ಒಂದು ಕಡೆ ಐಪಿಎಲ್ ಗೆಲ್ಲುತ್ತಿದ್ದಂತೆ ಮತ್ತೊಂದು ಟಾರ್ಗೆಟ್ ಇಟ್ಟುಕೊಂಡ ಹಾರ್ಧಿಕ್ ಪಾಂಡ್ಯ. ಹೊಸ ಟಾರ್ಗೆಟ್ ಏನಂತೆ ಗೊತ್ತೇ??

ಈ ವರ್ಷದ ಐಪಿಎಲ್ ಟ್ರೋಫಿಯನ್ನು ಗುಜರಾತ್ ಟೈಟನ್ಸ್ ತಂಡ ಮುಡಿಗೇರಿಸಿಕೊಂಡಿದೆ. ಗುಜರಾತ್ ತಬ್ಬ ಇದೇ ಮೊದಲ ಬಾರಿಗೆ ಐಪಿಎಲ್ ಪ್ರವೇಶ ಪಡೆದಿದೆ. ಆರಂಭದ ವರ್ಷದಲ್ಲೇ ಗುಜರಾತ್ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ, ಐಪಿಎಲ್ ಟ್ರೋಫಿಯನ್ನು ಗೆದ್ದಿದೆ. ಗುಜರಾತ್ ಟೈಟನ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದು ಹಾರ್ದಿಕ್ ಪಾಂಡ್ಯ. ಪಾಂಡ್ಯ ಅವರ ಈ ಜರ್ನಿ ಸುಲಭವಾಗಿರಲಿಲ್ಲ. ಇಂಜೂರಿ ಕಾರಣದಿಂದ ಟೀಮ್ ಇಂಡಿಯಾ ಇಂದ ಹೊರಬಂದಿದ್ದ ಪಾಂಡ್ಯ, ಕಂಬ್ಯಾಕ್ ಮಾಡಿದ್ದು ಐಪಿಎಲ್. ಮೊದಲಿಗೆ ಗುಜರಾತ್ ತಂಡದ ಕ್ಯಾಪ್ಟನ್ ಆಗಿ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡಿದಾಗ, ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಅದೆಲ್ಲವನ್ನು ಮೀರಿ, ಇಂದು ಐಪಿಎಲ್ ಟ್ರೋಫಿ ಗೆದ್ದು, ಗೆಲುವಿನ ನಗೆ ಬೀರಿದ್ದಾರೆ.. ಜೊತೆಗೆ ತಮ್ಮ ಮುಂದಿನ ದೊಡ್ಡ ಕನಸಿನ ಬಗ್ಗೆ ತಿಳಿಸಿದ್ದಾರೆ ಹಾರ್ದಿಕ್ ಪಾಂಡ್ಯ..

ಹಾರ್ದಿಕ್ ಪಾಂಡ್ಯ ಅವರು ಇದೇ ಮೊದಲ ಬಾರಿಗೆ ಕ್ಯಾಪ್ಟನ್ ಆಗಿ ಒಂದು ತಂಡವನ್ನು ಮುನ್ನಡೆಸಿದ್ದಾರೆ. ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಪೂರೈಸಿ, ಇಂದು ಟ್ರೋಫಿ ಗೆದ್ದಿದ್ದಾರೆ. ಈ ವರ್ಷ ಆಲ್ ರೌಂಡರ್ ಆಗಿರುವ ಹಾರ್ದಿಕ್ ಪಾಂಡ್ಯ ಅವರು, ಶೇ.44 ರಲ್ಲಿ ಸುಮಾರು 487 ರನ್ ಗಳಿಸಿ, 8 ವಿಕೆಟ್ ಗಳನ್ನು ಪಡೆದರು. ನಿನ್ನೆ ಟ್ರೋಫಿ ಗೆದ್ದ ಬಳಿಕ ಹಾರ್ದಿಕ್ ಪಾಂಡ್ಯ ಅವರು ಮಾತನಾಡಿದ್ದು ಹೀಗೆ.. “ಏನೇ ಸಂಭವಿಸಿದರೂ ಭಾರತಕ್ಕೆ ವಿಶ್ವಕಪ್ ತಂದುಕೊಡಲು, ನನ್ನಲ್ಲಿರುವ ಎಲ್ಲವನ್ನೂ ನಾನು ಕೊಡುತ್ತೇನೆ. ನಾನು ಯಾವಾಗಲೂ ತಂಡಕ್ಕೆ ಮೊದಲ ಸ್ಥಾನ ನೀಡುವಂತಹ ವ್ಯಕ್ತಿಯಾಗಿದ್ದೇನೆ. ಆದ್ದರಿಂದ ನನ್ನ ತಂಡವು ಅದನ್ನು ಹೆಚ್ಚು ಪಡೆಯುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ನನ್ನ ಗುರಿ ಆಗಿರುತ್ತದೆ. ನಾನು ಎಷ್ಟೇ ಪಂದ್ಯಗಳನ್ನು ಆಡಿದ್ದರೂ ಭಾರತಕ್ಕಾಗಿ ಆಡುವುದು ಯಾವಾಗಲೂ ಒಂದು ರೀತಿಯ ಕನಸು, ಅದು ಈಗ ನನಸಾಗಿದೆ..ದೇಶವನ್ನು ಪ್ರತಿನಿಧಿಸುವುದು ನನಗೆ ಯಾವಾಗಲೂ ಸಂತೋಷ ತರುತ್ತದೆ. ನನಗೆ ಸಿಕ್ಕಿರುವ ಪ್ರೀತಿ ಮತ್ತು ಬೆಂಬಲವು ಮುಖ್ಯವಾಗಿ ಭಾರತೀಯ ತಂಡದ ದೃಷ್ಟಿಕೋನದಿಂದ ಬಂದಿದೆ. ಆದ್ದರಿಂದ ದೀರ್ಘಾವಧಿ, ಅಲ್ಪಾವಧಿ ಎರಡರ ಬಗ್ಗೆಯೂ ಒಂದು ಗುರಿ ಇದೆ ನಾನು ಗೆಲ್ಲಲು ಬಯಸುತ್ತೇನೆ.. ಏನೇ ನಡೆದರು ವಿಶ್ವಕಪ್ ಗೆಲ್ಲುತ್ತೇನೆ..” ಎನ್ನುವ ವಿಶ್ವಾಸದ ಮಾತುಗಳನ್ನಾಡಿದ್ದಾರೆ ಹಾರ್ದಿಕ್ ಪಾಂಡ್ಯ.

ಜೂನ್ 9 ರಿಂದ ಭಾರತದಲ್ಲಿ ಶುರುವಾಗಲಿರುವ, ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್ ಸರಣಿ ಪಂದ್ಯಗಳಿಗೆ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆಗಿದ್ದು, ಇದೀಗ ವಿಶ್ವಕಪ್ ಅನ್ನು ಮನೆಗೆ ತರುವ ಭರವಸೆ ನೀಡಿದ್ದಾರೆ. 28 ವರ್ಷದ ಈ ಯುವ ಆಟಗಾರನ ಆತ್ಮವಿಶ್ವಾಸ ಹೀಗೆ ಇರಲಿ, ಭಾರತಕ್ಕೆ ವಿಶ್ವಕಪ್ ಬರಲಿ ಎನ್ನುವುದು ಎಲ್ಲರ ಆಸೆ. ಇದೇ ಸಮಯದಲ್ಲಿ ತಮ್ಮ ಕುಟುಂಬದ ಬಗ್ಗೆ ಮಾತನಾಡಿರುವ ಹಾರ್ದಿಕ ಪಾಂಡ್ಯ, “ನನ್ನ ಪತ್ನಿ ತುಂಬಾ ಭಾವುಕಳಾದವಳು, ನಾನು ಚೆನ್ನಾಗಿ ಮಾಡುತ್ತಿರುವುದನ್ನು ನೋಡಿದಾಗ ಅವಳು ತುಂಬಾ ಸಂತೋಷಪಡುತ್ತಾಳೆ. ನಾನು ಬಹಳಷ್ಟು ನೋವಿನ ವಿಚಾರ ಅನುಭವಿಸುವುದನ್ನು ಅವಳು ನೋಡಿದ್ದಾಳೆ. ನಾನು ಪ್ರಾಮಾಣಿಕವಾಗಿ ಕಷ್ಟಪಟ್ಟು ಕೆಲಸ ಮಾಡಿದ್ದೇನೆ, ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ತೆರೆಮರೆಯಲ್ಲಿ ಎಷ್ಟು ನಡೆಯುತ್ತದೆ ಎಂದು ಆಕೆಗೆ ತಿಳಿದಿದೆ. ಮತ್ತು ನನ್ನ ಕುಟುಂಬ ಯಾವಾಗಲೂ ನನ್ನ ಪಾಲಿನ ಬಲವಾದ ಆಧಾರಸ್ತಂಭವಾಗಿದೆ. ನನ್ನ ಸಹೋದರ ಕೃನಾಲ್, ನನ್ನ ಅತ್ತಿಗೆ ಪಂಖೂರಿ, ನನ್ನ ಇನ್ನೊಬ್ಬ ಸಹೋದರ ವೈಭವ್ ಮತ್ತು ನನ್ನ ಪ್ರಯಾಣದ ಭಾಗವಾಗಿರುವ ಬಹಳಷ್ಟು ಜನರು. ನನ್ನ ಹೆಂಡತಿ, ನನ್ನ ಮಗ, ಅವರು ನಾನು ಅತ್ಯುತ್ತಮ ಮನಸ್ಸಿನ ಚೌಕಟ್ಟಿನಲ್ಲಿ ಇರುವುದನ್ನು ನನಗೆ ಸಂತೋಷವಾಗಿದೆ..”