ್ಲಿ ಘಟಾನುಘಟಿಗಳು ಇಲ್ಲದೆ ಇರುವ ಕಾರಣ, ಐಪಿಎಲ್ ಇಂದ ಅದ್ಭುತ ಫಾರ್ಮ್ ನಲ್ಲಿರುವ ಆಟಗಾರರು ಸೆಲೆಕ್ಟ್ ಆಗಲಿದ್ದಾರೆ ಎನ್ನಲಾಗುತ್ತಿದೆ. ಮೋಹಸಿನ್ ಖಾನ್ ಮತ್ತು ಅರ್ಷದೀಪ್ ಅವರು ಟೀಮ್ ಇಂಡಿಯಾ ಸೇರಿಕೊಳ್ಳಬಹುದು ಎನ್ನಲಾಗುತ್ತಿದೆ. ಹಾಗೂ ಉಮ್ರಾನ್ ಮಲಿಕ್ ಸಹ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ, ಆದರೆ ಇವರು ಈಗಲೇ ಟೀಮ್ ಇಂಡಿಯಾ ಸೇರುತ್ತಾರಾ ಎನ್ನುವ ಅನುಮಾನ ಇದೆ. ಇನ್ನು ಈ ಬಾರಿ ಸ್ಟಾರ್ ಸ್ಟಾರ್ ಆಟಗಾರರಿಗೆ ರೆಸ್ಟ್ ಕೊಡಲು ಒಂದು ಮುಖ್ಯಕಾರಣ ಸಹ ಇದೆ. ಮುಂಬರಲಿರುವ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗಬೇಕಿರುವ ಕಾರಣ, ವಿರಾಟ್ ಕೋಹ್ಲಿ, ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ಹಾಗೂ ಜಸ್ಪ್ರೀತ್ ಬುಮ್ರ ಅವರಿಗೆ ವಿಶ್ರಾಂತಿ ನೀಡಲಾಗುತ್ತಿದೆ.