ಇಡೀ ದೇಶದ ಜನರ ಮನಗೆದ್ದಿರುವ ಕರುನಾಡಿನ ಕುವರಿ ರಶ್ಮಿಕಾ ರವರು ಇಷ್ಟು ಬೇಗ ಸಂಪಾದನೆ ಮಾಡಿರುವ ಆಸ್ತಿ ಎಷ್ಟು ಗೊತ್ತೇ?? ಒಟ್ಟು ಮೌಲ್ಯ ಕೇಳಿದರೆ ನಿಜಕ್ಕೂ ದಂಗಾಗ್ತೀರಾ..

ಪ್ರಸ್ತುತ ಕನ್ನಡ ಬ್ಯೂಟಿ ರಶ್ಮಿಕಾ ಮಂದಣ್ಣ ಅವರು ಇರುವಷ್ಟು ಬ್ಯುಸಿಯಾಗಿ ಮತ್ತೊಬ್ಬ ಹೀರೋಯಿನ್ ಇರಲು ಸಾಧ್ಯವಿಲ್ಲ ಎಂದರೆ ತಪ್ಪಾಗುವುದಿಲ್ಲ. ತೆಲುಗಿನಲ್ಲಿ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಮತ್ತೊಂದು ಕಡೆ ಬಾಲಿವುಡ್ ನಲ್ಲಿ ನಾಲ್ಕು ಬಿಗ್ ಬಜೆಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಸಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ರಶ್ಮಿಕಾ ಅವರು ಹೈದರಾಬಾದ್, ಮುಂಬೈ, ಚೆನ್ನೈ ಎಂದು ಓಡಾಡುತ್ತಿದ್ದಾರೆ. ಈಗಾಗಲೇ ಬಾಲಿವುಡ್ ನಲ್ಲಿ ರಶ್ಮಿಕಾ ಅಭಿನಯದ ಮಿಷನ್ ಮಜ್ನು, ಮತ್ತು ಗುಡ್ ಬೈ ಸಿನಿಮಾ ಚಿತ್ರೀಕರಣವಾಗಿ ಬಿಡುಗಡೆಯಾಗಲು ಸಿದ್ಧವಾಗಿದೆ. ಇದನ್ನು ಹೊರತುಪಡಿಸಿ, ಹಿಂದಿಯಲ್ಲಿ ರಶ್ಮಿಕಾ ಅಭಿನಯದ ಮತ್ತೆರಡು ಸಿನಿಮಾಗಳು ಚಿತ್ರೀಕರಣ ಹಂತದಲ್ಲಿವೆ, ಅದರಲ್ಲಿ ಒಂದು ರಣಬೀರ್ ಕಪೂರ್ ಅವರೊಡನೆ ನಟಿಸಿರುವ ಅನಿಮಲ್ ಸಿನಿಮಾ, ಇದನ್ನು ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಇನ್ನು ತೆಲುಗಿನಲ್ಲಿ ಪುಷ್ಪ ಸಿನಿಮಾ ಸೀಕ್ವೆಲ್ ನಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ರಶ್ಮಿಕಾ ಅವರಿಗೆ, ಪ್ಯಾನ್ ಇಂಡಿಯಾ ರೇಂಜ್ ನಲ್ಲಿ ಜನಪ್ರಿಯತೆ ಮತ್ತು ಜನಮನ್ನಣೆ ಸಿಕ್ಕಿದೆ. ಹಾಗೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ರಶ್ಮಿಕಾ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಬಾಲಿವುಡ್ ನಲ್ಲೂ ಇವರ ಮೇಲಿರುವ ಕ್ರೇಜ್ ಹೆಚ್ಚಾಗಿದೆ. ಪುಷ್ಪ ಸಿನಿಮಾ ಇಂದ ರಶ್ಮಿಕಾ ಅವರಿಗೆ ಸಿಕ್ಕಿರುವ ಪ್ಯಾನ್ ಇಂಡಿಯಾ ಕ್ರೇಜ್, ಪ್ರಸ್ತುತ ಅವರಿಗೆ ಸಾಲು ಸಾಲು ಅವಕಾಶಗಳನ್ನು ತಂದು ಕೊಡುತ್ತಿದೆ. ಖ್ಯಾತ ನಟ ದಳಪತಿ ವಿಜಯ್ ಅವರ 66ನೇ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ರಶ್ಮಿಕಾ. ರಶ್ಮಿಕಾ ಕೈಯಲ್ಲಿ ಈಗ ದೊಡ್ಡ ದೊಡ್ಡ ಅವಕಾಶಗಳೇ ಇವೆ. ರಶ್ಮಿಕಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ಕೆಲವು ವರ್ಷಗಳಲ್ಲೇ ಭರ್ಜರಿಯಾಗಿ ಹಣ ಗಳಿಸಿದ್ದಾರೆ.

6 ವರ್ಷಗಳ ಸಿನಿಜರ್ನಿಯಲ್ಲಿ 40 ಕೋಟಿಗಿಂತ ಹೆಚ್ಚು ಹಣ ಗಳಿಸಿದ್ದಾರೆ ರಶ್ಮಿಕಾ ಎನ್ನಲಾಗುತ್ತಿದೆ. ಇನ್ನು ರಶ್ಮಿಕಾ ಅವರು ಒಂದು ಸಿನಿಮಾಗೆ 4 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನುವ ಮಾಹಿತಿ ಇದೆ. ರಶ್ಮಿಕಾ ಅಭಿನಯದ ಬಹುತೇಕೆ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಹಾಗಾಗಿ ರಶ್ಮಿಕಾ ಅವರ ಸಂಭಾವನೆ ಏರಿಕೆಯಾಗುತ್ತಿದೆ. ರಶ್ಮಿಕಾ ಅವರು ಅನೇಕ ಬ್ರ್ಯಾಂಡ್ ಎಂಡೋರ್ಸ್ಮೆಂಟ್ ಗಳಲ್ಲಿ ಸಹ ಕಾಣಿಸಿಕೊಳ್ಳುತ್ತಿರುವುದರಿಂದ ರಶ್ಮಿಕಾ ಅವರ ವಾರ್ಷಿಕ ಆದಾಯ ಹೆಚ್ಚಾಗಿದೆ. ಜೊತೆಗೆ ಸಿನಿಮಾ ಅವಕಾಶಗಳು ಸಹ ಹೆಚ್ಚುತ್ತಿವೆ. ಜ್ಯೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ಅವರ ಸಿನಿಮಾಗು ರಶ್ಮಿಕಾ ನಾಯಕಿಯಾಗುತ್ತಾರೆ ಎನ್ನಲಾಗುತ್ತಿದೆ.