ಈ ಬಾರಿಯ ಐಪಿಎಲ್ ನಲ್ಲಿ ಹಣದ ಹೊಳೆಯೇ ಹರಿದಿದೆ, ಪ್ರತಿ ಪ್ರಶಸ್ತಿಗೆ ಹಾಗೂ ಚಾಂಪಿಯನ್ ತಂಡಕ್ಕೆ ಸಿಕ್ಕ ಹಣವೆಷ್ಟು ಗೊತ್ತೇ?? ಆರ್ಸಿಬಿ ಗೆ ಸಿಕ್ಕಿದ್ದು ಎಷ್ಟು ಕೋಟಿ ಗೊತ್ತೇ??

ನಿನ್ನೆಯ ಐಪಿಎಲ್ ಫಿನಾಲೆ ಪಂದ್ಯದಲ್ಲೊ ಗೆದ್ದಿರುವ ವಿಜೇತ ತಂಡ ಗುಜರಾತ್ ಟೈಟನ್ಸ್, ಐಪಿಎಲ್ ಕಿರೀಟ ಮತ್ತು ಟ್ರೋಫಿಯ ಜೊತೆಗೆ ಹೋಗುವುದರ ಜೊತೆಗೆ, ಕ್ಯಾಶ್ ಪ್ರೈಜ್ ಮತ್ತು ಇನ್ನಿತರ ಬಹುಮಾನಗಳನ್ನು ಸಹ ಗೆಲ್ಲುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ ನ ಹದಿನೈದನೇ ಆವೃತ್ತಿಯ ಕೊನೆಯ ಪಂದ್ಯವು, ಗುಜರಾತ್ ಟೈಟಾನ್ಸ್ ಮತ್ತು ಐಪಿಎಲ್‌ನ ಮೊದಲ ಆವೃತ್ತಿಯ ವಿಜೇತ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ನಡುವೆ ನಡೆದು, ಗುಜರಾತ್ ತಂಡ ಗೆದ್ದಿದೆ. ಜಿಟಿ ಮತ್ತು ಆರ್.ಆರ್ ತಂಡಗಳಿಗೆ ಸಿಗುವ ಪ್ರಶಸ್ತಿ ಮತ್ತು ಪ್ರೈಜ್ ಜೊತೆಗೆ ಬೇರೆ ತಂಡಗಳಿಗೂ ಪ್ರೈಜ್ ಸಿಗಲಿದೆ. ಐಪಿಎಲ್ ಫಿನಾಲೆ ಪಂದ್ಯದ ಅಂತ್ಯದಲ್ಲಿ ನೀಡಲ್ಪಡುವ ಇತರ ಪ್ರಶಸ್ತಿಗಳು ಮತ್ತು ನಗದು ಬಹುಮಾನಗಳ ಪಟ್ಟಿ ಹೀಗಿದೆ..

IPL 2022 ರ ಫೈನಲ್ ನಂತರ ನೀಡಲಾಗುವ ಎಲ್ಲಾ ಪ್ರಶಸ್ತಿಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ…
ಐಪಿಎಲ್‌ನ ಚಾಂಪಿಯನ್ ಆಗುವ ವಿಜೇತ ತಂಡಕ್ಕೆ, BCCI ನಿಂದ ₹20 ಕೋಟಿ ನಗದು ಬಹುಮಾನವನ್ನು ನೀಡಲಾಗುತ್ತದೆ. ಇತರ ಫೈನಲಿಸ್ಟ್ ಎರಡನೇ ಸ್ಥಾನವನ್ನು ಗಳಿಸುವ ತಂಡಕ್ಕೆ BCCI ನಿಂದ ₹13 ಕೋಟಿಯನ್ನು ನೀಡಲಾಗುತ್ತದೆ. ಕ್ವಾಲಿಫೈಯರ್ 2 ನಲ್ಲಿ, ಸೋಲುವ ತಂಡಕ್ಕೆ, ಅಂದರೆ ಈ ವರ್ಷ ನಮ್ಮ ಆರ್.ಸಿ.ಬಿ ತಂಡ ಇದ್ದ ಸ್ಥಾನಕ್ಕೆ BCCI ₹7 ಕೋಟಿ ನಗದು ಬಹುಮಾನವನ್ನು ನೀಡುತ್ತದೆ. ಎಲಿಮಿನೇಟರ್ 1 ಪಂದ್ಯದಲ್ಲಿ ಸೋಲುವ ತಂಡಕ್ಕೆ, ಅಂದರೆ ಎಲ್.ಎಸ್.ಜಿ ತಂಡಕ್ಕೆ BCCI ₹6.5 ಕೋಟಿ ನಗದು ಬಹುಮಾನವನ್ನು ನೀಡುತ್ತದೆ.

ಆರೆಂಜ್ ಕ್ಯಾಪ್ ಇದು ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ ಗೆ ನೀಡುವ ಪ್ರೈಜ್ ಇದರಲ್ಲಿ, ಬ್ಯಾಟ್ಸ್ಮನ್ ಗೆ ₹15 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ. ಪರ್ಪಲ್ ಕ್ಯಾಪ್ ಇದು ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್ ಗೆ ನೀಡುವ ಪ್ರೈಜ್ ಇದರಲ್ಲಿ ₹15 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ. ಐಪಿಎಲ್‌ ನಲ್ಲಿ ಗರಿಷ್ಠ ಸಿಕ್ಸ್‌ಗಳನ್ನು ಸಿಡಿಸಿದ ಬ್ಯಾಟ್ಸ್ಮನ್ ಗೆ ₹12 ಲಕ್ಷ ನಗದು ಬಹುಮಾನವನ್ನು ನೀಡಲಾಗುತ್ತದೆ. ಸೀಸನ್‌ನ ಗೇಮ್ ಚೇಂಜರ್ ವಿಜೇತರು ₹12 ಲಕ್ಷ ನಗದು ಬಹುಮಾನವನ್ನು ಪಡೆಯುತ್ತಾರೆ.
ಐಪಿಎಲ್ 2022 ರ ಆವೃತ್ತಿಯ ಸೂಪರ್ ಸ್ಟ್ರೈಕರ್ ವಿಜೇತರು ₹15 ಲಕ್ಷ ನಗದು ಬಹುಮಾನವನ್ನು ಪಡೆಯುತ್ತಾರೆ.